Bigg Boss Kannada Season 10 : ಕಿರುತೆರೆಯ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಸೀಸನ್‌ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇತ್ತೀಚೆಗೆ ಕಲರ್ಸ್‌ ಕನ್ನಡ ಮತ್ತು ಕಿಚ್ಚ ಸುದೀಪ್‌ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಬಿಗ್‌ ಬಾಸ್‌ ಸೀಸನ್‌ 10 ರ ಬಗ್ಗೆ ಮಾಹಿತಿ ಹಂಚಿಕೊಂಡರು. ಅಕ್ಟೋಬರ್​ 8 ರಿಂದ ಕನ್ನಡ ಬಿಗ್‌ಬಾಸ್‌ ಸೀಸನ್ 10 ಶುರುವಾಗಲಿದೆ. 


COMMERCIAL BREAK
SCROLL TO CONTINUE READING

ಇನ್ನೇನು ಕೆಲವೇ ದಿನಗಳಲ್ಲಿ ಬಿಗ್‌ ಬಾಸ್‌ ಶುರುವಾಗಲಿದ್ದು, ಸಂಭಾವ್ಯ ಸ್ಪರ್ಧಿಗಳ ಪಟ್ಟಿ ವೈರಲ್‌ ಆಗಿದೆ. ಬಿಗ್‌ ಬಾಸ್‌ ಮನೆಗೆ ಈ ಬಾರಿ ಯಾರೆಲ್ಲ ಎಂಟ್ರಿ ಕೊಡ್ತಾರೆ ಎನ್ನುವ ಕುತೂಹಲ ಜನರಲ್ಲಿ ಹೆಚ್ಚಾಗಿ ಕಾಡ್ತಿದೆ. ಬಿಗ್ ಬಾಸ್​ ಮನೆಯಲ್ಲಿ ಎಲ್ಲ ರಂಗದ ಜನರನ್ನು ಕರೆಸಲಾಗುತ್ತದೆ. ತಮಾಷೆ, ತರ್ಲೆ ಮಾಡಲು ಹಾಸ್ಯ ನಟರನ್ನು ಸಹ ಬಿಗ್‌ ಬಾಸ್‌ ಮನೆಯಲ್ಲಿ ಕರೆಸಲಾಗುತ್ತದೆ.  


ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಅಷ್ಟೇ ಬ್ಯೂಟಿಫುಲ್‌ ಅವರ ತಾಯಿ.. ಫೋಟೋ ನೋಡಿ ದೃಷ್ಟಿ ತೆಗೀರಿ ಅಂದ್ರು ನೆಟ್ಟಿಜನ್‌ 


ಬಿಗ್ ಬಾಸ್​ ಕನ್ನಡ ಸೀಸನ್‌ 10 ರಲ್ಲಿ ಈ ಬಾರಿ ಕಾಂತಾರ ಸಿನಿಮಾದ ನಟರೊಬ್ಬರು ಬರಲಿದ್ದಾರೆ ಎನ್ನಲಾಗ್ತಿದೆ. ರಾಂಪಾ ಪಾತ್ರದ ಮೂಲಕ ಫೇಮಸ್ ಆಗಿರುವ ನಟ ಪ್ರಕಾಶ್ ತುಮಿನಾಡು ಈ ಸಲ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ವಾಹಿನಿಯಾಗಲಿ, ನಟ ಪ್ರಕಾಶ್‌ ಆಗಲಿ ದೃಢಪಡಿಸಿಲ್ಲ. 


ಲಕ್ಷಾಂತರ ಪ್ರೇಕ್ಷಕರನನ್ನು ಹೊಂದಿರುವ ಬಿಗ್‌ ಬಾಸ್‌ ಶೋ ನಲ್ಲಿ ಜನರನ್ನು ನಕ್ಕು ನಗಿಸಲು ನಟ ಪ್ರಕಾಶ್ ತುಮಿನಾಡು ​ದೊಡ್ಮನೆಗೆ ಎಂಟ್ರಿ ಕೊಡಬಹುದು ಎನ್ನುವ ಸುದ್ದಿ ಹರಿದಾಡುತ್ತಿದೆ. ಅನೇಕ ಸಿನಿಮಾಗಳಲ್ಲಿನ ಪಾತ್ರದ ಮೂಲಕ ಜನರ ಮನಗೆದ್ದಿದ್ದ ಪ್ರಕಾಶ್‌ ತಮಿನಾಡು, ಕಾಂತಾರ ಸಿನಿಮಾದಲ್ಲಿ ರಾಂಪಾ ಪಾತ್ರದ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದರು. ನಟ ಪ್ರಕಾಶ್​ ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟರೆ ಈ ಬಾರಿಯ ಸೀಸನ್‌ ನಗೆ ಹಬ್ಬವಾಗೋದು ಪಕ್ಕಾ ಎನ್ನುತ್ತಿದ್ದಾರೆ ನೆಟ್ಟಿಜನ್‌. 


ಇದನ್ನೂ ಓದಿ : ಸುದೀಪ್ ಬಿಗ್‌ ಬಾಸ್‌ ಸೀಸನ್ 10 ಬಳಿಕ ನಿರೂಪಣೆಗೆ ಗುಡ್ ಬೈ ಹೇಳ್ತಾರಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.