Varthur Santosh In BBK: ಬಿಗ್‌ಬಾಸ್‌ ಮನೆಯಲ್ಲಿ ಈ ವಾರ ಕ್ಯಾಪ್ಟನ್ ರೇಸ್‌ನಲ್ಲಿ ವರ್ತೂರು ಸಂತೋಷ್, ಮೈಕಲ್, ಸಿರಿ ಹಾಗೂ ಅವಿನಾಶ್ ಶೆಟ್ಟಿ ಇದ್ದು, ಈ ನಾಲ್ವರಿಗೆ ಬಿಗ್‌ಬಾಸ್ ಕ್ಯಾಪ್ಟನ್ ಆಯ್ಕೆ ಟಾಸ್ಕ್ ನೀಡಿದ ಅನುಸಾರ, ಗಾರ್ಡನ್ ಏರಿಯಾದಲ್ಲಿ ವೃತ್ತಾಕಾರದ ವೇದಿಕೆ ಮೇಲಿರುವ ಕುರ್ಚಿಯಲ್ಲಿ ನಾಲ್ವರು ಒಬ್ಬರಾದ ಮೇಲೆ ಒಬ್ಬರು ಬಂದು ಕೂತು 13 ನಿಮಿಷಗಳನ್ನು ಎಣಿಸಬೇಕಿತ್ತು. ಕುರ್ಚಿ ಮೇಲೆ ಕೂತವರು 13 ನಿಮಿಷ ಮುಗಿದಿದೆ ಎಂದು ಭಾವಿಸಿದರೆ, ನೇತು ಹಾಕಿರುವ ಗಂಟೆಯನ್ನು ಬಾರಿಸಬೇಕಿತ್ತು. ಮನೆಯ ಉಳಿದ ಸ್ಪರ್ಧಿಗಳು ಹಲಗೆಯನ್ನು ಸುತ್ತಿಸುತ್ತಾ, ಮಾತು ಅಥವಾ ಶಬ್ದವನ್ನು ಮಾಡುತ್ತಾ, ಆಡುತ್ತಿರುವ ಸ್ಪರ್ಧಿಗಳ ಏಕಾಗ್ರತೆ ಕೆಡಿಸುವ ಪ್ರಯತ್ನ ಮಾಡಬೇಕಿತ್ತು. 13 ನಿಮಿಷ ನಿಖರವಾಗಿ ಎಣಿಸುವವರು ಅಥವಾ ಅದಕ್ಕೆ ಸಮೀಪವಾಗಿರುವವರು ಆಟ ಗೆದ್ದು ಕ್ಯಾಪ್ಟನ್ ಆದಂತೆ.


COMMERCIAL BREAK
SCROLL TO CONTINUE READING

ಈ ಕ್ಯಾಪ್ಟನ್ ಅಯ್ಕೆ ಚಟುವಟಿಕೆಯಲ್ಲಿ ಸಿರಿ ಮತ್ತು ಅವಿನಾಶ್ ಶೆಟ್ಟಿ ನ್ಯಾಯವಾಗಿ ಆಡಿದರೇ, ಇತ್ತ ಮೈಕಲ್ ಹಾಗೂ ವರ್ತೂರು ಸಂತೋಷ್‌ಗೆ ವಿನಯ್ ಸಹಾಯ ಮಾಡಿದರು. ವಿನಯ್ ಸಹ 13 ನಿಮಿಷಗಳನ್ನು ಕೌಂಟ್ ಮಾಡುತ್ತಿದ್ದಯ, ಅದರ ಪ್ರಕಾರ 13 ನಿಮಿಷ ಆದಾಗ ಸಿಗ್ನಲ್ ಕೊಡುತ್ತಿದ್ದರು. ಅದನ್ನ ಗಮನಿಸಿ ಮೈಕಲ್ ಮತ್ತು ವರ್ತೂರು ಸಂತೋಷ್ ಗಂಟೆ ಬಾರಿಸಿದರು. ಹಾಗೆ ನೋಡೋದಾದ್ರೆ, ಟಾಸ್ಕ್‌ನಲ್ಲಿ ವರ್ತೂರು ಸಂತೋಷ್ ಏಕಾಗ್ರತೆಯಿಂದ ಭಾಗವಹಿಸದೇ, ವೇದಿಕೆ ಮೇಲೆ ನಗುತ್ತಾ ಕೂತಿದ್ದರು. ಅಲ್ಲೇ ಪಕ್ಕದಲ್ಲೇ ಇದ್ದ ವಿನಯ್ ಸಿಗ್ನಲ್ ಕೊಟ್ಟ ಬಳಿಕ ವರ್ತೂರು ಸಂತೋಷ್ ಗಂಟೆ ಬಾರಿಸಿದ್ದು ಸ್ಪಷ್ಟವಾಗಿದ್ದು, ವರ್ತೂರ್‌ ಸಂತೋಷ್ ಗೆದ್ಮೇಲೆ ವಿನಯ್‌ಗೆ  "ಥ್ಯಾಂಕ್ಸ್ ಅಣ್ಣ" ಎಂದಿದ್ದರು.


