Karthik Vs Snehith: ಬಿಗ್‌ಬಾಸ್‌ ಮನೆಯಲ್ಲಿ ಏನೇ ಮಾಡಿದ್ರು, ಮಾತಾಡಿದ್ರು, ಅದೆಲ್ಲವೂ ಕ್ಯಾಮೆರಾಗಳಲ್ಲಿ ಸೆರೆಯಾಗುತ್ತಿದ್ದು, ಮೈಕ್‌ನಲ್ಲಿ ರೆಕಾರ್ಡ್ ಆಗುತ್ತದೆ. ಯಾರ ಬಳಿ ಏನಾದರೂ ಹೇಳಿದರೆ, ಅದನ್ನೇ ಅಸ್ತ್ರ ಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದ್ದು,ಸದ್ಯ ಇದರ ಅನುಭವ ಈಗ ಕಾರ್ತಿಕ್‌ಗೆ ಆಗಿ, ಇದರಿಂದ ಒಳ್ಳೆಯ ಪಾಠ ಕಲಿತಿದ್ದಾರೆ. ಸಾಮಾನ್ಯವಾಗಿ ಬಿಗ್‌ಬಾಸ್‌ ಮನೆಯೊಳಗೆ ಇರುವಾಗ ಹೊರಗಿನ ಪರ್ಸನಲ್‌ ವಿಚಾರಗಳನ್ನು ಚರ್ಚೆ ಮಾಡಬಾರದು ಅಂತ  ಅಂದುಕೊಳ್ಳುತ್ತಾರೆ. ಆದರೆ ಕಾರ್ತಿಕ್‌ ಬಗ್ಗೆ ಹೊರಗಿನ ವಿಚಾರಗಳನ್ನು ಕೂಡ 'ದೊಡ್ಮನೆ ಮನೆಯೊಳಗೆ ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಬಿಗ್ ಬಾಸ್‌' ಮನೆಯೊಳಗೆ ಎರಡು ತಂಡಗಳಿದ್ದು, ಒಂದು ಗಂಧದ ಗುಡಿ, ಮತ್ತೊಂದು ವಜ್ರಕಾಯ. ಒಂದು ತಂಡದ ಸದಸ್ಯರಿಗೆ ಮತ್ತೊಂದು ತಂಡದ ಸದಸ್ಯರು ಬಿಗ್ ಬಾಸ್‌ ಹೇಳುವ ಭಾವನೆಗಳನ್ನು ಹೊರತರಿಸಬೇಕು. ನಗು, ಅಳು, ಕೋಪ ಎಲ್ಲವೂ ಇದರಲ್ಲಿತ್ತು. ಕೋಪ ಬರಿಸಬೇಕು ಎಂದು ಹೇಳಿದಾಗ, ಕಾರ್ತಿಕ್ ಬಳಿ ಬಂದ ಸ್ನೇಹಿತ್, ಒಂದಷ್ಟು ವಿಚಾರಗಳನ್ನು ಹೇಳಿದ್ದು, ಅದು ಕಾರ್ತಿಕ್‌ ಬೇಸರ ತಂದಿತು. ಆದರೆ ಆಗ ಅದನ್ನು ತೋರಿಸಿಕೊಳ್ಳಲಿಲ್ಲ.


ಇದನ್ನು ಓದಿ: BBK 10: ಬದಲಾಯ್ತು ವೇಷ; ಮತ್ತೆ ಶುರುವಾಯ್ತು ‘ತುಕಾಲಿ’ ಹಾಸ್ಯ!


ಬಿಗ್‌ಬಾಸ್‌  ಮನೆಯಲ್ಲಿ ಯಾವಾಗ ಕಾರ್ತಿಕ್‌ ತಮ್ಮ ಹೊರಗಿನ ಪರ್ಸನಲ್ ವಿಚಾರಗಳು ಚರ್ಚೆ ಆಯಿತೋ,  ಆ ವೇಳೆ ಕಾರ್ತಿಕ್ ಬೇಸರಗೊಂಡರು. ಬಳಿಕ ಎಲ್ಲಾ ಟಾಸ್ಕ್‌ಗಳು ಮುಗಿದ ಬಳಿಕ ಪಾತ್ರೆ ತೊಳೆಯುತ್ತಿದ್ದ , ತನಿಷಾ ಬಳಿಕ ಮಾತನಾಡಿದರು. 'ಇನ್ಮೇಲೆ ಯಾವ ಪರ್ಸನಲ್ ವಿಷಯವನ್ನು, ಯಾರ್ ಹತ್ರನೂ ಹೇಳಿಕೊಳ್ಳಬಾರದಪ್ಪ. ಎಲ್ಲ ಎರಡು ತಲೆ ಹಾವುಗಳು ಇಲ್ಲಿರೋದು..' ಎಂದು ಹೇಳಿ ಬೇಸರ ಮಾಡಿಕೊಂಡರು. ಆಗ ತನಿಷಾ ಸಹ ಅದೇ ಮಾತನ್ನು ಹೇಳಿದರು.


