Bigg Boss: ಇತಿಹಾಸದಲ್ಲೇ ಮೊದಲ ಬಾರಿಗೆ ..ರೈತನ ಮಗ ಬಿಗ್ಬಾಸ್ ವಿನ್ನರ್!
Bigg Boss Winner: ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ನ ಹಿಂದಿನ ಎಲ್ಲಾ ಸೀಸನ್ಗಳಲ್ಲಿ, ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಸೆಲೆಬ್ರಿಟಿಗಳು ಪ್ರಶಸ್ತಿಯನ್ನು ಗೆಲ್ಲುತ್ತಿದ್ದರು. ಆದರೆ ಇದೀಗ ಮೊಟ್ಟ ಮೊದಲ ಬಾರಿಗೆ ಒಬ್ಬ ರೈತನ ಮಗ, ಸಾಮಾನ್ಯ ವ್ಯಕ್ತಿ ಬಿಗ್ಬಾಸ್ ಗೆದ್ದಿದ್ದಾರೆ
Bigg Boss: ಕಿಂಗ್ ನಾಗಾರ್ಜುನ ನಡೆಸಿಕೊಡುತ್ತಿರುವ ಬಿಗ್ ಬಾಸ್ ಸೀಸನ್ 7 ರ ಗ್ರ್ಯಾಂಡ್ ಫಿನಾಲೆಗಾಗಿ ಪ್ರೇಕ್ಷಕರು ಕಾಯುತ್ತಿದ್ದರು.. ಅಂತೂ ಇಂತೂ ಆ ಕ್ಷಣ ಬಂದು ಹೋಯ್ತು.. ಬಿಗ್ ಬಾಸ್ 7 ರ ವಿನ್ನರ್ ಅನೌನ್ಸ್ ಕೂಡಾ ಆಯ್ತು.. ಅದ್ಧೂರಿಯಾಗಿ ಆರಂಭವಾದ ಗ್ರ್ಯಾಂಡ್ ಫಿನಾಲೆ ಸಂಚಿಕೆ ಒಂದು ಹೊಸ ದಾಖಲೆಯನ್ನೇ ಸೃಷ್ಟಿಸಿದೆ..
ಇನ್ನು ಈ ಗ್ರ್ಯಾಂಡ್ ಫಿನಾಲೆ ಸಂಚಿಕೆಯಲ್ಲಿ ಅರ್ಜುನ್, ಪ್ರಶಾಂತ್, ಶಿವಾಜಿ, ಪ್ರಿನ್ಸ್ ಯವರ್, ಅಮರದೀಪ್ ಮತ್ತು ಪ್ರಿಯಾಂಕಾ ವಿನ್ ಆಗೋದಕ್ಕೆ ಪೈಪೋಟಿ ನಡೆಸಿದ್ದರು.. ಆದರೆ ನಾಗಾರ್ಜುನ ಪಲ್ಲವಿ ಪ್ರಶಾಂತ್ ಹೆಸರನ್ನು ಬಿಗ್ ಬಾಸ್ ವಿಜೇತ ಎಂದು ಘೋಷಿಸಿದರು.
ಇದನ್ನೂ ಓದಿ-ಬಿಗ್ ಬಾಸ್ ಮನೆಯಿಂದ ಓಡಿ ಹೋಗೋಣ ಅನಿಸ್ತಿದೆ’: ಕಿಚ್ಚನ ಪಂಚಾಯ್ತಿಯಲ್ಲಿ ಸೇಫ್ ಆದ್ರೂ ಡ್ರೋನ್ ಪ್ರತಾಪ್ ಹೀಗಂದಿದ್ದೇಕೆ?
ಸಾಮಾನ್ಯ ವ್ಯಕ್ತಿಯಾಗಿ ಮುಗ್ಧತೆಯಿಂದ ಮನೆ ಪ್ರವೇಶಿಸಿದ ಪಲ್ಲವಿ ಪ್ರಶಾಂತ್ ಬಿಗ್ ಬಾಸ್ ವಿನ್ನರ್ ಆಗಿ ಗೆದ್ದು ಬಂದರು. ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ದೂರದ ಹಳ್ಳಿಯ ಪಲ್ಲವಿ ಪ್ರಶಾಂತ್ ಬಿಗ್ ಬಾಸ್ ಅವಕಾಶ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ ಅವಕಾಶ ಮಾತ್ರ ಬರದೇ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸಿದ್ದಾರೆ.
ಸಾಮಾನ್ಯ ವ್ಯಕ್ತಿ ಹಾಗೆಯೇ ರೈತನ ಮಗ ಬಿಗ್ ಬಿಗ್ ಬಾಸ್ ಪ್ರಶಸ್ತಿಯನ್ನು ಗೆದ್ದಿರುವುದು ಇದೇ ಮೊದಲು. ವಿನ್ನರ್ ಆಗಿರುವ ಪ್ರಶಾಂತ್ ಅವರಿಗೆ ಬಹುಮಾನದ ಜೊತೆಗೆ ಮಾರುತಿ ಬ್ಲೇಜರ್ ಕಾರು ಮತ್ತು 15 ಲಕ್ಷ ಮೌಲ್ಯದ ಜೋಯಾಲುಕ್ಕಾಸ್ ಚಿನ್ನಾಭರಣವನ್ನು ನೀಡಲಾಗಿದೆ..
