Varthur Santhosh Marriage : ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿ ವರ್ತೂರ್‌ ಸಂತೋಷ್‌ ಮದುವೆ ವಿಚಾರ ಇತ್ತೀಚೆಗೆ ತೀರಾ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಬಿಗ್‌ ಬಾಸ್‌ ಮನೆಯಲ್ಲಿ ತನಿಷಾ ಕುಪ್ಪಂಡ ಮತ್ತು ವರ್ತೂರ್‌ ನಡುವೆ ಲವ್‌ ಆಗಿದೆ ಎಂಬ ವಿಚಾರ. ಮನೆಮಂದಿಯೆಲ್ಲ ತನಿಷಾ ಮತ್ತು ವರ್ತೂರ್‌ ನಡುವೆ ಏನೋ ಇದೆ ಎಂದು ಕಾಲೆಳೆಯುತ್ತಿರುತ್ತಾರೆ. ಇತ್ತೀಚಿನ ವೀಕೆಂಡ್‌ ಸಂಚಿಕೆಯಲ್ಲಿ ಸುದೀಪ್‌ ಕೂಡ ವರ್ತೂರ್‌ ಅವರನ್ನು ರೇಗಿಸಿದ್ದಾರೆ. ಅಲ್ಲದೇ ಅವರಿಬ್ಬರ ಒಡನಾಟ ಸಹ ಹಾಗೇ ಭಾಸವಾಗುತ್ತಿದೆ. 


COMMERCIAL BREAK
SCROLL TO CONTINUE READING

ಬಿಗ್‌ ಬಾಸ್‌ ವೀಕ್ಷಕರು ವರ್ತೂರ್‌ ಮತ್ತು ತನಿಷಾ ಜೋಡಿಯನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಇಬ್ಬರ ನಡುವೆ ಒಂದು ಕ್ಯೂಟ್‌ ಬಾಂಡಿಂಗ್‌ ಬೆಳೆಯುತ್ತಿರುವುದು ನೋಡುಗರಿಗೂ ಕಾಣುತ್ತಿದೆ. ಇಬ್ಬರೂ ಈ ಮನೆಯವರ ಮಾತನ್ನಾಗಲಿ.. ಸುದೀಪ್‌ ಅವರು ರೇಗಿಸಿದಾಗಲೂ ತಮ್ಮ ನಡುವೆ ಹಾಗೇನಿಲ್ಲ ಎಂದು ಹೇಳಿಲ್ಲ.  


ಇದನ್ನೂ ಓದಿ : ವರ್ತೂರ್‍ ಸಂತೋಷ್‌ಗೆ ಸಿಕ್ತು ಅಮ್ಮನ ಕೈತುತ್ತು!! 


ತನಿಷಾ ಹಾಗೂ ವರ್ತೂರ್‌ ನಡುವಿನ ಸಂಬಂಧದ ಬಗ್ಗೆ ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದ ರಕ್ಷಕ್‌ ಬುಲೆಟ್‌ ಮಾತನಾಡಿದ್ದರು. ರಕ್ಷಕ್‌ ಬುಲೆಟ್‌ ಪ್ರಕಾರ, ವರ್ತೂರ್‌ ಸಂತೋಷ್‌ ಅವರಿಗೆ ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥವಾಗಲಿದೆಯಂತೆ. ಬಿಗ್ ಬಾಸ್‌ ಮನೆಯಿಂದ ಹೊರ ಬರುತ್ತಿದ್ದಂತೆ ಮುಂದಿನ ದಿನಗಳಲ್ಲಿ ವರ್ತೂರ್‌ ಎಂಗೇಜ್ಮೆಂಟ್‌ ನಡೆಯಲಿದೆಯಂತೆ. ಹೊರಗಡೆ ವರ್ತೂರ್‌ ಗಾಗಿ ಬೇರೆ ಹುಡುಗಿ ಇದ್ದಾರಂತೆ. ನಾನು ತುಕಾಲಿ ಅವರು ತಮಾಷೆಗೆ ಬೆಂಕಿ ಅಂತ ತನಿಷಾ ಜೊತೆ ರೇಗಿಸುತ್ತಿದ್ವಿ ಎಂದು ರಕ್ಷಕ್‌ ಹೇಳಿದ್ದಾರೆ. 


ಇದರ ಬೆನ್ನಲ್ಲೇ ಅನೇಕ ಜನರು ವರ್ತೂರ್‌ ಮದುವೆ ಕುರಿತು ಹಲವು ರೀತಿಯಲ್ಲಿ ಸರ್ಚ್‌ ಮಾಡುತ್ತಿದ್ದಾರೆ. ಕೆಲವರ ಪ್ರಕಾರ, ವರ್ತೂರ್‌ ಸಂತೋಷ್‌ ಈಗಾಗಲೇ ಮದುವೆ ಆಗಿದೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಇಲ್ಲ ವರ್ತೂರ್‌ ಸ್ಟಿಲ್‌ ಸಿಂಗಲ್‌ ಎಂದು ಹೇಳುತ್ತಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಖುದ್ದು ವರ್ತೂರ್‌ ಅವರಾಗಲಿ ಅವರ ಮನೆಯವರಾಗಲಿ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. 


ಇದನ್ನೂ ಓದಿ : Bigg Boss 10: ಕನ್ವಿನ್ಸ್ ಆಗಲಿಲ್ಲ ವರ್ತೂರ್‌.. ಬಲಗಾಲಿಟ್ಟು ಮನೆಯೊಳಗೆ ಬಂದ್ರು ಸುಷ್ಮಾ ರಾವ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.