Sangeetha In BBK: ಬಿಗ್‌ಬಾಸ್‌ ಕನ್ನಡ 10 ಕಾರ್ಯಕ್ರಮದಲ್ಲಿ ಕಳೆದ ವಾರ ನಡೆದ ‘ಚೇರ್ ಆಫ್ ಥಾರ್ನ್ಸ್’ ಚಟುವಟಿಕೆಯಲ್ಲಿ ರಾಕ್ಷಸರ ತಂಡದಲ್ಲಿದ್ದ ವರ್ತೂರು ಸಂತೋಷ್, ವಿನಯ್, ನಮ್ರತಾ, ಪವಿ ಪೂವಪ್ಪ, ಮೈಕಲ್ ಹಾಗೂ ತುಕಾಲಿ ಸಂತು ಅಕ್ಷರಶಃ ರಾಕ್ಷಸರಂತೆಯೇ ವರ್ತಿಸಿದರು. ಮನುಷ್ಯತ್ವವನ್ನೇ ಮರೆತು ಸಂಗೀತಾ ಹಾಗೂ ಡ್ರೋನ್ ಪ್ರತಾಪ್‌ ಮೇಲೆ ಸೋಪಿನ ನೀರಿನಲ್ಲಿ ದಾಳಿ ಮಾಡಿದರು. ಉಸಿರಾಡೋಕೂ ಅವಕಾಶ ಕೊಡದಂತೆ ಮೇಲಿಂದ ಮೇಲೆ ಜೋರಾಗಿ ಸೋಪು ನೀರನ್ನ ರಾಚಿದರು. ಪರಿಣಾಮ, ಇಬ್ಬರ ಕಣ್ಣಿಗೂ ಬಲವಾದ ಪೆಟ್ಟು ಬಿದ್ದಿದೆ.


COMMERCIAL BREAK
SCROLL TO CONTINUE READING

ಬಳಿಕ ಡ್ರೋನ್‌ ಪ್ರತಾಪ್‌ ಹಾಗೂ ಸಂಗೀತಾ ಇಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇಬ್ಬರೂ ಶನಿವಾರ  ಬಿಗ್‌ಬಾಸ್‌ ಮನೆಗೆ ವಾಪಸ್ ಆಗಿದ್ದಾರೆ. ಇಬ್ಬರ ಕಣ್ಣುಗಳು ಮತ್ತೆ ಮೊದಲಿನಂತೆ ಆಗಲು ಇನ್ನೂ ಸಮಯ ಬೇಕಿದ್ದು, ಸದ್ಯ ಲೈಟ್‌ ಸೆನ್ಸಿಟಿವ್ ಆಗಿರೋದ್ರಿಂದ ಇಬ್ಬರೂ ಕಪ್ಪು ಕನ್ನಡಕವನ್ನ ಧರಿಸಿಯೇ ಇರಬೇಕಿದೆ. ಈ ಮಧ್ಯೆ ಸಂಗೀತಾ  "ಕಣ್ಣು ಮಂಜು ಮಂಜು ಆಗ್ತಿದೆ. ನನಗೆ ಕಾಣಿಸ್ತಿಲ್ಲ. ನನಗೇನೂ ಕಾಣಿಸ್ತಾನೇ ಇಲ್ಲ. ಎಲ್ಲರೂ ಅಲ್ಲಿ ಜೋಕ್ ಮಾಡಿಕೊಂಡು ನಗುತ್ತಿರಬೇಕಾದರೆ, ನನಗೇನೂ ಕಾಣಿಸ್ತಾನೇ ಇರಲಿಲ್ಲ. ನನಗೆ ಕಣ್ಣು ಬಿಡೋಕೂ ಆಗ್ತಿಲ್ಲ" ಎಂದು ಹೇಳಿ ಸಂಗೀತಾ ಸಂಕಟ ಪಟ್ಟಿದ್ದಾರೆ. ಇನ್ನೂ, ಆಟದ ಸಮಯದಲ್ಲಿನ ಕ್ರೂರತೆಯನ್ನ ಕಣ್ಣಾರೆ ಕಂಡ ಡ್ರೋನ್ ಪ್ರತಾಪ್, "ನಮ್ಮ ಕಣ್ಣು ಹೋಗ್ಬಿಟ್ಟಿರೋದು" ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 


