Bigg Boss Season 10: ಬಿಗ್‌ಬಾಸ್‌ ಸೀಸನ್‌ 10 ಶುರುವಾಗಿ ಒಂದು ವಾರವೇ ಕಳೆಯುತ್ತಿದೆ. ದೊಡ್ಮನೆಗೆ 17 ಕಂಟೆಸ್ಟೆಂಟ್‌  ಪದಾರ್ಪಣೆ ಮಾಡಿದ್ದಾರ್. ಆದರೆ ಮೊದಲೇ ಅನೌಂನ್ಸ್‌ ಮಾಡಿರುವ ಹಾಗೆ  ಚಾರ್ಲಿ ಬಿಗ್‌ಬಾಸ್‌ ಮನೆಗೆ ಇಷ್ಟೋತ್ತಿಗೆ ಬರಬೇಕಿತ್ತು. ಆದರೆ ಚಾರ್ಲಿ ಇನ್ನೂ ಬಿಗ್‌ ಮನೆಗೆ ಹೆಜ್ಜೆ ಇಟ್ಟಿಲ್ಲ. ಇದರ ಅಸಲಿ ಕಾರಣವೇನು? ಇದರ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ... 


COMMERCIAL BREAK
SCROLL TO CONTINUE READING

ಸತತ ಒಂಬತ್ತು ವರ್ಷಗಳಿಂದ ನಡೆದುಕೊಂಡು ಬಂದ ಪ್ರೇಕ್ಷಕರ ಅಚ್ಚುಮೆಚ್ಚಿನ ರಿಯಾಲಿಟಿ ಶೋ ಬಿಗ್‌ಬಾಸ್‌. ಈ ವರ್ಷದ ಬಿಗ್‌ಬಾಸ್‌ ಸೀಸನ್‌ 10 ಪ್ರಾರಂಭವಾಗಿದೆ. ಬಿಗ್‌ಮನೆಯ ಆಟ ಶುರುವಾಗಿ ಆಲ್‌ ರೆಡಿ ಒಂದು ವಾರವಾಗ್ತಾಯಿದೆ. ಬಿಗ್‌ಬಾಸ್‌ 10ರ ಗ್ರಾಂಡ್‌ ಪೀಮಿಯರ್‌ನಲ್ಲಿ ವೋಟಿಂಗ್‌ ಪ್ರಕ್ರಿಯೆಯಂತೆ ಸಮರ್ಥರು ಹಾಗೂ ಅಸಮರ್ಥರು ಎಂಬ ಎರಡು ಗುಂಪುಗಳಾಗಿ ಸ್ಪರ್ದಿಗಳನ್ನು ಮನೆಯ ಒಳಗೆ ಕಳುಹಿಸಲಾಯಿತು. ಬಿಗ್‌ಬಾಸ್‌ ಮನೆಯ ಮೊದಲನೆ ವಾರದ ನಾಮಿನೇಷನ್ ಪ್ರಕ್ರಿಯೆಯು ಮುಗಿದಿದೆ. 