ಬಿಗ್ ಬಾಸ್ ಇತಿಹಾಸದಲ್ಲಿ ಪ್ರಶಾಂತ್ ಗೆ ಈ ದಾಖಲೆ ಹೇಗೆ ಸಾಧ್ಯವಾಯಿತು.. ಅನ್ನೋದು ಇದೀಗ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.. ಪ್ರಶಾಂತ್ ಮನೆ ಪ್ರವೇಶಿಸಿದಾಗ ಪ್ರೇಕ್ಷಕರಿಗೆ ಅವರ ಮೇಲೆ ಈ ಮಟ್ಟದ ನಿರೀಕ್ಷೆ ಇರಲಿಲ್ಲ. ಪ್ರಶಾಂತ್ ಎಷ್ಟೋ ಜನರಿಂದ ಎಲಿಮಿನೇಟ್ ಆಗಿಲ್ಲ.. ಟಾಪ್ 5ರೊಳಗೆ ಬರೋ ಸಾಮರ್ಥ್ಯವೂ ಇಲ್ಲ. ಅವರು ಮನೆಯಲ್ಲಿ ಕೆಲವು ವಾರಗಳ ಕಾಲ ಮಾತ್ರ ಇರುತ್ತಾರೆ ಎಂದು ಭಾವಿಸಲಾಗಿತ್ತು.. ಆದರೆ ವಾರ ಕಳೆದಂತೆ ಪ್ರೇಕ್ಷಕರ ಗಮನ ಅವರತ್ತ ಹೆಚ್ಚಾಯಿತು.
ಇದನ್ನೂ ಓದಿ-ಮತ್ತೆ ಮದುವೆಯಾಗ್ತಾರಾ ಸ್ಯಾಮ್? ನೆಟ್ಟಿಗರು ಕೇಳಿದ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಸಮಂತಾ!
ಪ್ರಾರಂಭದಲ್ಲಿ ರಥಿಕಾ ಜೊತೆಗಿನ ಸ್ನೇಹ ಪ್ರಶಾಂತ್ ಗೆ ಜನಪ್ರಿಯತೆ ತಂದುಕೊಟ್ಟಿತ್ತು.... ಮುಗ್ಧನಾಗಿಯೇ ಉಳಿದುಕೊಂಡಿದ್ದ ಪ್ರಶಾಂತ್ ರಥಿಕಾ ಜೊತೆ ಸೇರಿ ರೊಮ್ಯಾಂಟಿಕ್ ಆಗುತ್ತಾನೆ.. ಈ ಎಲ್ಲ ಚೇಷ್ಟೆಗಳು ಪ್ರೇಕ್ಷಕರಿಗೆ ತುಂಬಾ ಇಷ್ಟವಾದವು.. ಇವುಗಳ ಹೊರತಾಗಿ ಪ್ರಶಾಂತ್ ಅನೇಕ ವಿವಾದಗಳಲ್ಲಿ ಭಾಗಿಯಾಗಿರಲಿಲ್ಲ... ಮತ್ತು ತನ್ನ ಮೇಲೆ ನೆಗೆಟಿವಿಟಿ ಬೆಳೆಯುವ ಹಾಗೆ ನಡೆದುಕೊಳ್ಳಲಿಲ್ಲ...
ರೈತನ ಮಗುವಾಗಿ ತನ್ನಂತಹ ಯುವಕರಿಗೆ ಮತ್ತು ರೈತರಿಗೆ ಮಾದರಿಯಾಗಲು ಈ ಮನೆಗೆ ಬಂದಿದ್ದೇನೆ ಎಂದು ಪ್ರಶಾಂತ್ ಆಗಾಗ ನೆನಪಿಸಿಕೊಳ್ಳುತ್ತಿದ್ದರು. ಈ ಅಂಶವೇ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿದ್ದು.. ಆಟವು ಅಂತಿಮ ವಾರಗಳನ್ನು ತಲುಪಿದಾಗ ಅಮರ್, ಶೋಭಾ ಮತ್ತು ಪ್ರಿಯಾಂಕಾ ಹೆಚ್ಚಾಗಿ ಪ್ರಶಾಂತ್ ಅವರನ್ನು ಗುರಿಯಾಗಿಸಿಕೊಂಡರು. ಅಮರ್ ತಾಳ್ಮೆ ಕಳೆದುಕೊಂಡದ್ದು ಮೈನಸ್ ಆಗಿದ್ದು.. ಪ್ರಶಾಂತ್ ಗೆ ಪ್ಲಸ್ ಆಯಿತು. ಜನ ಸಾಮಾನ್ಯರೆಲ್ಲ ಪ್ರಶಾಂತ್ ಗೆ ಮತ ಹಾಕಿದರು...ಒಟ್ಟಿನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ರೈತನ ಮಗ ಪಲ್ಲವಿ ಪ್ರಶಾಂತ್ ಇತಿಹಾಸ ಸೃಷ್ಟಿಸಿದ್ದಾರೆ ಎಂದೇ ಹೇಳಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