Gold Suresh: ಚಿಕ್ಕಹಳ್ಳಿಯಿಂದ ಬೆಂಗಳೂರಿಗೆ ಕೆಲಸ ಹರಿಸಿ ಬಂದಿದ್ದ ಗೋಲ್ಡ್‌ ಸುರೇಶ್‌ ಇಂದು ಕೋಟಿ ಆಸ್ತಿಯ ಒಡೆಯ. ಅಷ್ಟಕ್ಕೂ ಈ ಸ್ಥಾನಕ್ಕೆ ಬರಲು ಈತ ಪಟ್ಟ ಕಷ್ಟ ಗೊತ್ತಾ? ಇವರ ಸ್ಟೋರಿ ಕೇಳಿದ್ರೆ ಸಕ್ಸಸ್‌ ಅಂದ್ರೆ ಇದಪ್ಪಾ ಅನಿಸುತ್ತೆ. ಮೊದಲಿಗೆ ಬೆಂಗಳೂರಿಗೆ ಬಂದಾಗ ಗೋಲ್ಡ್‌ ಸುರೇಶ್‌ ಅವರು ಹೊಟ್ಟೆ ಪಾಡಿಗಾಗಿ ಮಾಡದ ಕೆಲಸವೇ ಇರಲಿಲ್ಲ, ಆದರೆ ಇಂದು ಈತ ಕೋಟ್ಯಾಂತರ ರೂ. ಟರ್ನ್‌ ಓವರ್‌ ಬರುವ ಇನ್ಟೀರಿಯರ್‌ ಕಂಪನಿಯ ಒಡೆಯ. 


COMMERCIAL BREAK
SCROLL TO CONTINUE READING

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕ ಹಳ್ಳಿಯಿಂದ ಬಂದ ಸುರೇಶ್‌ , ಓದಿದ್ದು ಮೈಸೂರಿನಲ್ಲಿ 3ನೇ ತರಗತಿಯಿಂದ 7 ನೆ ತರಗತಿಯ ವರೆಗೂ ಓದುತ್ತಾರೆ ನಂತರ ತಮ್ಮ ಹುಟ್ಟೂರಾದ ಅಥಣಿಯಲ್ಲಿ ಎಸ್‌ಎಸ್‌ಎಲ್‌ಸಿಯನ್ನು ಕಂಪ್ಲೀಟ್‌ ಮಾಡುತ್ತಾರೆ. ಪಿಯುಸಿಯಲ್ಲಿ ಅಡ್ಮೀಶನ್‌ ಮಾಡಿದ್ದ ಈತನಿಗೆ ಮುಂದೆ ಓದಲು ಸಾಧ್ಯಾವಗಲಿಲ್ಲ. ಕಾಲೇಜು ಬಿಟ್ಟ ನಂತರ ವ್ಯವಸಾಯ ಮಾಡು ಎಂದು ಮನೆಯಲ್ಲಿ ಬಲವಂತ ಮಾಡಿದ್ದ ಕಾರಣದಿಂದ ಗೋಲ್ಡ್‌ ಸುರೇಶ್‌ ಮನೆ 2010ರಲ್ಲಿ ಮನೆ ಬಿಟ್ಟು ಓಡಿ ಬರುತ್ತಾರೆ. ಮನೆ ಬಿಟ್ಟು ಓಡಿಬಂದು ಬೆಂಗಳೂರಿನಲ್ಲಿ ಇದ್ದ ಇವರನ್ನು ನೋಡಿದ ಸಂಬಂಧಿಕರೊಬ್ಬರು ಇವರ ಮನೆಯವರಿಗೆ ವಿಷಯವನ್ನು ಮುಟ್ಟಿಸುತ್ತಾರೆ, ನಂತರ ಗೋಲ್ಡ್‌ ಸುರೇಶ್‌ ಅವರ ಅಣ್ಣ ಅವರನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ. ಮನೆಯವರ ಸಮಾಧಾನಕ್ಕೆಂದು ಮನೆಗೆ ವಾಪಸ್‌ ಬರುವ ಗೋಲ್ಡ್‌ ಸುರೇಶ್‌ ಮನೆಯಲ್ಲಿ ಮತ್ತೆ ನಾಲ್ಕು ತಿಂಗಳು ಹೋಗುತ್ತಾರೆ, ಆದರೆ ಏನನ್ನಾದರು ಸಾಧಿಸಬೇಕೆಂಬ ಛಲ ಅವರನ್ನು ಮತ್ತೆ ಮನೆ ಬಿಟ್ಟು ಬೆಂಗಳೂರಿಗೆ ಬರುವಂತೆ ಮಾಡುತ್ತದೆ. ಬೆಂಗಳೂರಿಗೆ ಕೆಲಸ ಹರಸಿ ಬಂದಿದ್ದ ಗೋಲ್ಡ್‌ ಸುರೇಶ್‌ ಅವರಿಗೆ ವಾಸಿಸಲು ಒಂದು ಸ್ಥಳ ಬೇಕಾಗಿರುತ್ತದೆ, ನಂತರ ತನ್ನ ಸ್ನೇಹಿತರ ಮೂಲಕ ಇಬ್ಬರು ಮೂವರ ಪರಿಚಯವಾಗುತ್ತದೆ. ನಂತರ ಅವರ ಕಡೆಯಿಂದ ಸಂಘದ ಪರಿಚಯವಾಗುತ್ತೆ, ಸಂಘದ ಪೂರ್ಣಾವಾದಿ ಕಾರ್ಯಕರ್ತನಾಗಿ ಗೋಲ್ಡ್‌ ಸುರೇಶ್‌ ನಾಲ್ಕು ವರ್ಷಗಳ ಕಾಲ ಕೆಲಸ ಮಾಡುತ್ತಾರೆ. ಸಂಘದಲ್ಲಿ ಕೆಲಸ ಮಾಡುತ್ತಾ ಹಲವು ವಿಚಾರಗಳನ್ನು ಗೋಲ್ಡ್‌ ಸುರೇಶ್‌ ಕಲಿತುಕೊಳ್ಳುತ್ತಾರೆ. 


