ಬಿಗ್ ಬಾಸ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿ ಇವರೇ ! 3 ದಿನದ ಸಂಭಾವನೆ 2 ಕೋಟಿ ರೂಪಾಯಿ!
Biggboss Highest Paid Cotestant : ಇದೀಗ ಬಿಗ್ ಬಾಸ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯ ಹೆಸರು ಇದೀಗ ಹೊರ ಬಿದ್ದಿದೆ. ಈ ಸ್ಪರ್ಧಿ ಕೇವಲ 3 ದಿನಕ್ಕೆ ಪಡೆದಿರುವ ಸಂಭಾವನೆ 2 ಕೋಟಿ ರೂಪಾಯಿ.
Biggboss Highest Paid Cotestant : ಬಿಗ್ ಬಾಸ್ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಬಹಳ ಸಮಯದಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ರಿಯಾಲಿಟಿ ಶೋ. ಈ ಟಿವಿ ಶೋ ಇದೀಗ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ಈ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಭಾರೀ ಮೊತ್ತವನ್ನು ಪಾವತಿ ಮಾಡಲಾಗುತ್ತದೆ. ಇದೀಗ ಬಿಗ್ ಬಾಸ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯ ಹೆಸರು ಇದೀಗ ಹೊರ ಬಿದ್ದಿದೆ. ಈ ಸ್ಪರ್ಧಿ ಕೇವಲ 3 ದಿನಕ್ಕೆ ಪಡೆದಿರುವ ಸಂಭಾವನೆ 2 ಕೋಟಿ ರೂಪಾಯಿ.
ಮೂರು ದಿನಕ್ಕೆ 2 ಕೋಟಿ :
ಹೌದು, ಖ್ಯಾತ ನಟ, ನಟಿಯರ ಸಂಭಾವನೆ ಸಾಮಾನ್ಯವಾಗಿ ಜಾಸ್ತಿಯಾಗಿಯೇ ಇರುತ್ತದೆ. ಮಾರುಕಟ್ಟೆಯಲ್ಲಿ ಅವರಿಗಿರುವ ಬೇಡಿಕೆಗೆ ಅನುಸಾರವಾಗಿ ಅವರ ಸಂಭಾವನೆ ನಿಗದಿಯಾಗುತ್ತದೆ. ಅದರಂತೆ ಬಿಗ್ ಬಾಸ್ ಸೀಸನ್ 4 ರಲ್ಲಿ ಕಾಣಿಸಿಕೊಂಡಿದ್ದ ಸ್ಪರ್ಧಿ ಇದುವರೆಗೆ ಬಿಗ್ ಬಾಸ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಎನ್ನಲಾಗಿದೆ. ಇವರು ಬಿಗ್ ಬಾಸ್ ಮನೆಯಲ್ಲಿ ಕಾಣಸಿಕೊಂಡಿದ್ದು, ಕೇವಲ 3 ದಿನಗಳವರೆಗೆ ಮಾತ್ರ. ಆ ಮೂರು ದಿನಕ್ಕೆ ಪಡೆದ ಸಂಭಾವನೆ ಎರಡು ಕೋಟಿ.
ಇದನ್ನೂ ಓದಿ :Bigg Boss 10 : ಕಣ್ಣು ಬಿಡೋ ಮುಂಚೆನೆ ಬಿಗ್ ಟ್ವಿಸ್ಟ್.. ಈ ವಾರ ಮತ್ತೊಬ್ಬ ಸ್ಪರ್ಧಿ ಮನೆಯಿಂದ ಔಟ್!
ತನ್ನ ಜೀವನದ ನೋವನ್ನು ಬಿಚ್ಚಿಟ್ಟಿದ್ದ ನಟಿ - ಮಾಡೆಲ್ :
ಹೌದು, ನಾವಿಲ್ಲಿ ಹೇಳುತ್ತಿರುವುದು ಪಮೇಲಾ ಆಂಡರ್ಸನ್ ಬಗ್ಗೆ. ಪಮೇಲಾ ಆಂಡರ್ಸನ್ ಕೆನಡಿಯನ್ -ಅಮೇರಿಕನ್ ನಟಿ ಮತ್ತು ರೂಪದರ್ಶಿ. ಪ್ಲೇಬಾಯ್ ಮ್ಯಾಗಜೀನ್‌ನಲ್ಲಿ ಮಾಡೆಲಿಂಗ್ ಕೆಲಸಕ್ಕಾಗಿ ಮತ್ತು ದೂರದರ್ಶನ ಸರಣಿ ಬೇವಾಚ್‌ನಲ್ಲಿ ಸಿಜೆ ಪಾರ್ಕರ್ ಪಾತ್ರದಿಂದಲೇ ಇವರು ಹೆಸರುವಾಸಿ. ಇವರು ಹಿಂದಿ ಬಿಗ್ ಬಾಸ್ ನ ಸೀಸನ್ 4ರಲ್ಲಿ ಕಾಣಿಸಿಕೊಂಡಿದ್ದರು. ಈ ನಟಿ ಬಾಲ್ಯದಲ್ಲಿಯೇ ಲೈಂಗಿಕ ಕಿರುಕುಳವನ್ನು ಅನುಭವಿಸಿದ್ದರು ಎನ್ನಲಾಗಿದೆ. ಇನ್ನು ತನ್ನ 6 ರಿಂದ 10 ವರ್ಷ ವಯಸ್ಸಿನವರೆಗೆ ಬೇಬಿ ಸೀಟರ್ ನಿಂದಲೇ ಲೈಂಗಿಕ ಕಿರುಕುಳ ಅನುಭವಿಸಿದ್ದ ಬಗ್ಗೆ 2014 ರಲ್ಲಿ ಇವರು ಸಾರ್ವಜನಿಕವಾಗಿಯೇ ಹೇಳಿಕೆ ನೀಡಿದ್ದರು. ಅಲ್ಲದೆ 12 ವರ್ಷದವಳಿದ್ದಾಗ 25 ವರ್ಷದ ಯುವಕನಿಂದ ಅತ್ಯಾಚಾರಕ್ಕೆ ಗುರಿಯಾಗಿರುವ ಬಗ್ಗೆಯೂ ಹೇಳಿಕೊಂಡಿದ್ದರು. ಇನ್ನು ತಾನು 14 ವರ್ಷದವಳಿದ್ದಾಗ ತನ್ನ ಬಾಯ್ ಫ್ರೆಂಡ್ ಮತ್ತು ಆತನ ಆರು ಜನ ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಬಗ್ಗೆಯೂ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.
