Bigg Boss Kannada: ಬೆಳಗಿನ ಪ್ರೋಮೊದಲ್ಲಿ ತುಕಾಲಿ ಸಂತೋಷ್‌ ಅವರ ಹಾಸ್ಯದ ಹೊನಲಿನ ಝಲಕ್‌ ಕೊಟ್ಟಿದ್ದ JioCinema ಮಧ್ಯಾಹ್ನದ ಪ್ರೋಮೊದಲ್ಲಿ ಮನೆಯೊಳಗಿನ ಟಾಸ್ಕ್‌ ಕ್ಲ್ಯಾಶ್‌ ಕಾಣಿಸಿದೆ.


COMMERCIAL BREAK
SCROLL TO CONTINUE READING

ನಿನ್ನೆ ಎದುರಾಳಿ ತಂಡದ ಸ್ಫರ್ಧಿಗಳ ಮುಖದ ಮೇಲೆ ವಿವಿಧ ಭಾವಗಳನ್ನು ಮೂಡಿಸುವ ಟಾಸ್ಕ್‌ ಅನ್ನು ಬಿಗ್‌ಬಾಸ್ ನೀಡಿದ್ದರು. ಹಾಗೆ ನೋಡಿದರೆ ಕೃತಕವಾಗಿ ಪ್ರಯತ್ನಿಸಿ ಆಯಾ ಭಾವವನ್ನು ಮೂಡಿಸಲು ಯಾರೂ ಯಶಸ್ವಿಯಾಗಿರಲಿಲ್ಲ. ಆದರೆ ಇಂದಿನ ಟಾಸ್ಕ್‌ನಲ್ಲಿ ತುಂಬ ಸಹಜವಾಗಿಯೇ ಎಲ್ಲ ಭಾವಗಳೂ ವ್ಯಕ್ತವಾಗುತ್ತಿರುವ ಹಾಗಿದೆ. 


ಇದನ್ನೂ ಓದಿ- BBK 10: ಬದಲಾಯ್ತು ವೇಷ; ಮತ್ತೆ ಶುರುವಾಯ್ತು ‘ತುಕಾಲಿ’ ಹಾಸ್ಯ!


ಒಂದು ಪ್ಲ್ಯಾಸ್ಟಿಕ್‌ ಬಾಕ್ಸ್‌ನ ಎರಡೂ ಬದಿಯಲ್ಲಿ ಹಗ್ಗಗಳಿಂದ ಕಟ್ಟಲಾಗಿದೆ. ಅದನ್ನು ಎರಡು ಸ್ಪರ್ಧಿಗಳ ಸೊಂಟಕ್ಕೆ ಬಿಗಿಯಲಾಗಿದೆ. ಅದನ್ನು ಇಟ್ಟುಕೊಂಡು ಓಡುವ ಟಾಸ್ಕ್‌ ಅನ್ನು ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳಿಗೆ ನೀಡಿರುವಂತಿದೆ. ಈ ಟಾಸ್ಕ್‌ನಲ್ಲಿಯೇ ಪರಸ್ಪರ ತಳ್ಳಿಕೊಳ್ಳುವ, ಕಿರುಚಾಡಿಕೊಳ್ಳುವ ಸನ್ನಿವೇಶಗಳು ಸೃಷ್ಟಿಯಾಗಿವೆ. 


ಇದನ್ನೂ ಓದಿ- Bigg Boss 10: ದೊಡ್ಮನೆಯಲ್ಲಿ ಲವ್ ಸ್ಟೋರಿಗಳ ಹಾವಳಿ ಜೋರು..!


ವಿನಯ್-ಕಾರ್ತಿಕ್‌ ನಡುವೆ ತಳ್ಳಾಡುವಿಕೆಗಳು ನಡೆದಿದ್ದರೆ, ಸಂಗೀತಾ ಅವರನ್ನು ಪರೋಕ್ಷವಾಗಿ ಅಣುಕಿಸುವ ಮೂಲಕ ವಿನಯ್‌ ಇನ್ನಷ್ಟು ಕೆಣಕಿದ್ದಾರೆ. ಮತ್ತದೇ ‘ಫೇರ್‍ ಗೇಮ್‌’ ಚರ್ಚೆ ಏರುದನಿಯಲ್ಲಿಯೇ ಮುನ್ನೆಲೆಗೆ ಬಂದಿದೆ. 


ಅಷ್ಟಕ್ಕೂ ಈ ಟಾಸ್ಕ್‌ನ ಸ್ವರೂಪವೇನು? ಸ್ಪರ್ಧಿಗಳು ಜಿದ್ದಾಜಿದ್ದಿಗೆ ಬಿದ್ದು ಜಗಳವಾಡಲು ಕಾರಣವೇನು? ತಿಳಿದುಕೊಳ್ಳಲು JioCinemaದಲ್ಲಿ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.