Bigg Boss Vinay Wife Akshata: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಹಾವಳಿನೂ ಜೋರಾಗಿದ್ದು, ವಿನಯ್, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ತನಿಷಾ, ತುಕಾಲಿ ಸಂತೋಷ್ ಸೇರಿದಂತೆ ಹಲವು ಮಂದಿ ಪ್ರಬಲ ಸ್ಪರ್ಧಿಗಳು ಎನಿಸಿಕೊಂಡಿದ್ದಾರೆ. ಅದರಲ್ಲೂ ವಿನಯ್ ಸ್ಟ್ರಾಂಗ್ ಕಂಟೆಸ್ಟೆಂಟ್ ಅಂತ ಅನಿಸಿಕೊಂಡಿದ್ದು, ಹಿನ್ನೆಲೆಯಲ್ಲೇ ಕಿಚ್ಚ ಸುದೀಪ್ ಕೂಡ ವಿನಯ್ ಬಗ್ಗೆ ಮಾತಾಡಿದ್ದರು.ಬಿಗ್‌ಬಾಸ್‌ ಮನೆಯೊಳಗೆ ವಿನಯ್‌ ಏರು ಧ್ವನಿಯಲ್ಲಿ ಮಾತಾಡುತ್ತಾ  ಡಾಮಿನೇಟ್ ಮಾಡುತ್ತಿದ್ದಾರೆಂದು, ಹಲವು ಸ್ಪರ್ದಿಗಳ ಅನಿಸಿಕೆಯಾಗಿದ್ದು, ಸದ್ಯ ವೀಕ್ಷಕರು ಸಹ ವಿನಯ್‌ ನಡುವಳಿಕೆ ಬಗ್ಗೆ ಟ್ರೋಲ್‌ ಮಾಡಿದ್ದಾರೆ. ಆದ್ರೀಗ ಬಿಗ್‌ ಬಾಸ್‌ನಲ್ಲಿ ವಿನಯನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂದು ಅವರ ಪತ್ನಿ ಅಕ್ಷತಾ ವಿನಯ್ ಆರೋಪ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಬಿಗ್ ಬಾಸ್ ಮನೆಯಲ್ಲಿ ವಿನಯ್‌ ಅವರನ್ನು ಬಿಂಬಿಸುತ್ತಿರುವ ರೀತಿ ಖುಷಿಯಿಲ್ಲ ಎಂದು ಕಣ್ಣೀರಿಟ್ಟ ಅಕ್ಷತಾ ವಿನಯ್  ಒಂದು ಸಂದರ್ಶನದಲ್ಲಿ "ವಿನಯ್ ಬಿಗ್ ಬಾಸ್ ಮನೆಗೆ ಹೋಗಿದ್ದು ಖುಷಿಯಿದೆ. ಆದರೆ, ಅವರನ್ನು ತೋರಿಸುತ್ತಿರೋದು ಖುಷಿಯಿಲ್ಲ. ಅವರನ್ನು ಬಿಂಬಿಸುತ್ತಿರುವ ರೀತಿ ಖುಷಿಯಿಲ್ಲ. ಯಾಕೆ ಆ ರೀತಿ ಮಾಡುತ್ತಿದ್ದಾರೆ ಅನ್ನೋ ಬಗ್ಗೆ ನನಗೆ ತುಂಬಾನೇ ಬೇಜಾರಿದೆ. ಅವರೆಲ್ಲರನ್ನು ನೋಡಿದರೆ ವಿನಯ್ ಮಾತ್ರ ಡಿಫ್ರೆಂಟ್ ಆಗಿದ್ದಾರೆ ಅಂತ ಅನಿಸುತ್ತಾರೆ. ಮನೆಯೊಳಗೆ ಎಲ್ಲರೊಂದಿಗೂ ಫ್ರೆಂಡ್ಲಿಯಾಗಿದ್ದಾರೆ. ಆ ಬಗ್ಗೆ ಖುಷಿಯಾಗಿದೆ. ಆದರೆ, ಯಾಕೆ ಹೀಗೆ ಬಿಂಬಿಸುತ್ತಿದ್ದಾರೆ ಅಂತ ಬೇಜಾರಿದೆ." ಎಂದು ಅಕ್ಷತಾ ವಿನಯ್ ಆರೋಪಿಸಿದ್ದಾರೆ.