ಇದನ್ನೂ ಓದಿ: “ಯಾರೂ ಇಲ್ಲ ಅಂತಾ ಅವನಿಗೆ ಚಪ್ಪಾಳೆ ಕೊಟ್ರಾ?”-ಕಿಚ್ಚನ ಚಪ್ಪಾಳೆ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ ನಮ್ರತಾ ಗೌಡ


ಭಾನುವಾರದ ಸಂಚಿಕೆಯಲ್ಲಿ, ಕಿಚ್ಚ ಸುದೀಪ್ ಮುಂದೆ ಸಂಗೀತಾಗೆ ರೋಸ್ ಕೊಟ್ಟ ಕಾರ್ತಿಕ್, "ನಾನು ಈ ಮನೆಗೆ ಮೊದಲು ಬಂದಾಗ ತುಂಬಾ ಚೆನ್ನಾಗಿ ಕನೆಕ್ಟ್ ಆಗಿ, ಒಡನಾಟ ಬೆಳೆಸಿದ್ದು ಸಂಗೀತಾ ಜೊತೆಗೆ. ಹೋಗ್ತಾ ಹೋಗ್ತಾ.. ಸಂಗೀತಾ ಯಾವಾಗಲೂ ಒಂದೇ ದೃಷ್ಟಿಕೋನದಲ್ಲಿ ಯೋಚನೆ ಮಾಡ್ತಾಳೆ. ಒಂದ್ಸಲಿ ನಮ್ಮ ದೃಷ್ಟಿಕೋನದಲ್ಲೂ ಯೋಚನೆ ಮಾಡಬೇಕು. ಎಲ್ಲೋ ಒಂದು ಕಡೆ ಡಾಮಿನೆಂಟ್‌ ನೇಚರ್‌ ಇಷ್ಟ ಆಗಲ್ಲ. ಅದನ್ನ ಚೇಂಜ್‌ ಮಾಡಿಕೊಳ್ಳುವುದಕ್ಕಾಗಿ ಸಂಗೀತಾಗೆ ಈ ರೋಸ್‌ ಕೊಡ್ತೀನಿ" ಎಂದಿದ್ದರು. ಕಾರ್ತಿಕ್ ಅವರ ಮಾತು ಸಂಗೀತಾ ಅವರಿಗೆ ಬೇಸರ ತರಿಸಿದೆ.


ಕಾರ್ತಿಕ್‌ ಮಾತಿನಿಂದ ಬೇಸರಗೊಂಡ ಸಂಗೀತಾ "ನಾನು ನಿಮಗೆ ಡಾಮಿನೇಟ್ ಮಾಡ್ತಿಲ್ಲ. ಅದನ್ನ ಹೇಳೋದು ನಿಲ್ಲಿಸಿ.ಇದೆಲ್ಲಾ ಮಾಡಬೇಡಿ. ಇದೆಲ್ಲಾ ಮಾಡೋದಕ್ಕೆ ನಿಮ್ಮ ಫ್ರೆಂಡ್ಸ್ ಬಂದು ನಾನು ಡಾಮಿನೇಟಿಂಗ್ ಅಂತ ಹೇಳ್ತಾ ಇರೋದು. ನೀವು ಅಲ್ಲಿ ಅದನ್ನ ಹೇಳಬಾರದಿತ್ತು. ನೀವು ಅಲ್ಲಿ ಹೇಳಿ ನನ್ನ ಮರ್ಯಾದೆ ತೆಗೆದಿದ್ದೀರಾ’’ ಅಂತ ಹೇಳಿ ಸಂಗೀತಾ ಬೇಜಾರು ಮಾಡಿಕೊಂಡರು. ಆಗ ಕಾರ್ತಿಕ್ ಕ್ಷಮೆ ಕೇಳಿ, "ನನಗೂ ಬೇಜಾರಾಗಿದೆ" ಅಂತ ಹೇಳಿದಾಗ ಸಂಗೀತಾ "ಪರ್ವಾಗಿಲ್ಲ. ನಾನು ಅರಗಿಸಿಕೊಳ್ಳುತ್ತಿದ್ದೇನೆ. ಇನ್ಯಾರನ್ನೂ ನಾನು ಎದುರು ಹಾಕಿಕೊಳ್ಳಬೇಕಾಗಿಲ್ಲ. ಎಲ್ಲರನ್ನೂ ಎದುರು ಹಾಕಿಕೊಂಡಿದ್ದೇನೆ. ಆಡೋಣ" ಎಂದು ಧೈರ್ಯವಾಗಿ ಮಾತನಾಡಿದರು.
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