Nondavara Sangha In BBK: ಬಿಗ್‌ಬಾಸ್ ಕನ್ನಡ ಸೀಸನ್ 10ರ ಶುರುವಾಗಿನಿಂದಲೂ ಒಂದಲ್ಲ ಒಂದು ತಕರಾರು ಮನೆಯೊಳಗೆ ಇದ್ದಿದ್ದು, ಈ ಗುಂಪಿನಲ್ಲಿ ಇದ್ದವರು ಆ ಗುಂಪು ಸೇರಿಕೊಂಡರೆ, ಆ ಗುಂಪಿನಲ್ಲಿ ಇದ್ದವರು ಈ ಗುಂಪು ಸೇರಿಕೊಂಡರು. ಕಳೆದ ವಾರ ಶತ್ರುಗಳಾಗಿದ್ದರು ಈ ವಾರ ಮಿತ್ರರಾದರು. ಮಿತ್ರರು ಶತ್ರುಗಳಾದರೂ ಫ್ರೆಂಡ್ಶಿಪ್ ಹೆಸರಿನಲ್ಲೇ ಕೆಲವೊಬ್ಬರಂತು ಗೆದ್ದವನ್ನೇ ತೋಡಿ ಅವರನ್ನೇ ಮಣ್ಣು ಹಾಕಿ ಮುಚ್ಚುವ ಮಟ್ಟಕ್ಕೂ ಹೋದರು ಈಗ ಎಲ್ಲವೂ ಸಹ ವಾರದ ಕಥೆ ಕಿಚ್ಚನ ಜೊತೆಗೆ ಕಾರ್ಯಕ್ರಮದಲ್ಲಿ‌ ಸುದೀಪ್ ಎಲ್ಲದ್ದಕ್ಕೂ ಸಹ ಕ್ಲಾರಿಟಿ ಸಿಗುತ್ತಿದೆ. 


COMMERCIAL BREAK
SCROLL TO CONTINUE READING

ಬಿಗ್‌ಬಾಸ್‌ ಮನೆಯ ಪಂಚಾಯಿತಿ ಮುಗಿಸಿದ ಮೇಲೆ, ಕಿಚ್ಚನ ಗಮನಕ್ಕೆ ನೊಂದವರು ಎಂದು ಹಣೆಪಟ್ಟಿ ಕಟ್ಟಿಕೊಂಡು ಓಡಾಡುತ್ತಿದ್ದ ತುಕಾಲಿ ಸಂತೋಷ್ ಕಾಣಿಸಿಕೊಂಡು, ಇದನ್ನೇ ಒಂದು ಹಾಸ್ಯವಾಗಿ ತೆಗೆದುಕೊಂಡ ಕಿಚ್ಚ ಸುದೀಪ್ ಇಂದು ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದಲ್ಲಿ ತುಕಾಲಿನ್ನು ಕಿಚಾಯಿಸಿದ್ದಾರೆ. ನೊಂದವರ ಗುಂಪಿನ ಸಂಘದಲ್ಲಿ ಯಾರ್ಯಾರಿಗೆ ಯಾವ ಸ್ಥಾನವನ್ನ ನೀಡುತ್ತೀರಾ ಎಂದು ತುಕಾಲಿ ಸಂತೋಷ್‌ರನ್ನು ಕಿಚ್ಚ ಸುದೀಪ್ ಕೇಳಿದಕ್ಕೆ, ತುಕಾಲಿ ಸಂತು ಕಾರ್ತಿಕ್, ವರ್ತೂರು ಸಂತೋಷ್ ಹಾಗೂ ಡ್ರೋಣ್ ಪ್ರತಾಪ್ ಹೆಸರನ್ನ ತೆಗೆದುಕೊಂಡು ಹಾಗೆಯೇ ಇಂತವರಿಗೆ ಇಂತಹ ಸ್ಥಾನವನ್ನು ಕೊಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಮನೆಯ ಸದಸ್ಯರಿಗೆ ಬ್ಯಾಡ್ಜ್ ಕೂಡ ಬಂದಿದೆ ಅದನ್ನು ತುಕಾಲಿಯವರಿಗೆ ಹಾಕಲು ಸುದೀಪ್ ಹೇಳಿದ್ದಾರೆ. 


ಇದನ್ನೂ ಓದಿ: BBK 10: "ನಾನೂ ತಲೆ ಬೋಳಿಸಿದ್ಮೇಲೆ ಪಾಪ್ಯುಲರ್ ಆಗಿದ್ದು ರೀ": ಕಿಚ್ಚನ ಮಾತಿಗೆ ವೀಕ್ಷಕರ ಚಪ್ಪಾಳೆ!


ದೊಡ್ಮನೆಯಲ್ಲಿ ನೊಂದವರ ಸಂಘವನ್ನು ಕಿಚ್ಚ ಸುದೀಪ್ ಉದ್ಘಾಟನೆ ಮಾಡಿದ್ದು, ತುಕಾಲಿ ಸಂತೋಷ್ ನೊಂದವರ ಸಂಘದ ಗೌರವಾಧ್ಯಕ್ಷರಾಗಿದ್ದಾರೆ. ತುಕಾಲಿ ಸಂತೋಷ್ ಯಾವಾಗಲೂ, ವಿನಯ್ ಏನಾದರೂ ಮಾತನಾಡಿದರೆ ನಾವು ನೊಂದವರು ನಮ್ಮ ಕಷ್ಟವನ್ನು ಕೇಳಲು ಯಾರು ಇಲ್ಲ ಎಂಬ ಮಾತನ್ನು ಬಳಕೆ ಮಾಡುತ್ತಿದ್ದಕ್ಕೆ, ಇಂದು ನೊಂದವರ ಸಂಘ ಎಂದು ಅಧಿಕೃತವಾಗಿ ಚಾಲನೆಯನ್ನು ನೀಡಲಾಗಿದೆ. ಇನ್ನು ತುಕಾಲಿ ಸಂತೋಷ ತಮ್ಮ ಸಂಘದ ಬಗ್ಗೆ ಮಾತನಾಡಿದ್ದು ಸಂಘಕ್ಕೆ ಅಧ್ಯಕ್ಷರನ್ನಾಗಿ ಕಾರ್ತಿಕ್ ನೇಮಕ ಮಾಡಿರುವುದಾಗಿ ತಿಳಿಸಿದ್ದಾರೆ. 


