Rakshak Bullet Elimination Reason : ಬಿಗ್ ಬಾಸ್ ಕನ್ನಡ ಸೀಸನ್ 10 ರ ನಾಲ್ಕನೇ ವಾರದಲ್ಲಿ ಹಾಸ್ಯ ನಟ ಬುಲೆಟ್‌ ಪ್ರಕಾಶ್‌ ಅವರ ಪುತ್ರ ರಕ್ಷಕ್‌ ಬುಲೆಟ್‌ ಮನೆಯಿಂದ ಹೊರ ನಡೆದಿದ್ದಾರೆ.  ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿ ಅಪಾರ ಅಭಿಮಾನಿ ಬಳಗವಿದ್ದರೂ ರಕ್ಷಕ್‌ ಇಷ್ಟು ಬೇಗ ಎಲಿಮಿನೇಟ್‌ ಆಗಲು ಕೆಲವು ಕಾರಣಗಳಿವೆ ಎನ್ನಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಹೊರಗಡೆ ಇದ್ದಷ್ಟು ಜೋಶ್‌ನಲ್ಲಿ ರಕ್ಷಕ್‌ ಬುಲೆಟ್‌ ಕಾಣಲಿಲ್ಲ. ಬಿಗ್‌ ಬಾಸ್‌ ಮನೆಯಲ್ಲಿ ರಕ್ಷಕ್‌ ಅವರಿಂದ ಜನ ಬೇರೆಯದ್ದೇನನ್ನೋ ಬಯಸುತ್ತಿದ್ದರು. ಆದರೆ ರಕ್ಷಕ್‌ ಬುಲೆಟ್‌ ಸೇಫ್‌ ಆಡಲು ಹೋಗಿ ಎಡವಟ್ಟು ಮಾಡಿಕೊಂಡರು. ಮತ್ತೊಂದೆಡೆ ಗುಂಪುಗಾರಿಕೆಗೆ ಬಲಿಯಾದರು. ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಕಣ್ಣಿಗೆ ಕಾಣುವಂತೆ ಗ್ರೂಪಿಸಮ್‌ ನಡೀತಿದೆ. ರಕ್ಷಕ್‌ ಸಹ ಒಂದೇ ಗುಂಪಿಗೆ ಸೀಮಿತರಾದವರಂತೆ ಕಂಡರು. ಅಲ್ಲದೇ, ಡ್ರೋನ್‌ ಪ್ರತಾಪ್‌ ಬಗ್ಗೆ ಆಡಿದ ಕೆಲವು ಮಾತುಗಳು ರಕ್ಷಕ್‌ ಅವರಿಗೆ ನೆಗೆಟಿವ್‌ ಶೇಡ್‌ ನೀಡಿದವು. ಇದೆಲ್ಲ ರಕ್ಷಕ್ ಅವರಿಗೆ ಮುಳುವಾಗಿದೆ. 


ಇದನ್ನೂ ಓದಿ : ಮದುವೆಯ ಬಳಿಕ ಮೊದಲ ಕರ್ವ ಚೌತ್‌ ಆಚರಿಸಿದ ಬಾಲಿವುಡ್‌ ನಟಿ 


ರಕ್ಷಕ್ ಈ ಬಾರಿ ಎಲಿಮಿನೇಟ್‌ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಕೆಲವರಿಗೆ ಇದು ಬೇಸರ ತಂದಿದ್ದರೆ, ಮತ್ತೆ ಕೆಲವರಿಗೆ ಖುಷಿ ನೀಡಿದೆ. ಅಲ್ಲದೇ, ಡ್ರೋನ್ ಪ್ರತಾಪ್‌ ಕಂಡರೆ ರಕ್ಷಕ್‌ ಉರಿದು ಬೀಳುತ್ತಿದ್ದರು. ಅವರಿಗೆ ಹೊಡೆಯುವ ಆಲೋಚನೆಯಲ್ಲೂ ರಕ್ಷಕ್ ಇದ್ದರು ಎಂಬುದಕ್ಕೆ ಅವರು ಆಡಿದ ಮಾತುಗಳೇ ಸಾಕ್ಷಿ. 


ಮೊದಲ ಮೂರು ವಾರ ರಕ್ಷಕ್‌ ಬುಲೆಟ್‌ ನಾಮಿನೇಟ್‌ ಆಗಿರಲಿಲ್ಲ. ನಾಲ್ಕನೇ ವಾರ ಮೊದಲ ಬಾರಿ ನಾಮಿನೇಟ್‌ ಆದರು. ಮೊದಲ ನಾಮಿನೇಷನ್‌ನಲ್ಲೇ ಅವರು ಎಲಿಮಿನೇಟ್‌ ಆಗಿದ್ದಾರೆ. ಬಿಗ್ ಬಾಸ್ ಮನೆಯ ಎರಡು ಗುಂಪಿನಲ್ಲಿ ವಿನಯ್ ಜೊತೆ ಇದ್ದ ರಕ್ಷಕ್ ಔಟ್ ಆಗಿದ್ದಾರೆ. 


ಇದನ್ನೂ ಓದಿ : ವಿರಾಟ್ ಕೊಹ್ಲಿ ಬರ್ತ್‌ ಡೇಗೆ ಅನುಷ್ಕಾ ಮುದ್ದಾದ ವಿಶ್‌.. ಎಲ್ಲರೂ ಕಾದಿದ್ದ ಆ ಗುಟ್ಟು ಬಿಟ್ಟು ಕೊಟ್ರಾ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.