Anu Poovamma Supports Vinay: ಬಿಗ್‌ಬಾಸ್ ಕನ್ನಡ ಸೀಸನ್‌ 10ಶೋದಲ್ಲಿ ದಿನೇ ದಿನೇ ಕ್ರೇಜ್ ಹೆಚ್ಚಿಸುತ್ತಿದ್ದು, ನೂರು ದಿನಗಳ ಪಯಣದಲ್ಲಿ ಇನ್ನೊಂದು ತಿಂಗಳು ಕಳೆದರು ಸಾಕು, ಬಿಗ್‌ಬಾಸ್ ಕಪ್ ಎತ್ತಿಕೊಂಡು ವಿನ್ನರ್ ಖುಷಿಯಲ್ಲಿ ತೇಲುತ್ತಾ ಇರುತ್ತಾರೆ. ಗೆಲುವು ಒಬ್ಬರದ್ದೇ ಆಗಬೇಕಾದರೆ ಆಟದ ರೀತಿಯಲ್ಲೂ ಬದಲಾವಣೆ ಆಗಲಿದ್ದು, ಶಕ್ತಿ ಮತ್ತು ಯುಕ್ತಿ ಇದ್ದವರಷ್ಟೇ ಗೆಲ್ಲುವಂತಹ ಆಟಗಳನ್ನೇ ಬಿಗ್‌ಬಾಸ್ ನೀಡುತ್ತಾ ಹೋಗುತ್ತದೆ. ಈಗಾಗಲೇ ಬಿಗ್‌ಬಾಸ್ ಮನೆಯಲ್ಲಿ ಗೆಲುವಿಗಾಗಿ ಆಟ ಶುರುವಾಗಿದ್ದು, ಅದಕ್ಕೆ ಕಾರ್ತಿಕ್ ವರಸೆಯೇ ಬದಲಾಗಿ ಹೋಗಿದೆ. ತನಗೆ ಮೈನಸ್ ಪಾಯಿಂಟ್ ಆಗಬಹುದು ಎನಿಸುವ ನಡವಳಿಕೆಯನ್ನೇ ಬದಲಾಯಿಸಿಕೊಂಡು, ಸದ್ಯ ಸಂಗೀತಾನಾ ದೂರ ಮಾಡಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಇದೀಗ ಸ್ಟಾರ್ ಸುವರ್ಣದಲ್ಲಿ ಪ್ರಸುತ್ತ ಪ್ರಸಾರವಾಗುತ್ತಿರುವ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ  ನೆಗೆಟಿವ್ ಶೇಡ್‌ನ ಅನಿಕಾ ಪಾತ್ರ ಮಾಡುತ್ತಿರುವ ನಟಿ ಅನು ಪೂವಮ್ಮ, ಬಿಗ್‌ಬಾಸ್‌ ಸ್ಪರ್ಧಿ ವಿನಯ್ ಗೌಡಗೆ ಬೆಂಬಲಕ್ಕೆ ನಿಂತಿದ್ದಾರೆ. ನಟಿ ಅನು, ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋ ಮೂಲಕ ಶುಭಕೋರಿ, ಅದರಲ್ಲಿ "ಹಾಯ್ ಎಲ್ಲರೂ ಹೇಗಿದ್ದೀರಾ..? ವಿನಯ್ ಬಿಗ್ ಬಾಸ್‌ನಲ್ಲಿ ಚೆನ್ನಾಗಿಯೇ ಆಡುತ್ತಾ ಇದ್ದೀಯಾ. ನಾನು ಪ್ರತಿ ದಿನ ಬಿಗ್ ಬಾಸ್ ನೋಡುತ್ತೇನೆ. ನಿನ್ನ ಎಪಿಸೋಎಡ್‌ ನೋಡುತ್ತೇನೆ. ನಿಜಕ್ಕೂ ಖುಷಿ ಆಗುತ್ತಿದೆ. ಫಿನಾಲೆಯಲ್ಲಿ ನಿನ್ನ ನೋಡುತ್ತೀನಿ" ಅಂತ ವಿನಯ್‌ಗೆ  ಟ್ಯಾಗ್ ಮಾಡಿ ಅವರ ಗೆಲುವನ್ನು ನೋಡಲು ಬಯಸುತ್ತಿರುವುದಾಗಿ ಹೇಳಿದ್ದಾರೆ. 



