ನವದೆಹಲಿ: 2020 ರ ಬಿಹಾರ ವಿಧಾನಸಭಾ ಚುನಾವಣೆಗೆ (Bihar Election 2020) ಮತ ಎಣಿಕೆ ಕಾರ್ಯ  ಮುಂದುವರೆದಿದೆ. ಬೆಳಗ್ಗೆ ಎಂದು ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿದೆ.  38 ಜಿಲ್ಲೆಗಳ 55 ಮತ ಎಣಿಕಾ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಆರಂಭಿಕ ಫಲಿತಾಂಶಗಳಲ್ಲಿ ಎನ್‌ಡಿಎ 131 ಮತ್ತು ಆರ್‌ಜೆಡಿ ಮೈತ್ರಿ 101 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. 11 ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
Bihar Election Result 2020: ಫಲಿತಾಂಶಕ್ಕೂ ಮೊದಲು BJP-RJD ನಾಯಕರ ಪ್ರತಿಕ್ರಿಯೆ, ಯಾರು? ಏನು ಹೇಳಿದರು?


COMMERCIAL BREAK
SCROLL TO CONTINUE READING

ಪ್ರಕಾಶ್ ರೈ ಮಾಡಿರುವ ಈ ಟ್ವೀಟ್ ಇದೀಗ ಭಾರಿ ವೈರಲ್ ಆಗುತ್ತಿದೆ. ಅವರ ಟ್ವೀಟ್ ಗೆ ಜನರು ಭಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅವರ ಈ ಟ್ವೀಟ್ ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಪ್ರಕಾಶ್ ರೈ ಅವರನ್ನು ಬೆಂಬಲಿಸಿ ಟ್ವೀಟ್ ಮಾಡುತ್ತಿದ್ದಾರೆ ಕೆಲವರು ವಿರೋಧಿಸುತ್ತಿದ್ದಾರೆ.


ಪ್ರಕಾಶ್ ರೈ ಸತತವಾಗಿ ತಮ್ಮ ಟ್ವೀಟ್ ಗಳ ಮೂಲಕ ಚರ್ಚೆ ಹುಟ್ಟುಹಾಕುತ್ತಾರೆ. ತುಂಬಾ ದಿಟ್ಟತಾಣದಿಂದ ಅವರು ತಮ್ಮ ಪ್ರತಿಕ್ರಿಯೆ ಜನರ ಮಧ್ಯೆ ಇಡುತ್ತಾರೆ.


ಬಿಹಾರದ 243 ಸ್ಥಾನಗಳಿಗಾಗಿ ಒಟ್ಟು ಮೂರು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿದೆ. ಕಳೆದ ಶನಿವಾರ ಕೊನೆಯ ಹಂತಕ್ಕೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ.


ಆರಂಭಿಕ ಫಲಿತಾಂಶಗಳಲ್ಲಿ ಮಹಾಮೈತ್ರಿ ಹಾಗೂ NDA ನಡುವೆ ತೀವ್ರ ಪೈಪೋಟಿ ಗಮನಿಸಲಾಗಿದೆ. ಮಹಾಮೈತ್ರಿಯ ಪ್ರಮುಖ ಮುಖಂಡ ತೇಜಸ್ವಿ ಯಾದವೇ ರಾಘೋಪುರ್ ಕ್ಷೇತ್ರದಿಂದ ಮುನ್ನಡೆ ಸಾಧಿಸಿದ್ದಾರೆ.


ಇದನ್ನು ಓದಿ- Bihar Election Results 2020: ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ, ಯಾರಾಗ್ತಾರೆ CM?


ಕಾಂಗ್ರೆಸ್ ದಾರಿ ಸುಗಮವಾಗಿಲ್ಲ
ಈ ಬಾರಿ ಬಿಹಾರ್ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ 70 ಕ್ಷೇತ್ರಗಳಲ್ಲಿ ಚುನಾವಣೆಗಳನ್ನು ಎದುರಿಸ್ತುತ್ತಿದೆ. ಇಷ್ಟೊಂದು ಸ್ಥಾನಗಳಲ್ಲಿ ಸ್ಪರ್ಧಿಸಿ ಈ ಭಾರಿಯ ವಿಧಾನಸಭೆ ಚುನಾವಣೆಯಲ್ಲೂ ಪ್ರಮುಖ ಎಂದೆನಿಸಿಕೊಂಡರೂ ಕೂಡ, ಪ್ರಕಟಗೊಳ್ಳುತ್ತಿರುವ ಫಲಿತಾಂಶಗಳಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನವನ್ನೇ ತೋರುತ್ತಿದೆ. ಇನ್ನೊಂದೆಡೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರು RJD ಉತ್ತಮ ಸ್ಥಿತಿಯಲ್ಲಿ ಕಂಡುಬರುತ್ತಿದೆ. ಕಾಂಗ್ರೆಸ್ RJD ಪಾಲಿಗೆ ಹೊರೆ ಎಂದೇ ಸಾಬೀತಾಗುತ್ತಿದೆ.


11 ರಾಜ್ಯಗಳಲ್ಲಿಯೂ ಕೂಡ ಮತ ಎಣಿಕೆ ಕಾರ್ಯ ಆರಂಭಗೊಂಡಿದೆ
11 ರಾಜ್ಯಗಳ ವಿಧಾನಸಭೆಯ ಒಟ್ಟು 58 ಸ್ಥಾನಗಳಿಗೆ ನಡೆದ ಉಪಚುನಾವಣೆಗಳ ಮತ ಎಣಿಕೆ ಕಾರ್ಯ ಕೂಡ ಜಾರಿಯಲ್ಲಿದೆ. ಉತ್ತರ ಪ್ರದೇಶದ ಒಟ್ಟು 7 ಸ್ಥಾನಗಳಿಗೆ ನಡೆದ ಉಪಚುನಾವಣೆಗಳ ಮತಎಣಿಕೆ ಕಾರ್ಯ ಬಿಗಿಭದ್ರತೆಯಲ್ಲಿ ಮುಂದುವರೆದಿದೆ. 


ಮಧ್ಯಪ್ರದೇಶದ ಒಟ್ಟು 28 ವಿಧಾನಸಭೆ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಕೂಡ ನಡೆಯುತ್ತಿದೆ ಹಾಗೂ ಇಂದು ಸಂಜೆ ತಡವಾಗಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.


ಗುಜರಾತ್ ನಲ್ಲಿಯೂ ಕೂಡ ವಿಧಾನಸಭೆಯ 8 ಸ್ಥಾನಗಳಿಗೆ ನಡೆದ ಉಪಚುನಾವಣೆಗಳ ಮತ ಎಣಿಕೆ ಕಾರ್ಯ ಕೂಡ ಮುಂದುವರೆದಿರುವುದು ಇಲ್ಲಿ ಉಲ್ಲೇಖನೀಯ.