ಸ್ನೇಹಿತ್‌ ಕಾರ್ತಿಕ್ ಬಳಿ ಬಂದು , "ನನ್ನ ಗಂಡಸ್ತನದ ಬಗ್ಗೆ ಮಾತನಾಡಿದೆ ಅಲ್ವಾ? ಗಂಡಸ್ತನದ ಬಗ್ಗೆ ಮಾತನಾಡುವ ಅರ್ಹತೆಯೇ ನಿನಗಿಲ್ಲ. ಈ ಮನೆಗೆ ಬಂದು ಏನು ಮಾಡಿದ್ದೀಯಾ ನೀನು..? ಸಂಗೀತಾ ಶೃಂಗೇರಿ ಹಿಂದೆ ಓಡಾಡಿದ್ಯಾ ಅಷ್ಟೇ.. ಅದು ಬಿಟ್ರೇ ಇಲ್ಲಿ ನೀನೇನೂ ಕಿತ್ತು ಹಾಕಿಲ್ಲ. ಲವ್ ಬಗ್ಗೆ ನೀನು ಪಾಠ ಮಾಡ್ತೀಯಾ...? ಲವ್ ಬಗ್ಗೆ ಒಂದು ಬುಕ್ ಬರಿ ಗುರು. ಹೊರಗಡೆ ಒಬ್ಬಳು ಹುಡುಗಿ, ನಿನಗಾಗಿ ಹರಕೆ ಹೊತ್ತುಕೊಂಡು ನೀನು ಬಿಗ್‌ಬಾಸ್‌ಗೆ ಬರಲಿ ಅಂತ ಪ್ರಾರ್ಥನೆ ಮಾಡುತ್ತಿದ್ರೆ, ಅಂಥ ಹುಡ್ಗಿಯ ಹಾರ್ಟ್ ಬ್ರೇಕ್ ಮಾಡಿ, ಇಲ್ಲಿ ಯಾವಳೋ ಕ್ರಶ್ ಅಂತೆ, ಕ್ರ್ಯಾಶ್ ಆದವಳನ್ನು ಇಟ್ಕೊಂಡು ಆಡುತ್ತೀಯಲ್ಲಾ.. ನೀನು ಲವ್ ಬಗ್ಗೆ, ನನ್ನ ಗೇಮ್ ಬಗ್ಗೆ ಮಾತಾನಾಡುತ್ತೀಯಾ..' ಎಂದು ಖಾರವಾದ ಮಾತುಗಳಿಂದ ಬೈದು ಬೇಸರವಾಗುವಂತೆ ಮಾಡಿದ್ದಾರೆ.


ಇದನ್ನು ಓದಿ: Bigg Boss 10: ದೊಡ್ಮನೆಯಲ್ಲಿ ಲವ್ ಸ್ಟೋರಿಗಳ ಹಾವಳಿ ಜೋರು..!


ಬಿಗ್‌ಬಾಸ್‌ ಮನೆಯಲ್ಲಿ ಹೀಗೆ ಮನೆಯ ಹೊರಗಿನ ಪರ್ಸನಲ್ ವಿಚಾರಗಳನ್ನು  ಹೇಳಿ, ಅದನ್ನು ಗೇಮ್‌ಗೆ ಬಳಸಿಕೊಂಡಿದ್ದು, ಕಾರ್ತಿಕ್‌ಗೆ ತುಂಬ ಬೇಸರ ತಂದಿದ್ದರಿಂದ , ಇನ್ಮುಂದೆ ಯಾರ ಬಳಿ ಏನನ್ನೂ ಹೇಳುವುದಿಲ್ಲ ಎಂಬ ನಿರ್ಧಾರ ಮಾಡಿದರು.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.