ಜಗಳ ಆಗದೇ ಇರೋ ಥರ ಆಡೋಕೆ ನೀವೇನು ಉಸ್ತುವಾರಿ ಮಾಡ್ತಿದ್ದಿರಾ?- ಡ್ರೋಣ್ ಪ್ರತಾಪ್ ಹೇಳಿಕೆಗೆ ಕಿಚ್ಚ ಗರಂ
Bigg Boss Kannada Season 10: ಅದ್ಭುತ ವಾಕ್ ಚಾತುರ್ಯತೆ ಹೊಂದಿರುವ ಕಿಚ್ಚ, ವಾರಾಂತ್ಯಕ್ಕೆ ಬರುತ್ತಾರೆ ಅಂದ್ರೆ ಬಿಗ್ ಬಾಸ್ ಅಭಿಮಾನಿಗಳಿಗೆ ಏನೋ ಸಂತೋಷ. ವಾರವಿಡೀ ಯಾರ್ಯಾರು ಏನು ಮಾಡಿದ್ರು? ಯಾವ ತಪ್ಪು ಮಾಡಿದ್ರು? ಯಾವ ಸ್ಪರ್ಧಿ ಉತ್ತಮ ಆಟವಾಡಿದ್ರು ಎಂಬೆಲ್ಲಾ ವಿಚಾರವನ್ನು ಎಳೆಎಳೆಯಾಗಿ ತಿಳಿಸಿಕೊಡುತ್ತಾರೆ ಸುದೀಪ.
Bigg Boss Kannada Season 10: ಬಿಗ್ ಬಾಸ್ ಕನ್ನಡ ಸೀಸನ್ 10ರ ವಾರದ ಪಂಚಾಯಿತಿ ಇಂದು ನಡೆದಿದೆ. ಕಳಪೆ-ಉತ್ತಮ ಹಾಗೂ ಇತರ ಸ್ಪರ್ಧಿಗಳು ವಾರಪೂರ್ತಿ ಏನೆಲ್ಲಾ ಮಾಡಿದ್ರು ಎಂಬೆಲ್ಲಾ ವಿಚಾರ ಬಗ್ಗೆ ಕಿಚ್ಚ ವಾರದ ಸಂಚಿಕೆಯಲ್ಲಿ ತಿಳಿಸಿಕೊಡುತ್ತಾ ಸ್ಪರ್ಧಿಗಳಿಗೆ ಬುದ್ಧಿವಾದ ಹೇಳುತ್ತಾರೆ.
ಇದನ್ನೂ ಓದಿ: “ಈ ಆಟಗಾರ ಭಾರತದಲ್ಲಿರೋದು ಪುಣ್ಯದ ಫಲ-ಹೆಮ್ಮೆಯ ಸಂಗತಿ”: ಮುತ್ತಯ್ಯ ಮುರಳೀಧರನ್ ಹೇಳಿದ್ದು ಯಾರ ಬಗ್ಗೆ?
ಅದ್ಭುತ ವಾಕ್ ಚಾತುರ್ಯತೆ ಹೊಂದಿರುವ ಕಿಚ್ಚ, ವಾರಾಂತ್ಯಕ್ಕೆ ಬರುತ್ತಾರೆ ಅಂದ್ರೆ ಬಿಗ್ ಬಾಸ್ ಅಭಿಮಾನಿಗಳಿಗೆ ಏನೋ ಸಂತೋಷ. ವಾರವಿಡೀ ಯಾರ್ಯಾರು ಏನು ಮಾಡಿದ್ರು? ಯಾವ ತಪ್ಪು ಮಾಡಿದ್ರು? ಯಾವ ಸ್ಪರ್ಧಿ ಉತ್ತಮ ಆಟವಾಡಿದ್ರು ಎಂಬೆಲ್ಲಾ ವಿಚಾರವನ್ನು ಎಳೆಎಳೆಯಾಗಿ ತಿಳಿಸಿಕೊಡುತ್ತಾರೆ ಸುದೀಪ.
ಇಂದು ನಡೆದ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಡ್ರೋಣ್ ಪ್ರತಾಪ್ ನಿರ್ಧಾರಗಳ ಬಗ್ಗೆ ತಿಳಿಹೇಳಿದ್ದಾರೆ. ಓವರ್ ಕಾನ್ಫಿಡೆನ್ಸ್’ನಿಂದ ತಂಡವನ್ನೇ ಸೋಲಿನ ಸುಳಿಗೆ ಸಿಲುಕಿಸಿದ ಪ್ರತಾಪ್ ವಿರುದ್ಧ ಸುದೀಪ್ ಅಸಮಾಧಾನಗೊಂಡಿದ್ದು ಕಂಡುಬಂತು.
ಈ ವಾರ ಬಿಗ್ ಬಾಸ್ ನೀಡಿದ್ದ ಸ್ಪರ್ಧೆಗಳಿಂದ ಕಾರ್ತಿಕ್ ಹಾಗೂ ನಮ್ರತಾರನ್ನು ಪ್ರತಾಪ್ ಹೊರಗಿಟ್ಟಿದ್ದರು. ಈ ನಿರ್ಧಾರದಿಂದ ಇಡೀ ಮನೆ ಶಾಕ್ ಆಗಿದ್ದಲ್ಲದೆ, ಅಸಮಾಧಾನಗೊಂಡಿದ್ದರು. ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ ಎಂಬ ನಂಬಿಕೆಯಿಂದ ಈ ಇಬ್ಬರು ಸ್ಪರ್ಧಿಗಳು ಪ್ರತಾಪ್ ತಂಡಕ್ಕೆ ಸೇರಿದ್ದರು. ಆದರೆ ಓವರ್ ಕಾನ್ಫಿಡೆನ್ಸ್ ಪ್ರದರ್ಶಿಸಿದ ಪ್ರತಾಪ್ ಅವರಿಬ್ಬರನ್ನು ತಂಡದಿಂದ ಹೊರಗಿಟ್ಟರು.
ಈ ವಿಚಾರವನ್ನೇ ಮಾತನಾಡಿದ ಕಿಚ್ಚ, ಡ್ರೋಣ್ ಪ್ರತಾಪ್’ಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ್ರು. ಇದಕ್ಕೆ ಉತ್ತರಿಸಿದ ಪ್ರತಾಪ್. “ಜಗಳಗಳು ಆಗದಂತೆ ನಡೆಸಿಕೊಂಡು ಹೋದೆ ಸರ್” ಎಂದಿದ್ದಾರೆ. ಈ ಹೇಳಿಕೆಗೆ ಗರಂ ಆದ ಕಿಚ್ಚ, “ಜಗಳಗಳು ಆಗದೇ ಇರೋ ತರ ನಡೆಸಿಕೊಂಡು ಹೋಗೋಕೆ ನೀವೇನು ಉಸ್ತುವಾರಿ ಮಾಡ್ತಿದ್ದಿರಾ?” ಎಂದು ಮರುಪ್ರಶ್ನೆ ಹಾಕಿದ್ದಾರೆ.
ಇದನ್ನೂ ಓದಿ: ಡಿ. 7ರವರೆಗೆ ಈ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆ: ಬಿರುಗಾಳಿ ಜೊತೆ ಜಲಪ್ರಳಯದ ಮುನ್ಸೂಚನೆ
ಈ ವಿಡಿಯೋವನ್ನು ಕಲರ್ಸ್ ಕನ್ನಡ ವಾಹಿನಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