Bigg Boss Kannada 10 Captain : ಕನ್ನಡ ಬಿಗ್‌ ಬಾಸ್‌ನಲ್ಲಿ ಮೊದಲ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು ಸ್ಪರ್ಧಿಗಳೆಲ್ಲ ಅದೇ ವಿಚಾರವಾಗಿ ಚರ್ಚಿಸುತ್ತಿದ್ದಾರೆ. ಕೆಲವರಿಗೆ ತಮ್ಮನ್ನು ನಾಮಿನೇಟ್‌ ಮಾಡಲು ಕೊಟ್ಟ ಕಾರಣಗಳ ಬಗ್ಗೆ ಅಸಮಾಧಾನವಿದೆ. ಈ ವಿಚಾರವಾಗಿ ಕೆಲವು ಸ್ಪರ್ಧಿಗಳ ನಡುವೆ ಭಿನ್ನಾಭಿಪ್ರಾಯವೂ ಮೂಡಿದೆ. ಈ ಅಸಮಾಧಾನದ ನಡುವೆಯೇ ಮೊದಲ ಕ್ಯಾಪ್ಟನ್‌ ಆಯ್ಕೆಯೂ ನಡೆಯಿತು. 


COMMERCIAL BREAK
SCROLL TO CONTINUE READING

ಅನಿರೀಕ್ಷಿತ ಸ್ಪರ್ಧಿ ಬಿಗ್‌ ಬಾಸ್‌ 10 ರ ಮೊದಲ ಕ್ಯಾಪ್ಟನ್ ಆಗಿದ್ದಾರೆ. ಈ ಟಾಸ್ಕ್‌ನಲ್ಲಿ ಅಸಮರ್ಥರು ಕ್ಯಾಪ್ಟನ್ಸಿ ಟಾಸ್ಕ್‌ ನಲ್ಲಿ ಸ್ಪರ್ಧಿಸುವಂತಿರಲಿಲ್ಲ. ಆದರೆ ಅವರಿಗೆ ವಿಶೇಷ ಪವರ್‌ ಒಂದನ್ನು ನೀಡಲಾಗಿತ್ತು. ಅದರ ಪ್ರಕಾರ ಸಮರ್ಥರ ತಂಡದಿಂದ ಒಬ್ಬರನ್ನು ಕ್ಯಾಪ್ಟನ್ಸಿ ಟಾಸ್ಕ್‌ ನಲ್ಲಿ ಸ್ಪರ್ಧಿಸದಂತೆ ತಡೆಯುವ ಅಧಿಕಾರ ಅಸಮರ್ಥರಿಗೆ ನೀಡಲಾಗಿತ್ತು. 


ಇದನ್ನೂ ಓದಿ: Bigg Boss 10 : ಡ್ರೋನ್‌ ವಿಚಾರವಾಗಿ ಪ್ರತಾಪ್‌ - ಸ್ನೇಹಿತ್‌ ನಡುವೆ ಬಿಗ್‌ ಫೈಟ್‌.! 


ಪ್ರತಿಯೊಬ್ಬ ಅಸಮರ್ಥರು ತಮಗೆ ಯಾರು ಕ್ಯಾಪ್ಟನ್‌ ಆಗುವುದು ಇಷ್ಟವಿಲ್ಲ ಎಂದು ಹೇಳಬೇಕಿತ್ತು. ಅಲ್ಲದೇ ಅವರ ಕೊರಳಿಗೆ ‘ನಾಲಾಯಕ್’ ಎಂಬ ಪಟ್ಟಿ ಹಾಕುವಂತೆ ಬಿಗ್‌ ಬಾಸ್‌ ಸೂಚಿಸಿದರು.


ಈಶಾನಿ ಕೊರಳಿಗೆ ಸಂತೋಷ್‌ ಹಳ್ಳಿಕಾರ್, ನಮ್ರತಾ ಕೊರಳಿಗೆ ತನಿಷಾ, ಡ್ರೋನ್ ಪ್ರತಾಪ್ ಅವರು ಸ್ನೇಹಿತ್ ಕೊರಳಿಗೆ, ಸಂಗೀತ ಅವರು ವಿನಯ್ ಕೊರಳಿಗೆ, ಈಶಾನಿ ಕೊರಳಿಗೆ ರಕ್ಷಕ್, ತುಕಾಲಿ ಸಂತೋಶ್ ಕೊರಳಿಗೆ ಕಾರ್ತಿಕ್ ನಾಲಾಯಕ್ ಫಲಕ ಹಾಕಿದರು. ಈಶಾನಿ ಕೊರಳಿಗೆ ಎರಡು ನಾಲಾಯಕ್‌ ಫಲಕ ಬಿದ್ದ ಕಾರಣ ನಿಯಮದಂತೆ ಕ್ಯಾಪ್ಟನ್ಸಿ ಟಾಸ್ಕ್‌ಗೆ ಸ್ಪರ್ಧಿಸುವ ಅವಕಾಶ ಕಳೆದುಕೊಂಡರು.


ಇದನ್ನೂ ಓದಿ: ರಕ್ಷಕ್ ಬುಲೆಟ್ ಆ ಒಂದು ಟ್ರೋಲ್‌ನಿಂದ ಬಿಗ್ ಬಾಸ್‌ಗೆ ಬಂದ್ರಾ? 


ಸಮರ್ಥರಲ್ಲಿ ನಾಮಿನೇಟ್ ಆದ ಕೆಲವರ ಜೊತೆ ಈಶಾನಿ ಹೊರತುಪಡಿಸಿ ಏಳು ಮಂದಿ ಬೊಬ್ಬಲ್​ ಗಮ್ ಜಗಿಯುತ್ತಾ ಸಣ್ಣನೆಯ ಹಲಗೆಯ ಮೇಲೆ ನಡೆಯುವ ಟಾಸ್ಕ್​ ಆಡಿದರು. ಅದರಲ್ಲಿ ನಮ್ರತಾ ಗೌಡ, ಸ್ನೇಹಿತ್ ಹಾಗೂ ತುಕಾಲಿ ಸಂತೋಷ್ ಮೊದಲ ಮೂವರಾಗಿ ಟಾಸ್ಕ್ ಮುಗಿಸಿದರು. ಈ ಮೂವರಿಗೆ ಮತ್ತೊಮ್ಮೆ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಯ್ತು. ಮೂವರು ಸಹ ಅಲುಗಾಡುವ ದೊಡ್ಡ ಹಲಗೆಯೊಂದರ ಮೇಲೆ ನಿಂತರು. ತುಕಾಲಿ ಹಾಗೂ ನಮ್ರತಾ ಬೇಗನೇ ಇಳಿದರು, ಸ್ನೇಹಿತ್ ಗಟ್ಟಿಯಾಗಿ ಹಲಗೆಯ ಮೇಲೆ ನಿಂತು ಟಾಸ್ಕ್ ಗೆದ್ದರು. ಈ ಮೂಲಕ ಸ್ನೇಹಿತ್‌ ಮನೆಯ ಮೊದಲ ಕ್ಯಾಪ್ಟನ್‌ ಆದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.