ಮನೆ ಬಿಟ್ಟು ಹೊರಬಂದಿದ್ದ ಗೋಲ್ಡ್‌ ಸುರೇಶ್‌ ಅವರಿಗೆ ಮನೆಯವರ ನೆನಪು ಕಾಡ ತೊಡಗುತ್ತೆ ಆದರೆ ಏನನ್ನಾದರೂ ಸಾಧಿಸಲೇಬೇಕೆಂಬೆಂಬ ಚಲ ಅವರನ್ನು ತಡೆದು ನಿಲ್ಲಿಸುತ್ತೆ, ಹೀಗೆ ಇರುವಾಗ ಇವರಿಗೆ ಒಬ್ಬ ವ್ಯಕ್ತಿಯ ಪರಿಚಯವಾಗುತ್ತೆ. ಆತ ಗೋಲ್ಡ್‌ ಸುರೇಶ್‌ ಅವರಿಗೆ ಕಾನ್ಫಿಡೆನ್ಸ್‌ ತುಂಬುತ್ತಾರೆ. ಜೀರೋ ಇನ್ವೆಸ್ಟ್‌ಮೆಂಟ್‌ನಲ್ಲಿ ಮೊದಲ ಪ್ರಾಜೆಕ್ಟ್‌ ಕೊಟ್ಟು ಅವರನ್ನು ಹುರಿದುಂಬಿಸುತ್ತಾರೆ.


