Bigg Boss Kannada Season 10: ಬಿಗ್ ಬಾಸ್ ಮನೆಯೊಳಗೆ ವಾರಾಂತ್ಯ ಸಮೀಪಿಸುತ್ತಿರುವ ಹಾಗೆಯೇ ಕಳಪೆ ಉತ್ತಮ ಅನ್ನೋ ಹಾವು ಏಣಿ ಆಟ ಮತ್ತೆ ಶುರುವಾಗಿದೆ. ಈ ವಾರ ಬಹುಮಾನದ ಮೊತ್ತವನ್ನು ಗಳಿಸುವ ಟಾಸ್ಕ್ ಅನ್ನು ಬಿಗ್ ಬಾಸ್ ಮನೆಯ ಸದಸ್ಯರಿಗೆ ನೀಡಿತ್ತು. ಈ ಟಾಸ್ಕ್ ಗಳಲ್ಲಿ ಆಡುವ ಅವಕಾಶಕ್ಕಾಗಿ ಮಾತಿನ ಚಕಮಕಿಗಳೂ ನಡೆದಿದ್ದವು. ಈಗ ಅವೆಲ್ಲ ಮುಗಿದು ಈ ವಾರದ ಕಳಪೆ ಯಾರು? ಉತ್ತಮ ಯಾರು ಎಂಬುದನ್ನು ನಿರ್ಧರಿಸುವ ಹಂತ ಬಂದಿದೆ.


COMMERCIAL BREAK
SCROLL TO CONTINUE READING

ಕಳಪೆ-ಉತ್ತಮ ಯಾರು ಎಂಬ ಬಗ್ಗೆ ಮನೆಯ ಸದಸ್ಯರ ಅಭಿಪ್ರಾಯ ಏನು ಎಂಬುದರ ಕುರಿತು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸುಳಿವು ನೀಡಲಾಗಿದೆ.


ಇದನ್ನೂ ಓದಿ- Drone prathap : ಅಮ್ಮನ ಮಡಿಲಲ್ಲಿ ಪ್ರತಾಪ್‌ ಕಣ್ಣೀರು..! ಮಗನ ತಪ್ಪಿಗೆ ಅಡ್ಡ ಬಿದ್ದು ಕ್ಷಮೆ ಕೇಳಿದ ತಂದೆ


ಕಾರ್ತಿಕ್ ಅವರು ವರ್ತೂರು ಸಂತೋಷ್ ಗೆ ಕಳಪೆ ನೀಡಿದ್ದರೆ, ತನಿಷಾ, ಮೈಕಲ್ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಾರೆ ಮನೆಯ ಸದಸ್ಯರ ಬಾಯಲ್ಲಿ ಮೈಕಲ್‌ ಮತ್ತು ವರ್ತೂರು ಸಂತೋಷ್ ಹೆಸರೇ ಹೆಚ್ಚು ಸಲ ಬಂದಂತಿದೆ. 


ಇದಕ್ಕೆ ಪ್ರತಿಕ್ರಿಯಿಸಿರುವ ವರ್ತೂರು, 'ಐದು ಲಕ್ಷದ ಟಾಸ್ಕ್ ನಲ್ಲಿ ರಿಸ್ಕ್ ತೆಗೆದುಕೊಂಡು ಆಡಿದ್ದೀನಿ.‌ ನಾನೇನೂ ಸ್ಫೋರ್ಟ್ಸ್ ಫೀಲ್ಡಿಂದ ಬಂದವನಲ್ಲ, ಆದರೆ ಎತ್ತು, ದನಗಳನ್ನು ಪರಿಗಣಿಸಿದರೆ ಸ್ಫೋರ್ಟ್ಸ್ ಹುಟ್ಟುಹಾಕಿದ್ದೇ ನಾವು' ಎಂದು ಖಡಕ್ಕಾಗಿ ಹೇಳಿದ್ದಾರೆ. 


ಇದನ್ನೂ ಓದಿ- ಬಿಗ್‌ ಬಾಸ್‌ನಲ್ಲಿ ಪ್ರತಾಪ್ ಮದುವೆ ಮಾತುಕತೆ, ಯಾರು ಆ ಬೆಡಗಿ!?


ಒಟ್ಟಾರೆ ಈ ವಾರದ ಕಳಪೆ ಯಾರು ಮತ್ತು ಉತ್ತಮ ಯಾರು ಎಂಬುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ‌. ಅದಕ್ಕೆ ಉತ್ತರ ಸಿಗಲು ಇಂದಿನ ಬಿಗ್ ಬಾಸ್ ಎಪಿಸೋಡ್ ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