ಇದನ್ನೂ ಓದಿ: BBK 10: ಬಿಗ್‌ಬಾಸ್‌ನಲ್ಲಿ ಮಿನಿಟ್ಸ್‌ ಗೇಮ್‌ ಗೆದ್ದ ಹಳ್ಳಿಕಾರ್‌ : ದೊಡ್ಮನೆ ಕ್ಯಾಪ್ಟನಾದ ವರ್ತೂರ್‌ ಸಂತೋಷ್‌!


ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ಸ್ಥಾನಕ್ಕೆ ಅದರದ್ದೇ ಬೆಲೆ, ಗತ್ತು, ಗೌರವ ಇದ್ದು, ಹೀಗಿರುವಾಗ, ಕ್ಯಾಪ್ಟನ್ ಆಯ್ಕೆ ಚಟುವಟಿಕೆಯಲ್ಲೇ ಚೀಟಿಂಗ್, ಮ್ಯಾಚ್ ಫಿಕ್ಸಿಂಗ್, ಅಪ್ರಾಮಾಣಿಕತೆ ನಡೆದಿದ್ದು, ಅದನ್ನ ಬಿಗ್‌ಬಾಸ್‌ ಗಂಭೀರವಾಗಿ ಪರಿಗಣಿಸಿದ್ದಾರೆ. ಕ್ಯಾಪ್ಟನ್ ಆಯ್ಕೆ ಚಟುವಟಿಕೆಯನ್ನ ನ್ಯಾಯವಾಗಿ ನಡೆಸದ ಕಾರಣ ಕಠಿಣ ಶಿಕ್ಷೆಯನ್ನೇ ಬಿಗ್‌ಬಾಸ್‌ ಘೋಷಿಸಿದ್ದಾರೆ. ಬಳಿಕ ನಮ್ರತಾಗೆ ವೀಕ್ಷಕರೊಬ್ಬರು ಪ್ರಶ್ನೆ ಕೇಳಿದ ಬಳಿಕ, "ವರ್ತೂರು ಸರ್.. ನಿಮಗೆ ಏನಾದರೂ ಹೇಳೋಕೆ ಇದ್ಯಾ ನನಗೆ?" ಎಂದು ಸುದೀಪ್ ಪ್ರಶ್ನೆ ಮಾಡಿದಾಗ, "ನಿಮ್ಮ ಬಾಯಲ್ಲಿ ಏನು ಹೇಳಿದರೂ, ಅದು ನಡೆಯುತ್ತಿದೆ. ಕಳೆದ ವಾರ ನಮಗೊಂದು ಪ್ರಶ್ನೆ ಬಂದಿತ್ತು. ಯಾವಾಗ ಕ್ಯಾಪ್ಟನ್ ಆಗ್ತೀರಾ, ಯಾವಾಗ ಲೀಡರ್ ಆಗ್ತೀರಾ ಅಂತ ಪ್ರಶ್ನೆ ಬಂದಿತ್ತು. ಅವೆರಡೂ ಈಡೇರಿದೆ" ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.


