Bigg Boss 10 Elimination : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶುರುವಾಗಿ ನಾಲ್ಕು ದಿನಗಳು ಕಳೆದಿವೆ. ಈಗಾಗಲೇ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಇದರ ಜೊತೆಗೆ ನಾಮಿನೇಟ್‌ ಪ್ರಕ್ರಿಯೆ ಕೂಡ ಮುಗಿದಿದೆ. ಅಲ್ಲದೇ, ಕ್ಯಾಪ್ಟನ್‌ ಆಯ್ಕೆ ಕೂಡ ಆಗಿದೆ. ಈ ಮಧ್ಯೆ ಮೊದಲ ವಾರವೇ ಮನೆ ಹೊತ್ತಿ ಉರಿಯಲು ಆರಂಭಿಸಿದೆ. ಮನೆಗೆ ಇಬ್ಬರ ಅತಿಥಿಗಳು ಬಂದು ಹೋಗಿದ್ದಾರೆ. 


COMMERCIAL BREAK
SCROLL TO CONTINUE READING

ಆಟದ ಮಧ್ಯೆ ಮೊದಲ ವಾರದ ಮುಕ್ತಾಯವೂ ಸನಿಹಗೊಳ್ಳುತ್ತಿದೆ. ವೀಕೆಂಡ್‌ ಹತ್ತಿರವಾಗುತ್ತಿದೆ. ಈ ವಾರದ ಎಲಿಮಿನೇಷನ್‌ಗೆ ದಿನಗಣನೆ ಶುರುವಾಗಿದೆ. ಒಂದೇ ವಾರದಲ್ಲಿ ವೀಕ್ಷಕರ ಮನಗೆದ್ದು ಯಾರು ಸೇಫ್‌ ಆಗಲಿದ್ದಾರೆ. ಯಾರು ಎಲಿಮಿನೇಟ್‌ ಆಗಲಿದ್ದಾರೆ ಎಂಬುದು ಕುತೂಹಲಕರವಾಗಿದೆ. 


ಇದನ್ನೂ ಓದಿ : ರಕ್ಷಕ್ ಬುಲೆಟ್ ಆ ಒಂದು ಟ್ರೋಲ್‌ನಿಂದ ಬಿಗ್ ಬಾಸ್‌ಗೆ ಬಂದ್ರಾ? 


ಈ ವಾರ ಸಮರ್ಥರು ಮತ್ತು ಅಸಮರ್ಥರು ಇಬ್ಬರೂ ನಾಮಿನೇಟ್‌ ಆಗಿದ್ದಾರೆ. ಮೊದಲ ವಾರ ಮೈಕೆಲ್‌, ಡ್ರೋನ್‌ ಪ್ರತಾಪ್‌, ಸ್ನೇಕ್‌ ಶ್ಯಾಮ್‌, ಸಿರಿ, ತನಿಷಾ, ನೀತು, ಕಾರ್ತಿಕ್‌, ವರ್ತೂರ್‌ ಸಂತೋಷ್‌ ಸೇರಿ ಒಟ್ಟು 8 ಜನ ನಾಮಿನೇಟ್‌ ಆಗಿದ್ದಾರೆ. ವೀಕ್ಷಕರ ಮನಗೆಲ್ಲಲು 8 ಜನರೂ ತಮ್ಮ ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ.


ವಾರದ ಕೊನೆಯಲ್ಲಿ ಶನಿವಾರ ಮತ್ತು ಭಾನುವಾರ ಈ ಎಂಟರಲ್ಲಿ ಮೊದಲ ವಾರ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂಬುದು ತಿಳಿಯಲಿದೆ. ಕಡಿಮೆ ಅವಧಿಯಲ್ಲಿ ಯಾರು ವೀಕ್ಷಕರ ಮನಗೆದ್ದು ಅತಿ ಹೆಷ್ಷು ವೋಟ್‌ ಪಡೆದಿದ್ದಾರೆ ಕಾದು ನೋಡಬೇಕಾಗಿದೆ. 


ಇದನ್ನೂ ಓದಿ : ಕನ್ನಡ ಬಿಗ್‌ ಬಾಸ್‌ 10 ರ ಮೊದಲ ಕ್ಯಾಪ್ಟನ್‌ ಇವರೇ..! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.