ನಂತರ ಇವರಿಗೆ ಹಲವಾರು ಪ್ರಾಜೆಕ್ಟ್‌ಗಳು ಸಿಗಲು ಶುರುವಾಗುತ್ತೆ. ಒಳ್ಳೆ ಗೋಲ್ಡ್‌ ಆಭರಣಗಳನ್ನು ಧರಿಸಿದ ವ್ಯಕ್ತಿಯೊಬ್ಬರು ಗೋಲ್ಡ್‌ ಸುರೇಶ್‌ ಅವರಿಗೆ ಒಂದಯ ಪ್ರಾಜೆಕ್ಟ್‌ ಅನ್ನು ನೀಡುತ್ತಾಎ, ಒಳ್ಳೆ ಆಭರಣ ಧರಿಸಿದ್ದ ಈತನನ್ನು ನೋಡಿದ ಗೋಲ್ಡ್‌ ಸುರೇಶ್‌ ಅವರಿಗೆ, ಇವರ ಕೈ ಕೊಡುವುದಿಲ್ಲ. ಪ್ರಾಜೆಕ್ಟ್‌ ಕಂಪ್ಲೀಟ್‌ ಆದಮೇಲೆ, ಮೋಸ ಮಾಡದೆ ದುಡ್ಡು ಕೊಡುತ್ತಾರೆ ಎಂದು ಅಂದುಕೊಳ್ಳುತ್ತಾರೆ, ಆದರೆ ಕೆಲಸ ಪೂರ್ತಿ ಮುಗಿದ ಮೇಲೆ ನಿಮ್ಮ ಕೆಲಸ ಇಷ್ಟವಾಗಿಲ್ಲ ಎಂದು ಹೇಲಿ ಆ ವ್ಯಕ್ತಿ ಒಂದು ರೂಪಾಯಿ ದುಡ್ಡು ಸಹ ನೀಡದೆ, ಗೋಲ್ಡ್‌ ಸುರೇಶ್‌ ಅವರನ್ನು ಹೊರಗೆ ಹೋಗು ಎಂದಿರುತ್ತಾರೆಡ. ಇದನ್ನೆ ಚಾಲೆಂಜ್‌ ಆಗಿ ತೆಗೆದುಕೊಂಡ ಗೋಲ್ಡ್‌ ಸುರೇಶ್‌ ನಿಮಗಿಂತಲೂ ಹೆಚ್ಚು ಸ್ಥಾಯಿಯಲ್ಲಿ ನಾನು ಬೆಳೆದು ನಿಂತು ತೋರಿಸುತ್ತೇನೆ ಎಂದು ಚಾಲೆಂಜ್‌ ಮಾಡುತ್ತಾರೆ. ನಂತೆ ಇದನ್ನೆ ಗುರಿಯಾಗಿಟ್ಟುಕೊಂಡಿದ್ದ ಸುರೇಶ್‌ ಈ ದಿನ ಈ ಸ್ಥಾಯಿಗೆ ಬೆಳೆದು ನಿಂತಿದ್ದು, ಈತನಿಗೆ ಮೋಸ ಮಾಡಿದ್ದ ಆ ವ್ಯಕ್ತಿಗೆ ವಿರುದ್ಧವಾಗಿ  ಹೆಚ್ಚು ಆಭರಣ ಧರಿಸಿ ತನ್ನ ಸೇಡನ್ನು ತೀರಿಸಿಕೊಳ್ಳುತ್ತಾರೆ. 


ಸದ್ಯ ಕೆಲಸ ಹರಿಸಿ ಬೆಂಗಳೂರಿಗೆ ಬಂದಿದ್ದ ಗೋಲ್ಡ್‌ ಸುರೇಶ್‌ ಎರಡು ಬ್ಯುಸಿನೆಸ್‌ಗಳ ಓನರ್‌, ಇನ್ಟೀರಿಯರ್‌ ಹಾಗೂ ಕನ್ಸ್ಟ್ರಕ್ಷನ್‌ ಬ್ಯೂಸಿನೆಸ್‌ ಅನ್ನು ನಡೆಸುತ್ತಿದ್ದಾರೆ. ಇದೀಗ ಗೋಲ್ಡ್‌ ಸುರೇಶ್‌ ಅವರಿಗೆ ತಾನು ಹೋಟೆಲ್‌ ನಡೆಸಬೇಕು ಎಂಬ ಆಸೆ ಇದ್ದು, ತಮ್ಮ ಹುಟ್ಟೂರಿನಲ್ಲಿಯೂ ಸಹ ಯಾವುದಾದರೂ ಉದ್ಯೋಗವನ್ನು ಆರಂಭಿಸಿ, 500 ಜನಕ್ಕೆ ಕಲಸ ನೀಡಬೇಕೆಂಬುದು ಅವರ ಕನಸ್ಸಾಗಿದೆ. 
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.