Actress Nishitha Supports Vinay: ಬಿಗ್‌ಬಾಸ್ ಮನೆಯಲ್ಲಿ ಇನ್ನು ಕೆಲವೇ ದಿನಗಳ ಆಟ ಮುಂದುವರೆಯಲಿದ್ದು, ಸದ್ಯಕ್ಕೆ ಇರುವ ಸ್ಪರ್ಧಿಗಳು ತುಂಬಾನೇ ಮುಂದೆ ಬಂದಿದ್ದಾರೆ. ಅದು ಖುಷಿಯ ವಿಚಾರ ಸಹ ಆಗಿದ್ದು, ಆದರೆ ಇನ್ನು ಮುಂದೆ ಆಟಗಳು ಕಠಿಣವಾಗುತ್ತಾ ಹೋಗುತ್ತವೆ. ಸ್ಪರ್ಧಿಗಳ ನಡುವೆಯೇ ಸ್ಪರ್ಧೆ ಹೆಚ್ಚಾಗುತ್ತಾ ಹೋಗುತ್ತಿದ್ದು, ಈಗಾಗಲೇ ನೋಡುಗರಿಗೆ ಅದರ ಅನುಭವವಾಗುತ್ತಿದೆ. ಇದರ ನಡುವೆ ಬಿಗ್‌ಬಾಸ್ ಮನೆಯಲ್ಲಿ ವಿನಯ್ ಗೆಲುವಿಗಾಗಿ ಎಲ್ಲರೂ ಪ್ರಾರ್ಥಿಸುತ್ತಿದ್ದು, ವಿನಯ್ ಗೆಲ್ಲಿಸಿ ಎಂದು ಮನವಿ ಮಾಡುತ್ತಿದ್ದಾರೆ. ಇಷ್ಟು ದಿನ ಬೆಂಬಲಿಗರಷ್ಟೇ ವೋಟ್ ಮಾಡುತ್ತಿರುವುದರ ಜೊತೆಗೆ ಪ್ರಚಾರ ಸಹ ಮಾಡುತ್ತಿದ್ದರು. ಆದರೆ ಈಗ ಸಂಬಂಧಿಕರೆಲ್ಲ ಸರಿ ತಪ್ಪುಗಳ ಬೆಂಬಲಕ್ಕೆ ನಿಂತಿದ್ದಾರೆ. 


COMMERCIAL BREAK
SCROLL TO CONTINUE READING

ಬಿಗ್‌ಬಾಸ್‌ನಲ್ಲಿ ವಿನಯ್ ಸ್ಟ್ರಾಂಗ್ ಕಂಟೆಸ್ಟಂಟ್‌ ಆಗಿದ್ದು, ಆರಂಭದಿಂದಾನೂ ತನ್ನ ಗತ್ತನ್ನು ಕಾಪಾಡಿಕೊಂಡು ಬಂದಿದ್ದಾರೆ. ಆನೆ ಎಂಬ ಹೆಸರಿನೊಂದಿಗೆ ಬಿಗ್‌ಬಾಸ್ ಮನೆಯಲ್ಲಿ ಇರುವ ವಿನಯ್, ಗಜನನ್ನು ಬಗ್ಗು ಬಡಿಯಲು ಯಾವ ಮಾವುತನು ಇಲ್ಲವೆಂದೆ ನಡೆದುಕೊಳ್ಳುತ್ತಿದ್ದಾರೆ. ತಮ್ಮದೇ ತಂಡವನ್ನು ಕಟ್ಟಿಕೊಂಡು, ಆ ತಂಡದ ಜೊತೆಗೆ ಮುನ್ನುಗ್ಗುತ್ತಿದ್ದಾರೆ. ಈ ಹಿಂದೆ ವಿನಯ್‌ಗೆ ಕಿರುತೆರೆ ನಟಿ ಅನು ಪೂವಮ್ಮ ವಿಡಿಯೋ ಮೂಲಕ ಬೆಂಬಲ ಸೂಚಿಸಿ, ವಿನಯ್ ಗೆಲ್ಲಲೇಬೇಕೆಂದು ಮನವಿ ಮಾಡಿದ್ದರು. ಅದರಂತೆ ಇದೀಗ ಮತ್ತೊಬ್ಬ ಕಿರುತೆರೆ ನಟಿ ನಿಶಿತಾ, ವಿನಯ್ ಪರ ಮಾತನಾಡಿ, ವಿನಯ್ ಹೇಗೆ ಆಡುತ್ತಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ವಿನಯ್, ನಿಶಿತಾಗೆ ಸೋದರ ಮಾವನ ಮಗ ಹಾಗೂ ತಂಗಿಯ ಗಂಡ ಸಹ ಹೌದು.