ಅತಿಥಿಯಾಗಿ ಬಂದಿದ್ದ ಪಮೇಲಾ ಆಂಡರ್ಸನ್ :
ಪಮೇಲಾ ಆಂಡರ್ಸನ್ ಹಿಂದಿ ಬಿಗ್ ಬಾಸ್ ನ ಸೀಸನ್ 4 ರಲ್ಲಿ ಬಿಗ್ ಬಾಸ್ ಮನೆಯೊಳಗೆ ಕಾಣಿಸಿಕೊಂಡಿದ್ದರು. ಈ ನಟಿ 3 ದಿನಗಳ ಕಾಲ ಮನೆಯಲ್ಲಿ ಅತಿಥಿಯಾಗಿ ಉಳಿದುಕೊಂಡಿದ್ದರು. ಈ ಮೂರು ದಿನಗಳಿಗಾಗಿ ಇವರು ಪಡೆದಿದ್ದು 2 ಕೋಟಿ ರೂಪಾಯಿ ಎನ್ನುವ ಮಾಹಿತಿ ಇದೀಗ ಕೇಳಿ ಬಂದಿದೆ.
ಇದನ್ನೂ ಓದಿ : Rajinikanth: ಇದು ರಜನಿ ಅವರ ಕೊನೆಯ ಚಿತ್ರವೇ? ರಹಸ್ಯ ಬಿಚ್ಚಿಟ್ಟ ಖ್ಯಾತ ನಿರ್ದೇಶಕ..!
ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿಗಳು:
ಬಿಗ್ ಬಾಸ್ ಸೀಸನ್ 12 ರಲ್ಲಿ ಎಸ್ ಶ್ರೀಶಾಂತ್ ವಾರಕ್ಕೆ 50 ಲಕ್ಷ ರೂ.ಗಳ ಸಂಭಾವನೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ. ಬಿಗ್ ಬಾಸ್ ಸೀಸನ್ 4 ರಲ್ಲಿ ಕಾಣಿಸಿಕೊಂಡಿದ್ದ ಖಲಿ ಕೂಡಾ ವಾರಕ್ಕೆ 50 ಲಕ್ಷ ರೂ ಪಡೆಯುತ್ತಿದ್ದರು ಎನ್ನಲಾಗಿದೆ. ವರದಿಗಳ ಪ್ರಕಾರ, ಬಿಗ್ ಬಾಸ್ 12 ರಲ್ಲಿ ಕಾಣಿಸಿಕೊಂಡ ಕರಣ್ವೀರ್ ಬೋಹ್ರಾ ವಾರಕ್ಕೆ 20 ಲಕ್ಷ ರೂ. ಪಡೆದರೆ, ಬಿಗ್ ಬಾಸ್ 15 ರ ವಿನ್ನರ್ ತೇಜಸ್ವಿ ಪ್ರಕಾಶ್ ಅವರು ಮನೆಯೊಳಗೆ 17 ವಾರಗಳ ಅವಧಿಗೆ 1.7 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಬಿಗ್ ಬಾಸ್ 13 ರ ವಿಜೇತ ಸಿದ್ಧಾರ್ಥ್ ಶುಕ್ಲಾ ವಾರಕ್ಕೆ 9 ಲಕ್ಷ ರೂ. ಬಿಗ್ ಬಾಸ್ ಸೀಸನ್ 12 ರ ವಿನ್ನರ್ ದೀಪಿಕಾ ಕಕ್ಕರ್ ವಾರಕ್ಕೆ 15 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ.
ಇದನ್ನೂ ಓದಿ : 'ಚಿಕ್ಕಿಯ ಮೂಗುತಿ' ಚಿತ್ರದ ಪವರ್ ಫುಲ್ ಟೀಸರ್ ಬಿಡುಗಡೆ ಮಾಡಿದ ಪವರ್ ಸ್ಟಾರ್ ಪತ್ನಿ ಅಶ್ವಿನಿ ಪುನೀತ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.