ಬಿಗ್‌ಬಾಸ್‌ ಮನೆಯ ಕ್ಯಾಪ್ಟನ್‌ ಸ್ನೇಹಿತ್‌ ಆಯ್ಕೆಯಾಗಿದ್ದಾರೆ. ಬಿಗ್‌ಬಾಸ್‌ ಮನೆಯ ಟಾಸ್ಕ್‌ಗಳು ಶುರುವಾಗಿದೆ. ಅಸಮರ್ಥರು ಸಮರ್ಥರ ವಿರುದ್ದ ಆಟದಲ್ಲಿ ಗೆಲ್ಲುವುದರ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಆಟಗಳ ಜೊತೆಗೆ ಮನಸ್ಥಾಪಗಳು ಶುರುವಾಗಿದೆ. ಪ್ರತಿ ಸೀಸನ್‌ನಂತೆ ಈ ಬಾರಿ ಆಟ, ಟಾಸ್ಕ್‌, ಜಗಳ ಎಲ್ಲವು ಪ್ರತಿ ಸೀಸನ್‌ನಂತೆ ನಡೆಯುತ್ತಿದೆ. ಆದರೂ ಸಮ್‌ ಥಿಂಗ್‌ ಈಸ್‌ ಮಿಸ್ಸಿಂಗ್ ಅಂತಿದ್ದಾರೆ ವೀಕ್ಷಕರು‌. ಅದೇ ಚಾರ್ಲಿ ಬಿಗ್‌ಬಾಸ್‌ ಮನೆಗೆ ಚಾರ್ಲಿ ಎಂಟ್ರಿಯಾಗದೆ ಇರುವುದೇ ಪ್ರೇಕ್ಷಕರಿಗೆ ನಿರಾಸೆ ಉಂಟು ಮಾಡಿದೆ. 


ಇದನ್ನೂ ಓದಿ- BBK 10 : ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10 ಗೆದ್ದವರಿಗೆ ಸಿಗುವ ಹಣ ಎಷ್ಟು?


ಯಸ್..‌ ಮೊದಲೇ ಅನೌಂನ್ಸ್‌ ಮಾಡಿರುವ ಹಾಗೆ #777 ಸಿನಿಮಾದ ಚಾರ್ಲಿ ಬಿಗ್‌ಬಾಸ್ ಮನೆಗೆ ಎಂಟ್ರೀಯಾಗಬೇಕಿತ್ತು. ಆದರೆ ಬಿಗ್‌ಬಾಸ್‌ ಮನೆಯ ಆಟ ಆರಂಭವಾಗಿ ಒಂದು ವಾರ ಕಳೆಯುತ್ತಿದ್ದರೂ ಚಾರ್ಲಿ ಇನ್ನು ಕೂಡ ದೊಡ್ಮನೆಗೆ ಯಾಕ್ ಎಂಟ್ರಿ ಕೊಟ್ಟಿಲ್ಲ ಎನ್ನುವ ಪಶ್ನೆ ವೀಕ್ಷಕರಲ್ಲಿ ಮೂಡಿದೆ. ಗ್ರಾಂಡ್‌ ಪ್ರೀಮಿಯರ್‌ ದಿನವೇ ಸುದೀಪ್‌ ಅವರು ಹೇಳಿದಂತೆ ಸಂಗೀತಾ ವೇದಿಕೆ ಮೇಲೆ ಚಾರ್ಲಿ ಎಂದು ಕರೆದರು. ಆದರೆ ಚಾರ್ಲಿ ಬರಲಿಲ್ಲ. ಇದಕ್ಕೆ ಇಲ್ಲಿಯವರೆಗೂ ಸರಿಯಾದ ಕಾರಣ ತಿಳಿದಿರಲಿಲ್ಲ. ಆದರೆ ಸದ್ಯ ಅಸಲಿ ವಿಷಯ ತಿಳಿದಿದೆ.


ಚಾರ್ಲಿ ಬಿಗ್‌ಬಾಸ್‌ ಮನೆಗೆ ಬರದೆಯಿರಲು ಕಾರಣ ಏನು ಎಂಬುದರ ಅಸಲಿ ಕಾರಣವನ್ನು ಚಾರ್ಲಿ ತರಬೇತುದಾರರಾದ ಪ್ರಮೋದ್‌ ಬಿಚ್ಚಿಟ್ಟಿದ್ದಾರೆ. ಸಿನಿಮಾ, ಕಿರುತೆರೆ ಅಥವಾ ರಿಯಾಲಿಟಿ ಶೋಗಳಲ್ಲಿ ಪ್ರಾಣಿಗಳನ್ನು ಬಳಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕೆ ಅನಿಮಲ್ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾ ಅನುಮತಿ ಬೇಕು. ಚಾರ್ಲಿ ಶ್ವಾನ ಬಿಗ್‌ಬಾಸ್ ಮನೆ ಪ್ರವೇಶಿಸಲು ಕೂಡ ಅನುಮತಿ ಬೇಕಾಗಿದೆ. ಆದರೆ ಇನ್ನು ಅನುಮತಿ ಸಿಕ್ಕಿಲ್ಲ. ಹಾಗಾಗಿ ಚಾರ್ಲಿ ಬಿಗ್‌ಬಾಸ್ ಮನೆ ಪ್ರವೇಶ ತಡವಾಗುತ್ತಿದೆ ಎಂದವರು ತಿಳಿಸಿದ್ದಾರೆ. 