ಕಾರ್ತಿಕ್ ನಮ್ಮ ಸಂಘದಲ್ಲಿ ತುಂಬಾ ನೊಂದಿದ್ದಾರೆ ಅದಕ್ಕೆ ಅವರನ್ನೇ ಸಂಘದ ಅಧ್ಯಕ್ಷರನ್ನಾಗಿ ಮಾಡುತ್ತಾ ಇದ್ದೇನೆ ಎಂದು ತುಕಾಲಿ ಸಂತೋಷ್ ಹೇಳಿದ್ದೆ ತಡ ಸಂಗೀತಾ ಮುಖಭಾವವೇ ಚೇಂಜ್ ಆಗಿ ಹೋಗಿ, ಇನ್ನು ಉಪಾಧ್ಯಕ್ಷರನ್ನಾಗಿ ವರ್ತೂರು ಸಂತೋಷ್ ರವರನ್ನ ಮಾಡಲಾಗಿದೆ. ಇದಕ್ಕೆ ತುಕಾಲಿ  ವರ್ತೂರು ಸಂತೋಷ್ ಮಾತನಾಡುತ್ತಾ ಇದ್ದರು ಅದು ಅಳುವ ರೀತಿ ಕಾಣಿಸುತ್ತದೆ ಎಂದು ಹೇಳಿದ ಕೊಟ್ಟ ಮಾತ್ರ ಎಲ್ಲರ ಮುಖದಲ್ಲೂ ನಗು ತರಿಸಿದೆ. ತುಕಾಲಿ ಸಂತೋಷ್ ಮಾತಿಗೆ ನೊಂದವರ ಸಂಘದವರು ಬಿದ್ದು ಬಿದ್ದು ನಕ್ಕರೆ ವಿರೋಧಿ ಗುಂಪಿನವರು ಮಾತ್ರ ಏನು ರಿಯಾಕ್ಟ್ ಮಾಡದೆ ಸುಮ್ಮನೆ ಕುಳಿತುಕೊಂಡಿದ್ದಾರೆ. 


ಇದನ್ನೂ ಓದಿ: ಈ ಸ್ಪರ್ಧಿಯೇ ಬಿಗ್‌ ಬಾಸ್‌ 10 ರ ವಿನ್ನರ್‌! ಈ ವಾರ ಅತಿ ಹೆಚ್ಚು ವೋಟ್‌ ಪಡೆದು ಸೇವ್‌ ಆದವರು ಇವರೇ


ದೊಡ್ಮನೆಯ ನೊಂದವರ ಗುಂಪಿನಲ್ಲಿ 6 ಮಂದಿ, ಪ್ರತಾಪ್‌ಗೂ ಸಿಕ್ತು ಸ್ಥಾನ ಇನ್ನು ನೊಂದವರ ಗುಂಪಿನ ಕಾರ್ಯದರ್ಶಿಯಾಗಿ ಡ್ರೋನ್ ಪ್ರತಾಪ್ ಆಯ್ಕೆಯಾಗಿದ್ದು, ನಾನು ಯಾವ ಗುಂಪಿಗೂ ಸೇರಲ್ಲ ಎಂದು ಡ್ರೋನ್ ಪ್ರತಾಪ್ ಹೋಗಿದ್ದವರು. ಆದರೆ ಈಗ ವಿನಯ್ ಟೀಮ್ ಗೆ ಸೇರಿ ಅಲ್ಲಿಂದಲೂ ಸಹ ಸಾಕಷ್ಟು ನೋವನ್ನು ಅನುಭವಿಸಿ ಬಂದಿದ್ದಾರೆ ಎಂದು ತುಕಾಲಿ ಸಂತೋಷ್ ಹೇಳಿದ್ದಾರೆ. ಈ ವೇಳೆ ಎದುರು ತಂಡದವರು ತುಕಾಲಿ ಮಾತು ಕೇಳಿ ಶಾಕ್ ಆಗಿ, ನಂತರ ನೊಂದವರ ಗುಂಪಿನಲ್ಲಿ 6 ಮಂದಿ ಇದ್ದಾರೆ ಎಂದು ತುಕಾಲಿ ಸಂತೋಷ್‌ಗೆ ಗೊತ್ತಾಗಿದೆ. ಇದನ್ನು ನೋಡಿದ್ದೇ ತಡ ನೊಂದವರ ಗುಂಪಿನಲ್ಲೂ ಸಾಕಷ್ಟು ಜನ ಇದ್ದಾರೆ ಎಂದು ತುಕಾಲಿ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ತನಿಷಾ, ನೀತು, ತುಕಾಲಿ ಸಂತೋಷ್, ವರ್ತೂರು ಸಂತೋಷ್ ,ಕಾರ್ತಿಕ್ ಹಾಗೂ ಪ್ರತಾಪ್ ನೊಂದವರ ಸಂಘದಲ್ಲಿ ಇದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.