ಇದನ್ನೂ ಓದಿ: BBK 10 : ಪ್ರೀತಿ, ಸ್ನೇಹ ಅಂತಿದ್ದ ಸಂಗೀತಾ-ತನಿಷಾ ಇಬ್ಬರಿಗೂ ಬೇಡವಾದ್ರಾ ಕಾರ್ತಿಕ್..!


ನಟಿ ನಿಶಿತಾ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು, "ಎಲ್ಲರಿಗೂ ನಮಸ್ಕಾರ. ನಾನು ಈ ವಿಡಿಯೋ ಮಾಡುತ್ತಿರುವ ಉದ್ದೇಶ ಏನಪ್ಪ ಅಂದರೆ, ಬಿಗ್‌ಬಾಸ್ ಸೀಸನ್ 10 ರಿಯಾಲಿಟಿ ಶೋ ಆರಂಭವಾಗಿದೆ. ಯಾವುದೇ ಆಟವಾಗಲಿ ಸುಲಭವಾಗಿ ತೆಗೆದುಕೊಂಡು ಆಡುತ್ತಾರೆ. ವಿನಯ್ ಅಗ್ರೆಸ್ಸಿವ್ ಅದು ಇದು ಅಂತಾರೆ. ಆದರೆ ಅದಲ್ಲ. ನಾನು ನಮ್ಮ ಹುಡುಗ ಅಂತ ಹೇಳುತ್ತಾ ಇಲ್ಲ. ವಿನಯ್ ನಮ್ಮ ಸೋದರ ಮಾವನ ಮಗ, ನನ್ನ ತಂಗಿಯ ಗಂಡ. ವಿನಯ್ ಗೌಡ ಎಷ್ಟು ಚೆನ್ನಾಗಿ ಆಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತು. ನಿನ್ನೆಯ ಆಟದಲ್ಲಿ ಕೈಗೆ ಪೆಟ್ಟಾದರೂ ಅದನ್ನು ತೋರಿಸಿಕೊಳ್ಳದೆ, ಎಲ್ಲಿಯೂ ಹೇಳದೆ ಆಟವಾಡಿದ್ದಾರೆ" ಎನ್ನುತ್ತಾ ಬೆಂಬಲಕ್ಕೆ ಬಂದಿದ್ದಾರೆ. 


ನಿಶಿತಾ "ಬಿಗ್‌ಬಾಸ್‌ನಲ್ಲಿ ನೀವೆಲ್ಲ ಬಣ್ಣಿಸಿರುವ ಹಾಗೇ, ಸೆಂಟರ್ ಆಫ್ ಅಟ್ರಾಕ್ಷನ್ ಅನ್ನುವ ಹಾಗೇ ವಿನಯ್ ಗೌಡ ಅವರಿದ್ದಾರೆ. ಬೈಯ್ಯುವುದಾದರೂ ವಿನಯ್ ಅವರನ್ನೇ ಬೈಯ್ಯುತ್ತಾರೆ. ಹೊಗಳುವುದಾದರೂ ವಿನಯ್ ಅವರನ್ನೇ ಹೊಗಳುತ್ತಾರೆ. ಅದೆಲ್ಲಾ ಏನೇ ಇರಲಿ. ನಾನು ನಿಮ್ಮೆಲ್ಲರ ಬಳಿ ಕೇಳಿಕೊಳ್ಳುವುದು ಏನಂದರೆ ವಿನಯ್ ಗೌಡ ಅವರನ್ನು ಗೆಲ್ಲಿಸಿ. ವಿನಯ್‌ರನ್ನು ನೋಡಿದಾಗ ಶಿವನನ್ನು ನೋಡಿದ ಹಾಗೇ ಆಗುತ್ತೆ. ಜಗತ್ತನ್ನು ಶಿವ ನಿರ್ವಹಿಸಿದಂತೆಯೇ ವಿನಯ್ ಬಿಗ್‌ಬಾಸ್ ಮನೆಯನ್ನು ನಿರ್ವಹಿಸುತ್ತಿದ್ದಾರೆ. ಕೋಪ ಬಂದಾಗ ಶಿವನ ರೀತಿಯೇ ಕೋಪಿಸಿಕೊಳ್ಳುತ್ತಾರೆ. ನಾನು ಅವತ್ತು ಅವರ ಕೋಪದ ಮುಖ ಕಂಡು ಶಾಕ್ ಆಗಿದ್ದೆ. ಆದರೆ ಶಿವನ ರೀತಿಯೇ ಎಲ್ಲವನ್ನು ನಿಭಾಯಿಸುತ್ತಾರೆ. ಪ್ಲೀಸ್ ಎಲ್ಲರೂ ವಿನಯ್ ಗೌಡಗೆ ಸಪೋರ್ಟ್ ಮಾಡಿ" ಎಂದು ಕೇಳಿಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.