Drone Prathap Health Issue : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರಲ್ಲಿ ಅನೇಕ ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಬಿಗ್‌ ಬಾಸ್‌ ಮೇಲೆ ಹಿಂದೆಂದೂ ಕೇಳಿ ಬರದ ಆರೋಪಗಳು ಸಹ ಈ ಬಾರಿ ಸದ್ದು ಮಾಡಿವೆ. ಹಲವು ಬೆಳವಣಿಗೆಗಳಿಗೆ ಸಾಕ್ಷಿಯಾಗಿರುವ ಬಿಗ್‌ ಬಾಸ್‌ ಕನ್ನಡ 10 ರಲ್ಲಿ ಸುದೀಪ ತಮ್ಮ ಕೈಲಾದಷ್ಟು ವಿಚಾರಗಳಿಗೆ ಕ್ಲಾರಿಟಿ ನೀಡುತ್ತಲೇ ಬಂದಿದ್ದಾರೆ. ವಾರ ಪೂರ್ತಿ ಏನೇ ನಡೆಯಲಿ, ಬಿಗ್‌ ಬಾಸ್‌ ಮೇಲೆ ಎಷ್ಟೇ ಆಪಾದನೆ ಬರಲಿ ಎಲ್ಲದಕ್ಕೂ ವೀಕೆಂಡ್‌ನಲ್ಲಿ ಬರುವ ಕಿಚ್ಚ ಸುದೀಪರಿಂದ ಉತ್ತರ ಸಿಗುತ್ತದೆ ಎಂದು ಪ್ರೇಕ್ಷಕರು ಕಾಯುತ್ತಿರುತ್ತಾರೆ.


COMMERCIAL BREAK
SCROLL TO CONTINUE READING

ಬಿಗ್‌ ಬಾಸ್‌ ಮನೆಯಲ್ಲಿ ಈ ವಾರವೂ ಒಂದು ದಿಢೀರ್‌ ಬೆಳವಣಿಗೆ ನಡೆಯಿತು. ಆ ಘಟನೆ ಸುತ್ತ ಹಲವು ರೀತಿಯ ವಿಚಾರಗಳು ಸುತ್ತುತ್ತಿವೆ. ಯಾವುದು ಸತ್ಯ, ಯಾವುದು ಸುಳ್ಳು ಎಂಬ ಕನ್ಫೂಷನ್‌ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಈ ಎಲ್ಲ ಪ್ರಶ್ನೆಗಳಿಗೆ ಕಿಚ್ಚನ ಪಂಚಾಯ್ತಿಯಲ್ಲಿ ಉತ್ತರ ಸಿಗಬಹುದೆಂಬ ನಿರೀಕ್ಷೆಯಲ್ಲಿಯೇ ಬಿಗ್‌ ಬಾಸ್‌ ವೀಕ್ಷಕರು ಕಾಯುತ್ತಿದ್ದಾರೆ. 


ಇದನ್ನೂ ಓದಿ: ಬಿಗ್‌ ಬಾಸ್‌ನಲ್ಲಿ ಕಂಟೆಸ್ಟಂಟ್‌ಗಳ ಈ ಮಾತೇ ಪ್ರತಾಪ್‌ ಮನಸ್ಥಿತಿಯನ್ನ ಕುಗ್ಗಿಸಿತ್ತೇ..! 