ಇದನ್ನೂ ಓದಿ- Bigg Boss Kannada 10: ಸ್ನೇಕ್‌ ಶ್ಯಾಮ್‌ ತೆರೆದಿಟ್ಟ ವಿಸ್ಮಯಕಾರಿ ಉರಗ ಪ್ರಪಂಚ!  


ಚಾರ್ಲಿ ಟ್ರೇನರ್‌ ಪ್ರಮೋದ್‌ "ಚಾರ್ಲಿಯನ್ನು ಬಿಗ್‌ಬಾಸ್ ಮನೆಯೊಳಗೆ ಕಳುಹಿಸುವ ಬಗ್ಗೆ ಎಲ್ಲಾ ತಯಾರಿ ನಡೀತಿದೆ. ಆದರೆ ಅನಿಮಲ್ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾದಿಂದ ಇನ್ನು ಅನುಮತಿ ಸಿಕ್ಕಿಲ್ಲ. ಅದಕ್ಕಾಗಿ ಎಲ್ಲಾ ಪ್ರಯತ್ನಗಳು ನಡೀತಿದೆ. ಪತ್ರ, ಮೇಲ್ ಮೂಲಕ ಅನುಮತಿ ಕೋರಲಾಗಿತ್ತು. ಅನುಮತಿ ಸಿಕ್ಕ ಕೂಡಲೇ ಚಾರ್ಲಿ ಬಿಗ್‌ಬಾಸ್ ಮನೆ ಪ್ರವೇಶಿಸುತ್ತದೆ.  ಶೋ ಮುಗಿಯಲು ಇನ್ನು 95 ದಿನ ಬಾಕಿಯಿದೆ. ಅಷ್ಟರಲ್ಲಿ ಅಭಿಮಾನಿಗಳ ಆಸೆ ಈಡೇರಲಿದೆ" ಎಂದು ಕಾರಣವನ್ನು ವಿವರಿಸಿದ್ದಾರೆ. 


ಇನ್ನೊಂದು ಪ್ರಮುಖ ವಿಷಯವೆಂದರೆ, ಚಾರ್ಲಿ ಬಿಗ್‌ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗುತ್ತಿಲ್ಲ . ಕೇವಲ ಎಂಟ್ರಟೇನರ್‌ ಆಗಿ ಮಾತ್ರ ಬಿಗ್‌ಬಾಸ್ ಮನೆಯೊಳಗೆ ಹೋಗಲಿದೆ. ಆದರೆ ಎಷ್ಟು ದಿನ ಅನ್ನೋದು ಗೊತ್ತಿಲ್ಲ. ಇನ್ನು ಚಾರ್ಲಿ ಜೊತೆಗೆ ತರಬೇತುದಾರ ಪ್ರಮೋದ್ ಸಹ ಬಿಗ್‌ಬಾಸ್ ಮನೆ ಒಳಗೆ ಪ್ರವೇಶಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಬಿಗ್‌ಬಾಸ್‌ ಮನೆಗೆ ಚಾರ್ಲಿ ಯಾವಾಗ ಪ್ರವೇಶಿಸಲಿದೆ ಎಂಬುದನ್ನೂ ಕಾದು ನೋಡಬೇಕಿದೆ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ವೀಕ್ಷಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.