ಇದನ್ನು ಓದಿ: Bigg Boss Kannada 10 : ʼಡ್ರೋನ್‌ ಪ್ರತಾಪ್‌ ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಠಿಯಿಂದ ನೋಡ್ತಾನೇʼ : ವಿನಯ್‌ ಗೌಡ ಆರೋಪ !


ಅಕ್ಷತಾ ವಿನಯ್‌ ಬಗ್ಗೆ ಬಿಂಬಿಸುತ್ತಿರುವ ಬಗ್ಗೆ ಮಾತನಾಡುತ್ತಾ "ಅವರ ಒಳ್ಳೆತನವನ್ನು ಹೈಲೈಟ್ ಮಾಡುತ್ತಿಲ್ಲ. ಮನೆಯಲ್ಲಿ ಇದ್ಮೇಲೆ ಕತ್ತೆ ಅನ್ನೋದು ಅದು ಇದೂ ಅಂತ ಮಾತಾಡುತ್ತಾರೆ. ತಮಾಷೆಗೂ ಅದನ್ನು ಹೇಳಬಹುದು. ತಮಾಷೆಗೆ ಹೇಳಿರುವುದನ್ನೂ ಸೀರಿಯಸ್ ಆಗಿ ತೆಗೆದುಕೊಂಡು ಅದನ್ನೇ ಪ್ರೋಮೊ ಮಾಡಿ ಹಾಕುತ್ತಿದ್ದಾರೆ. ಅದ್ಯಾಕೆ ಅಂತ ಕೇಳೋಣ ಅಂತ ಚಾನೆಲ್‌ಗೆ ಬಹಳಷ್ಟು ಬಾರಿ ಫೋನ್ ಮಾಡಿದೆ. ಆದರೆ, ಅವರು ಪ್ರತಿಕ್ರಿಯೆ ನೀಡಲಿಲ್ಲ" ಎಂದು ಹೇಳಿದ್ದಾರೆ.


ಬಿಗ್‌ಬಾಸ್‌ ಮನೆಯಲ್ಲಿ ವಿನಯ್‌ ನೆಗೆಟೀವಾಗಿ ತೋರಿಸುತ್ತಿತ್ತು "ಎರಡು ವಾರ ಕಾದೆ ನಾನು.. ಮೂರನೇ ವಾರನೂ ಕಂಟಿನ್ಯೂ ಆಯ್ತು. ನಾಲ್ಕನೇ ವಾರ ಇನ್ನೂ ಹೆಚ್ಚಾಯ್ತು. ವಿನಯ್ ವಿನಯ್ ಅಂತಲೇ ಪೋಮೊ ಬಿಡುತ್ತಿದ್ದಾರೆ ಹೊರತು, ಅಲ್ಲಿ ವಿನಯ್ ಬಗ್ಗೆ ಇವತ್ತಿನವರೆಗೂ ಒಳ್ಳೆಯದನ್ನು ತೋರಿಸಿಲ್ಲ. ವಿನಯ್ ಈ ರೀತಿ ತೋರಿಸೋ ಉದ್ದೇಶವಿರಲಿಲ್ಲ. ಆದರೂ ಯಾಕೆ ಹೀಗೆ ತೋರಿಸುತ್ತಿದ್ದಾರೋ ಗೊತ್ತಿಲ್ಲ.ನನಗೆ ಅವರನ್ನು ಹಾಗೇ ನೋಡುವುದಕ್ಕೆ ಆಗುತ್ತಿಲ್ಲ. ಅಂತಹ ವ್ಯಕ್ತಿ ಅಲ್ಲ ಅವರು. ತುಂಬಾನೇ ಕಷ್ಟ ಪಟ್ಟು ಮೇಲೆ ಬಂದಿದ್ದಾರೆ. ಮೋಸ ಮಾಡಿ ಆಗಲಿ. ಇನ್ನೊಂದು ಮಾಡಿ ಮೇಲೆ ಬಂದಿಲ್ಲ. ಒಂದೊಂದು ಕೆಲಸನೂ ದೇವರಂತೆ ನೋಡಿ ಮೇಲೆ ಬಂದಿದ್ದಾರೆ. ಅಲ್ಲಿ ಅವರಿಗೆ ಮರ್ಯಾದೇನೆ ಇಲ್ಲ ಅನ್ನೋ ಹಾಗೆ ಮಾಡಿದ್ದಾರೆ" ಎಂದು ಕಣ್ಣೀರಿಟ್ಟಿದ್ದಾರೆ.
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.