Varthur Santosh Became Captain In BBK: ಬಿಗ್‌ಬಾಸ್‌ ಮನೆಯಲ್ಲಿ ಶುಕ್ರವಾರ ಬಂತು ಅಂದರೆ, ಬಿಗ್‌ಬಾಸ್‌ ಮುಖ್ಯವಾದ ಟಾಸ್ಕ್‌ಗಳನ್ನು ನೀಡುತ್ತಾರೆಂದು  ದೊಡ್ಮನೆಯ ಸದಸ್ಯರೆಲ್ಲರೂ ಅಲರ್ಟ್ ಆಗಿ ಬಿಡುತ್ತಾರೆ. ಆ ಮುಖ್ಯವಾದ ಟಾಸ್ಕ್‌ಗಳಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಬಹಳ ಮುಖ್ಯವಾಗುತ್ತಿದ್ದು, ಕೆಲವೊಬ್ಬರಿಗೆ ಮಾತ್ರ ಎರಡೆರಡು ಬಾರಿ ಕ್ಯಾಪ್ಟನ್ ಆಗುವುದಕ್ಕೆ ಅವಕಾಶ ಸಿಗುವುದು. ಈ ಹಿಂದೆ ಇದೇ ಸೀಸನ್‌ನಲ್ಲಿ ಆ ಅದೃಷ್ಟ ಸ್ನೇಹಿತ್ ಹಾಗೂ ನೀತೂಗೆ ಸಿಕ್ಕಿತ್ತು. ಅದೇ ರೀತಿ ಕಳಪೆ ಪಟ್ಟ ಸಹ ಕೆಲವೊಂದು ಸಲ ಒಬ್ಬರಿಗೆ ಎರಡೆರಡು ಬಾರಿ ಬಂದು ಬಿಡುತ್ತಿದ್ದು, ಅದೇ ರೀತಿ ಮುಂದುವರೆದರೆ ಕಳಪೆ ಮತ್ತೆ ಮತ್ತೆ ಬರುತ್ತಲೇ ಇರುತ್ತದೆ.ಆ ಸದಸ್ಯ ತಮ್ಮನ್ನು ತಾವು ಒಳ್ಳೆಯ ರೀತಿಯಲ್ಲಿ ಬದಲಾಯಿಸಿಕೊಂಡರೆ ಉತ್ತಮವೂ ಸಿಗುತ್ತದೆ. 


COMMERCIAL BREAK
SCROLL TO CONTINUE READING

ಬಿಗ್‌ಬಾಸ್‌ನ ನಿನ್ನೆಯ ಸಂಚಿಕೆಯಲ್ಲಿ ಮನೆಯಲ್ಲಿ ಕ್ಯಾಪ್ಟನ್ ಆಗಲು ಎಲ್ಲರೂ ರೇಸ್‌ನಲ್ಲಿಯೇ ಇದ್ದು, ಆದರೆ ಬಿಗ್‌ಬಾಸ್ ಸ್ನೇಹಿತ್‌ಗೆ ವಿಶೇಷ ಅಧಿಕಾರ ನೀಡಿ ಈತನಿಂದ ರೇಸ್‌ನಲ್ಲಿದ್ದ ಕೆಲವರನ್ನು ಉರುಳಿಸಿತ್ತು. ಒಂದೊಂದು ಬಾರಿ ಎರಡು ಟೀಂನಿಂದ ಅರ್ಹರಲ್ಲದವರನ್ನು ತೆಗೆಯಬೇಕಾದ ಕಾರಣ, ಕಡೆಗೆ ನಾಲ್ಕು ಜನ ಕ್ಯಾಪ್ಟನ್ ರೇಸ್‌ನಲ್ಲಿ ಉಳಿದರು. ಸಿರಿ, ಮೈಕೆಲ್, ವರ್ತೂರು ಸಂತೋಷ್ ಹಾಗೂ ಅವಿನಾಶ್. 13 ನಿಮಿಷ ಏಣಿಸಬೇಕು. ಚೇರ್ ಮೇಲೆ ಸದಸ್ಯರು ಕುಳಿತುಕೊಳ್ಳುತ್ತಾರೆ. ಅವರನ್ನು ತಿರುಗಿಸಬೇಕು. ನಂಬರ್ ಎಣಿಸುವಾಗ ಮನೆ ಮಂದಿ ಡಿಸ್ಟರ್ಬ್ ಮಾಡಬಹುದು. ಅವರು ಸರಿಯಾಗಿ ಕೌಂಟ್ ಮಾಡದ ರೀತಿ ನೋಡಿಕೊಳ್ಳಬೇಕು. ಅದನ್ನು ಮೀರಿ ಹದಿಮೂರು ನಿಮಿಷದ ಆಸುಪಾಸಿನಲ್ಲಿ ಕೌಂಟ್ ಮಾಡಿದರೆ ಅವರು ವಿನ್ ಆಗುತ್ತಾರೆ. ಈ ವಾರದ ಕ್ಯಾಪ್ಟನ್ ಆಗುತ್ತಾರೆ. 