ವರ್ತೂರ್‌ ಸಂತೋಷ್‌ ಪ್ರತಿಕ್ರಿಯೆ ಕೇಳಿದ ಬಳಿಕ, "ಕ್ಯಾಪ್ಟನ್ಸಿ ಬಂದಾಗ ಇಮ್ಯೂನಿಟಿ ಸಿಗುತ್ತೆ ಎಂಬ ಆಸೆ, ಇನ್ನೂ ಕೆಲವರಿಗೆ ಅಧಿಕಾರದ ಆಸೆ ಇರುತ್ತೆ. ವರ್ತೂರು ಸಂತೋಷ್ ಅವರೇ.. ನಿಮ್ಮ ಮುಗ್ಧತೆ ಮೇಲೆ, ನಿಮ್ಮ ನಡವಳಿಕೆ ಮೇಲೆ ಪ್ರೀತಿ, ಗೌರವ ಇದೆ. ಆದರೆ, ಇಲ್ಲಿಂದ ನಾನು ನಿಮ್ಮನ್ನ ಇಮ್ಯೂನಿಟಿ ಇಂದ ಡಿಸ್ಮಿಸ್ ಮಾಡ್ತಿದ್ದೇನೆ. ನೀವೇ ಹೋಗಿ ಕ್ಯಾಪ್ಟನ್ ರೂಮ್‌ನ ಖಾಲಿ ಮಾಡಿ.. ಹೊರಗಡೆ ಬನ್ನಿ." ಎಂದು ಕಿಚ್ಚ ಸುದೀಪ್ ಸೂಚಿಸಿದರು.


ಇದನ್ನೂ ಓದಿ: BBK 10: ಕಪ್ಪು ಕನ್ನಡಕ ಧರಿಸಿ ಡ್ರೋನ್‌ ಹಾಗೂ ಸಂಗೀತಾ ಬಿಗ್‌ಬಾಸ್‌ ಮನೆಗೆ ರೀ ಎಂಟ್ರೀ!


ಅನಂತರ ಸುದೀಪ್‌, "ಇನ್ಮೇಲೆ ಈ ಮನೆಗೆ ಕ್ಯಾಪ್ಟನ್ಸಿ ಟಾಸ್ಕ್ ಇರೋದಿಲ್ಲ. ಇನ್ಮೇಲೆ ಈ ಮನೆಗೆ ಕ್ಯಾಪ್ಟನ್ ಇರೋದಿಲ್ಲ. ಎಲ್ಲಿಯವರೆಗೂ ತಾವು ಕ್ಯಾಪ್ಟನ್‌ಶಿಪ್‌ ಎಂಬ ಸ್ಥಾನಕ್ಕೆ ಮರ್ಯಾದೆ ಕೊಡೋದಕ್ಕೆ ಬರೋದಿಲ್ವೋ, ಗೌರವ ಕೊಡೋದಕ್ಕೆ ಬರಲ್ವೋ.. ಈ ಮನೆಗೆ ಕ್ಯಾಪ್ಟನ್ ಅನ್ನೋರು ಯಾರೂ ಇರಕೂಡದು. ಎಲ್ಲಿ ರೆಸ್ಪೆಕ್ಟ್‌ನ ಕಮಾಂಡ್ ಮಾಡೋಕೆ ಒಬ್ಬ ಕ್ಯಾಪ್ಟನ್‌ಗೆ ಗೊತ್ತಾಗಲ್ವೋ.. ಎಲ್ಲಿಯವರೆಗೂ ನಿಮ್ಮೆಲ್ಲರಿಗೂ ಒಬ್ಬ ಕ್ಯಾಪ್ಟನ್.. ಯಾರೇ ಆಗಿರಲಿ.. ಅವರಿಗೆ ಗೌರವ ಕೊಡೋಕೆ ಬರಲ್ವೋ.. ಅವರ ನಿರ್ಧಾರಗಳನ್ನ ಒಪ್ಪಿಕೊಳ್ಳೋಕೆ ಬರಲ್ವೋ.. ಈ ಮನೆಗೆ ಕ್ಯಾಪ್ಟನ್ ಅವಶ್ಯಕತೆ ಇಲ್ಲ. ಆ ರೂಮ್‌ ಅನ್ನು ಬಂದ್‌ ಮಾಡಲಾಗುತ್ತದೆ. ನಿಮ್ಮ ಕೈಯ್ಯಾರೆ ಲಾಕ್ ಮಾಡಿ" ಎಂದು ಸ್ಪರ್ಧಿಗಳಿಗೆ ಆದೇಶಿಸಿದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