ಇದನ್ನೂ ಓದಿ: Bigg Boss: ಖ್ಯಾತ ಬಿಗ್‌ಬಾಸ್‌ ಸ್ಪರ್ಧಿ ಕಾರಿನ ಮೇಲೆ ಅನಿರೀಕ್ಷಿತ ದಾಳಿ..! ಅಸಲಿಗೆ ನಡೆದಿದ್ದೇನು?


ಕಿರುತೆರೆ ನಟಿ ಅನು ಪೂವಮ್ಮ ಈ ವಿಡಿಯೋ ಹಾಕಿದ ಮೇಲೆ ಸಾಕಷ್ಟು ನೆಗೆಟಿವ್ ಕಮೆಂಟ್‌ಗಳು ಬರುತ್ತಿದ್ದು, ಕೆಲವರಂತೂ ಅನು ಪೂವಮ್ಮಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಮೆಂಟ್‌ಗಳಲ್ಲಿ "ಈ ರೀತಿ ಹೇಳುವುದಕ್ಕೆ ಎಷ್ಟು ಹಣ ತೆಗೆದುಕೊಂಡಿದ್ದೀರಿ..?, ಯಾವ ಬಾಯಿಂದ ಹೇಳುತ್ತಿದ್ದೀಯಾ ತಾಯಿ. ನಿನ್ನ ಕಣ್ಣಿಗೆ ಅವನು ಚೆನ್ನಾಗಿ ಆಡುತ್ತಿದ್ದಾನೆ ಅನ್ಸುತ್ತಾ, ನಾವೇನು ಬಿಗ್‌ಬಾಸ್ ನೋಡೋದಿಲ್ವಾ" ಎಂದೆಲ್ಲಾ ನೆಗೆಟಿವ್ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಇನ್ನು ಅದೇ ಪೋಸ್ಟ್ ಅನ್ನು ವಿನಯ್ ಬೆಂಬಲಿಗರು ನೋಡಿ, "ವಿನಯ್ ಬೆಂಕಿ, ವಿನಯ್ ಗೆದ್ದೇ ಗೆಲ್ಲುತ್ತಾರೆ" ಅಂತೆಲ್ಲಾ ಪಾಸಿಟಿವ್ ಕಮೆಂಟ್ ಹಾಕುತ್ತಿದ್ದಾರೆ. 


ಬಿಗ್‌ಬಾಸ್ ಮನೆಗೆ ವಿನಯ್ ಕಾಲಿಟ್ಟಾಗಿನಿಂದ ಒಂದು ಗತ್ತನ್ನು ಕಾಪಾಡಿಕೊಂಡೆ ಬಂದವರು, ಆರಂಭದಲ್ಲಿ ಸ್ವಲ್ಪ ರೂಡ್ ಆಗಿ ನಡೆದುಕೊಳ್ಳುತ್ತಿದ್ದರು. ಮಾತಿಗೆ ಮುಂಚೆ ಅಗ್ರೆಸ್ಸಿವ್ ಆಗಿ ಆಡುತ್ತಿದ್ದಾಗ, ಆಗ ಪರಿಸ್ಥಿತಿಗಳು ಅದೇ ರೀತಿ ನಿರ್ಮಾಣವಾಗುತ್ತಿದ್ದವು. ಆದರೆ, ಈಗ ಕೆಲವೊಮ್ಮೆ ಮಾತ್ರ ಅಗ್ರೆಸ್ಸಿವ್ ಆಗಿ ಆಡುತ್ತಿದ್ದು, ಆದರೆ ಎಲ್ಲಿಯೂ ಅವರು ನಡೆದುಕೊಳ್ಳುವ ರೀತಿಯಾಗಿ, ಮಾಡುವ ಸ್ಟಾಟರ್ಜಿಯಾಗಲಿ ಬದಲಾವಣೆಯಾಗಿಲ್ಲ. ಇದನ್ನು ಅಚ್ಚುಕಟ್ಟಾಗಿ ಗಮನಿಸಿದ ಸಂಗೀತಾ , ವಿನಯ್ ತಮ್ಮ ತಂಡದವರ ಮನಸ್ಸು ಎಲ್ಲಿಯೂ ಅಲುಗಾಡದಂತೆ ಅದ್ಭುತವಾಗಿ ನೋಡಿಕೊಳ್ಳುತ್ತಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.