ಬಿಗ್ ಬಾಸ್ನಲ್ಲಿ ಕಂಟೆಸ್ಟಂಟ್ಗಳ ಈ ಮಾತೇ ಪ್ರತಾಪ್ ಮನಸ್ಥಿತಿಯನ್ನ ಕುಗ್ಗಿಸಿತ್ತೇ..!
Prathap Health Condition : ಬಿಗ್ ಬಾಸ್ ಕನ್ನಡ ಸೀಸನ್ 10 ರ ಕೊನೆಯ ವಾರಗಳಲ್ಲಿ ಒಬ್ಬ ಸ್ಪರ್ಧಿ ಮಿಸ್ಸಿಂಗ್ ಆಗಿದ್ದಾರೆ.
Prathap Health Condition : ಬಿಗ್ ಬಾಸ್ ಕನ್ನಡ ಸೀಸನ್ 10 ರ ಕೊನೆಯ ವಾರಗಳಲ್ಲಿ ಒಬ್ಬ ಸ್ಪರ್ಧಿ ಮಿಸ್ಸಿಂಗ್ ಆಗಿದ್ದಾರೆ. ಡ್ರೋನ್ ಪ್ರತಾಪ್ ಎಲ್ಲಿ ಹೋದರು, ಯಾಕೆ ಮನೆಯಲ್ಲಿ ಕಾಣ್ತಿಲ್ಲ ಎಂಬ ವಿಚಾರಗಳು ಚರ್ಚೆಯಾಗುತ್ತಿದೆ. ಈ ನಡುವೆ ಪ್ರತಾಪ್ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಸಂಗತಿ ಅವರ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಪ್ರತಾಪ್ ಆರೋಗ್ಯಕ್ಕೆ ಏನಾಯ್ತು ಎಂದು ಚಿಂತಿಸುತ್ತಿದ್ದಾರೆ. ಇತ್ತ ಸೋಷಿಯಲ್ ಮೀಡಿಯಾದಲ್ಲಿ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದರೆಂಬ ಗುಲ್ಲು ಶುರುವಾಗಿದೆ. ಇದು ಎಷ್ಟರ ಮಟ್ಟಿಗೆ ನಿಜವೆಂದು ಯಾರಿಗೂ ತಿಳಿದಿಲ್ಲ. ವೈದ್ಯರ ಹೇಳಿಕೆ ಪ್ರಕಾರ ಪ್ರತಾಪ್ ಅವರಿಗೆ ಹೊಟ್ಟೆ ಕೆಟ್ಟಿತ್ತು. ಹಾಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: BBK 10 : ಡ್ರೋನ್ ಪ್ರತಾಪ್ ಮೆಡಿಕಲ್ ರಿಪೋರ್ಟ್ ರಿಲೀಸ್..! ಬಿಗ್‌ಬಾಸ್ ಮನೆಗೆ ಬಿಗಿ ಭದ್ರತೆ
ಇದೀಗ ಪ್ರತಾಪ್ ಚೇತರಿಸಿಕೊಂಡಿದ್ದು, ಅವರನ್ನು ಡಿಸ್ಚಾರ್ಜ್ ಮಾಡಲಾಗುವುದ ಎಂದು ಆದಪತ್ರೆ ವೈದ್ಯರು ಹೇಳಿದ್ದಾರೆ. ಆದರೆ ಇಲ್ಲೊಂದು ವಿಚಾರ ಎಲ್ಲರನ್ನು ಕಾಡುತ್ತಿದೆ. ಹಾಗೊಂಡ ವೇಳೆ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದರೆ ಅದಕ್ಕೆ ಕಾರಣ ಏನು ಎಂಬುದು.
ಪ್ರತಾಪ್ ಅವರ ಮನಸ್ಥಿತಿ ಹದಗೆಡಲು ಮನೆಯಲ್ಲಿ ಹಲವು ವಿಚಾರಗಳು ನಡೆದಿರಬಹುದು. ಆದರೆ ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ಬಹುತೇಕರು ಪ್ರತಾಪ್ ಗೆ ಫಿಸಿಕಲ್ ಟಾಸ್ಕ್ ನೀಡಲು ಹಿಂದೇಟು ಹಾಕುತ್ತಿದ್ದರು. ಆ ಬೇಗ ಪ್ಯಾನಿಕ್ ಆಗ್ತಾನೆ ಎಂಬುದು ಎಲ್ಲರ ವಾದವಾಗಿತ್ತು. ಈ ವಿಚಾರ ಪ್ರತಾಪ್ ಮನಸ್ಸಿಗೆ ಸಾಕಷ್ಟು ನೋವು ಮಾಡಿತ್ತು. ಇದೇ ವಿಚಾರದಿಂದ ಸಂಗೀತಾ ಜೊತೆಗೂ ಪ್ರತಾಪ್ ಜಗಳವಾಡಿದ್ದರು. ಎಲ್ಲೋ ಒಂದು ಕಡೆ ಪದೆ ಪದೇ ಪ್ಯಾನಿಕ್ ಆಗ್ತಾನೆ ಎಂದು ಹೇಳೋದೇ ಪ್ರತಾಪ್ ಮನಸ್ಥಿತಿಯನ್ನು ಕುಗ್ಗಿಸಿರಬಹುದೆಂಬುದು ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: Drone Prathap : ಬಿಗ್‌ಬಾಸ್ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ರಾ ಡ್ರೋನ್ ಪ್ರತಾಪ್..!?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.