ಡ್ರೋನ್‌ ಪ್ರತಾಪ್‌ ಕಳೆದೆರಡು ವಾರಗಳಿಂದ ಸ್ವಲ್ಪ ಸೈಲೆಂಟ್‌ ಆಗಿದ್ದರು. ಮನೆಯಲ್ಲಿ ಈ ಹಿಂದಿನ ದಿನಗಳಲ್ಲಿ ಮಾಡಿದಷ್ಟು ಸದ್ದು ಮಾಡರಿಲಿಲ್ಲ. ಅವರ ಈ ಮೌನ ಅನೇಕ ಪ್ರಶ್ನೆಗಳನ್ನ ಹುಟ್ಟು ಹಾಕಿತ್ತು. ಈ ಬೆನ್ನಲ್ಲೇ ಬಿಗ್‌ ಬಾಸ್‌ ಮನೆಯ ಸ್ಪರ್ಧಿಗಳು ಅವರು ಬೇಗನೆ ಪ್ಯಾನಿಕ್‌ ಆಗ್ತಾರೆ ಎಂದು ಪದೆ ಪದೇ ಹೇಳುತ್ತಿದ್ದರು. ಇದು ಕೂಡ ಪ್ರತಾಪ್‌ ಮನಸ್ಸಿಗೆ ನಾಟಿತ್ತು. ಅದಕ್ಕೂ ಅವರು ಹಲವು ಬಾರಿ ಬೇಸರ ಹೊರಹಾಕಿದ್ದರು. ಫ್ಯಾಮಿಲಿ ಅವರನ್ನ ಮೀಟ್‌ ಆದ ಖುಷಿಯಲ್ಲಿದ್ದ ಪ್ರತಾಪ್‌ಗೆ ಬಿಗ್‌ ಬಾಸ್‌ ಮನೆಗೆ ಬಂದ ಗುರೂಜಿ ಹೇಳಿದ ಮಾತು ಕೂಡ ಘಾಸಿಗೊಳಿಸಿತ್ತು. 


ಇದೆಲ್ಲದರ ಬೆನ್ನಲ್ಲೇ ಡ್ರೋನ್‌ ಪ್ರತಾಪ್‌ ಅದೊಂದು ರಾತ್ರಿ ಮನೆಯಿಂದ ಮಾಯವಾದರು. ಬಿಗ್‌ ಬಾಸ್‌ ವೀಕ್ಷಕರಿಗೆ ಈ ಶಾಕ್‌ ತಡೆದುಕೊಳ್ಳಲು ಆಗಲಿಲ್ಲ. ಅನೇಕರು ಇದನ್ನು ತಮ್ಮ ತಮ್ಮ ಅನಿಸಿಕೆಗೆ ತಕ್ಕಂತೆಯೇ ಬಿಂಬಿಸಿದರು. ಸೋಷಿಯಲ್‌ ಮೀಡಿಯಾ ತುಂಬಾ ಡ್ರೋನ್‌ ಪ್ರತಾಪ್‌ ಆತ್ಮಹತ್ಯೆ ಯತ್ನ ಎಂಬ ಪೋಸ್ಟ್‌ ವೈರಲ್‌ ಆದವು. ಬಿಗ್‌ ಬಾಸ್‌ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪ್ರತಾಪ್‌ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಟ್ರೋಲ್‌ ಮಾಡಲಾಯ್ತು. ಕೆಲವರು ಪ್ರತಾಪ್‌ ಎಲಿಮಿನೇಟ್‌ ಆಗಿದ್ದಾರೆ ಎಂದು ಹೇಳುತ್ತಿದ್ದರು. ಮತ್ತೆ ಕೆಲವು ನೆಟ್ಟಜನ್‌ ಪ್ರತಾಪ್‌ ಗೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ ಎಂದರು. 


ಇದನ್ನೂ ಓದಿ: ಮತ್ತೊಮ್ಮೆ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ ಈ ಸ್ಪರ್ಧಿ.. ಶಾಕ್ ನಲ್ಲಿ ನೆಟ್ಟಿಗರು! 


ಪ್ರತಾಪ್‌ ಮನೆಯಲ್ಲಿ ಕಾಣದೆ ಇರುವ ಸಮಯ ಎಲ್ಲರಲ್ಲೂ ಆತಂಕ ಮೂಡಿಸಿತ್ತು. ಈ ಬೆನ್ನಲ್ಲೇ ವೈದ್ಯರ ಹೇಳಿಕೆಯೊಂದು ಹೊರಬಿದ್ದಿತು. ಪ್ರತಾಪ್‌ ಗೆ ಹೊಟ್ಟೆ ಕೆಟ್ಟಿತ್ತು. ಸರಿಯಾಗಿ ಆಹಾರ ಸೇವಿಸದ ಕಾರಣ ಹೀಗೆ ಆಗಿದೆ. ಲೂಸ್‌ ಮೋಷನ್‌, ವಾಂತಿಯ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವೈದ್ಯರು ಹೇಳಿದರು. ಇಷ್ಟಾದರೂ ಬಿಗ್‌ ಬಾಸ್‌ ವೀಕ್ಷಕರಿಗೆ ಸಮಾಧಾನವಾಗಿಲ್ಲ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.