Snehith Flirts in Bigg Boss: ಈ ಬಾರಿ ಬಿಗ್ ಬಾಸ್ ಮನೆಯಲ್ಲಿ  ಟ್ರ್ಯಾಕ್ ತುಂಬಾ ಜೋರಾಗಿಯೇ ನಡೆಯುತ್ತಿದ್ದು, ಒಂದು ಕಡೆ ಮೈಕಲ್-ಇಶಾನಿ, ಇನ್ನೊಂದು ಕಡೆ ಸಂಗೀತಾ-ಕಾರ್ತಿಕ್ ಸ್ನೇಹ. ಇದೀಗ ಸ್ನೇಹಿತ್ ನಮ್ರತಾಗೆ ಜೋರಾಗಿ ಕಾಳು ಎಸೆಯುತ್ತಿದ್ದು, ನಮ್ರತಾ ಮಾತ್ರ ಕಾಳು ತಿನ್ನುತ್ತಿಲ್ಲ.ಈ ಹಿಂದೆಯೇ ಸ್ನೇಹಿತ್ ಇಶಾನಿ ಮೇಲೆ ಕ್ರಶ್ ಇತ್ತು, ಮೈಕಲ್ ಬಂದಿದ್ದಕ್ಕೆ ಹಿಂದೆ ಸರಿದೆ ಅಂತ ಸ್ನೇಹಿತ್ ಹೇಳಿದ್ದಕ್ಕೆ, ಇಶಾನಿಗೂ ಸಹ ಸ್ನೇಹಿತ್ ಮೇಲೆ ಕ್ರಶ್ ಇತ್ತು. ಆದರೆ ಇವರಿಬ್ಬರೂ ಪರಸ್ಪರ ಇದನ್ನು ಹೇಳಿಕೊಳ್ಳಲೇ ಇಲ್ಲ. 


COMMERCIAL BREAK
SCROLL TO CONTINUE READING

ಒಂದಿನ ನಮ್ರತಾ ಗೌಡ  ಇಶಾನಿಗೆ ಮೈಕಲ್ ಜೊತೆ ಟ್ರೈ ಮಾಡು ಅಂತ ಸಲಹೆ ಕೊಟ್ಟದಕ್ಕೆ, ಬಳಿಕ ಮೈಕಲ್- ಇಶಾನಿ ಜೊತೆ ಸ್ನೇಹ ಬೆಳೆದು ಇವರಿಬ್ಬರು ಮನದ ಭಾವನೆಗಳನ್ನು ಹಂಚಿಕೊಂಡು ಒಂದಾದರು. ಆಮೇಲೆ ಈಶಾನಿ ನನ್ನ ಗರ್ಲ್‌ಫ್ರೆಂಡ್ ಅಂತ ಮೈಕಲ್ ಅಧಿಕೃತವಾಗಿ ಹೇಳಿದ್ದರಿಂದ, ಅಲ್ಲಿಗೆ ಸ್ನೇಹಿತ್‌ಗೆ ಒಂದು ಚಾನ್ಸ್ ಮಿಸ್ ಆಗಿತ್ತು.ದೊಡ್ಮನೆಯಲ್ಲಿ ಕಾರ್ತಿಕ್ ಹಾಗೂ ಸಂಗೀತಾ ಫ್ರೆಂಡ್ಸ್‌ ಆದರಿಂದ,  ಸ್ನೇಹಿತ್‌ಗೆ ನಮ್ರತಾ ಬಿಟ್ಟರೆ ಬೇರೆ ಯಾವ ಆಯ್ಕೆಯೂ ಇಲ್ಲದೆ ಮೊದಲ ದಿನದಿಂದಲೂ ನಮ್ರತಾ ಜೊತೆ ಫ್ಲರ್ಟ್ ಮಾಡುತ್ತಲೇ ಬಂದಿದ್ದಾರೆ.


ಇದನ್ನು ಓದಿ: ಬಿಗ್‌ ಬಾಸ್ ಕೊಟ್ಟ ಆ ಒಂದು ಟಾಸ್ಕ್‌ ಮನೆ ಮಂದಿಯ ಹಾರ್ಟ್‌ ಬ್ರೇಕ್‌ ಮಾಡಿದೆ!


ಇನ್ನೊಂದು ಕಡೆ ನಮ್ರತಾ ಜೊತೆ ಸ್ನೇಹಿತ್ ಡೇಟ್ ಪ್ಲ್ಯಾನ್ ಮಾಡುತ್ತಿದ್ದು, ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇವೆಲ್ಲವುದರ ಮಧ್ಯೆ ಸ್ನೇಹಿತ್  ನಮ್ರತಾ ಜೊತೆ ಫ್ಲರ್ಟ್ ಮಾಡೋದು ಬಿಟ್ಟಿಲ್ಲ. ಸ್ನೇಹಿತ್‌ "ನೀವು ಬಂದಮೇಲೆ ಮೋಡದಿಂದ ಸೂರ್ಯ ಹೊರಗಡೆ ಬಂದ, ನಿಮ್ಮ ಐಡಿಯಲ್ ಟೈಪ್ ಏನೇ ಆಗಿರಲಿ. ಈ ಮನೆಯಲ್ಲಿ ಡಿಯಲ್ ನಾನೇ. ನನ್ನ ಅಮ್ಮ ಇದನ್ನು ಎಂಜಾಯ್ ಮಾಡ್ತಾರೆ. ನನ್ನ ಅಮ್ಮನಿಗೆ ನಾನು ರೊಮ್ಯಾನ್ಸ್ ಮಾಡೋದು ಇಷ್ಟ. ಒಂದು ಮಹಿಳೆಯನ್ನು ಗೌರವಿಸೋದು ರೊಮ್ಯಾನ್ಸ್" ಎಂದು ಗಾರ್ಡನ್ ಏರಿಯಾದಲ್ಲಿ ನಮ್ರತಾ ಬಳಿ ಮಾತನಾಡಿದ್ದಾರೆ.


ಸ್ನೇಹಿತ್ ಮಾತು ಕೇಳಿ ನಮ್ರತಾ ದಂಗಾಗಿದ್ದು, ಕೆಲವು ಕ್ಷಣಗಳ ಕಾಲ ಈ ಸಂವಹನ ನಡೆದಿದೆ ಅಷ್ಟೇ. ಸ್ನೇಹಿತ್‌ನ ಈ ಮಾತುಗಳು ವೀಕ್ಷಕರಿಗೂ ಸರ್ಪ್ರೈಸ್ ಆಗಿದ್ದು, ಮೊದಲ ವಾರ ಸಖತ್ ಆಕ್ಟಿವ್ ಆಗಿದ್ದ ಸ್ನೇಹಿತ್ ಆಮೇಲೆ ಸ್ವಲ್ಪ ಸೈಲೆಂಟ್ ಆಗುತ್ತ ಬಂದರು. ನಂತರ ನಮ್ರತಾ "ನನ್ನ ಬದಲು ಬೇರೆ ಹುಡುಗಿ ಇದ್ದಿದ್ರೆ ವರ್ಕೌಟ್ ಆಗಿರೋದು. ಸ್ನೇಹಿತ್ ಅವರ ಮಮ್ಮಿ ಡ್ಯಾಡಿ ಇದನ್ನು ನೋಡ್ತಿದ್ರೆ ನಿಮ್ಮ ಮಗನಿಗೆ ಬುದ್ಧಿ ಹೇಳಿ" ಎಂದು ನಮ್ರತಾ ಹೇಳಿದ್ದಾರೆ. 



 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.