ಇದನ್ನೂ ಓದಿ: BK 10 : ‘ಕೃಷ್ಣ ಜನ್ಮಸ್ಥಾನಕ್ಕೆ ಹೋಗ್ತಿದೀನಪ್ಪಾ’..! ಖೈದಿಗಳ ಬಟ್ಟೆ ಧರಿಸಿ ಜೈಲು ಸೇರಿದ ಕಾರ್ತಿಕ್‌


ಬಿಗ್‌ಬಾಸ್ ಕೊಟ್ಟ ಈ ಟಾಸ್ಕ್‌ನಲ್ಲಿ ಅವಿನಾಶ್ 9 ನಿಮಿಷ ಎಣಿಸಿದರೇ, ಇತ್ತ ಮೈಕೆಲ್, 15.15 ನಿಮಿಷ, ವರ್ತೂರು ಸಂತೋಷ್ 12.13 ನಿಮಿಷ ಹಾಗೂ ಸಿರಿ 19 ನಿಮಿಷ ಎಣಿಸಿದ್ದಾರೆ. ಸಿರಿ ಎಣಿಸಿದ್ದನ್ನು ನೋಡಿ ತುಕಾಲಿ ಸಂತೋಷ್  ಬನ್ನಿ ಬನ್ನಿ 20 ನಿಮಿಷ ಎಣಿಸಿದ್ದೀರಾ ಎಂದಿದ್ದರು ಎಂದು ರೇಗಿಸಿದರೂ, ಕೊನೆಗೂ ಸಿರಿ 19 ನಿಮಿಷ ಎಣಿಸಿದ್ದರು. ಮನೆಯವರು ಸಾಕಷ್ಟು ಡಿಸ್ಟರ್ಬ್ ಮಾಡಿದ್ದರಿಂದ, ಎಲ್ಲರೂ ಹದಿಮೂರು ನಿಮಿಷ ಬಿಟ್ಟು ಹೆಚ್ಚಿನ ಸಂಖ್ಯೆಯಲ್ಲಿಯೇ ಎಣಿಸಿದ್ದಾರೆ. ಆದರೆ, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ 47 ಸೆಕೆಂಡ್‌ಗಳ ಅಂತರದಲ್ಲಿ ಗೆಲುವು ಸಾಧಿಸಿ, ಮುಂದಿನವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. 


ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆದವರಿಗೆ ಸ್ಪೆಷಲ್ ಗಿಫ್ಟ್ ಒಂದು ಸಿಗುತ್ತಿದ್ದು, ಕ್ಯಾಪ್ಟನ್ ಆದವರ ಸ್ವೀಟೆಸ್ಟ್ ಮೆಮೊರಿ ಎನಿಸುವಂತ ಫೋಟೋಗಳು ಗಿಫ್ಟ್ ಆಗಿ ಬರುತ್ತದೆ. ಬಿಗ್‌ಬಾಸ್ ಅಭಿನಂದನೆ ಸಲ್ಲಿಸಿ, ಗಿಫ್ಟ್ ನೀಡಿದಕ್ಕೆ, ಈ ಗಿಫ್ಟ್ ಬಂದ ಕೂಡಲೇ ವರ್ತೂರು ಸಂತೋಷ್ ಫುಲ್ ಖುಷಿಯಾಗಿದ್ದಾರೆ. ಮನೆಯವರೆಲ್ಲಾ ಗೆಸ್ ಮಾಡಲು ಹೇಳಿದಾಗ, ಎತ್ತುಗಳು ಬಂದಿದೆಯಾ.. ನಾನು ಚಿಕ್ಕ ಮಗು ಅಪ್ಪ ಎತ್ತುಕೊಂಡಿರುವುದು. ಅಮ್ಮ ನಂದು ಎಂದಿದ್ದಾರೆ. ಕಡೆಗೆ ಫೋಟೋ ನೋಡಿದ ಸಂತೋಷ್, ನಮ್ ಅಪ್ಪ ನನ್ ಥರನೇ ಇದಾರಲ್ಲ‌ ಎಂದಿದ್ದಾಗ ತುಕಾಲಿ, ನಿನ್ ಥರ ಅಲ್ಲ ಅವರ ಥರ ನೀನು ಅಂತ ಕರೆಕ್ಷನ್ ಮಾಡಿದ್ದಾರೆ. ಈ ವಾರ ವೈಲ್ಡ್ ಕಾರ್ಡ್ ಎಂಟ್ರಿಯಿಂದ ಬಂದ ಪವಿ ಹಾಗೂ ಅವಿನಾಶ್ ಇಬ್ಬರು ಉತ್ತಮ ತೆಗೆದುಕೊಂಡರೇ, ಇತ್ತ ಕಳಪೆ ಕಾರ್ತಿಕ್  ಆಗಿ, ಬಿಗ್‌ಬಾಸ್‌ ಮನೆಯ ಕ್ಯಾಪ್ಟನ್ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಆಗಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