ಮುಂಬೈ : ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿಗೆ ಹೆಣ್ಣು ಮಗುವಾಗಿದೆ. ಸ್ಟಾರ್‌ ದಂಪತಿ ಕೆಲವು ತಿಂಗಳ ಹಿಂದೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದರು. ಇದೀಗ ಪುಟ್ಟ ರಾಜಕುಮಾರಿ ಬಿಪಾಶಾ ಮಡಿಲು ತುಂಬಿದೆ. ಕೆಲವೇ ದಿನಗಳ ಹಿಂದೆ, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್‌ಗೂ ಕೂಡ ಹೆಣ್ಣು ಮಗುವಾಗಿತ್ತು.


COMMERCIAL BREAK
SCROLL TO CONTINUE READING

ಇನ್ನು ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಅವರಿಗೆ ಸಿನಿ ಮಂದಿ ಸೇರಿದಂತೆ ಸ್ನೇಹಿತರು, ಸಂಬಂಧಿಕರು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. 43 ನೇ ವಯಸ್ಸಿನಲ್ಲಿ, ಬಿಪಾಶಾ ಮುದ್ದಾದ ಮಗಳಿಗೆ ಜನ್ಮ ನೀಡಿದ್ದಾಳೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಂತರ, ಬಾಲಿವುಡ್‌ನ ಈ ಪ್ರೀತಿಯ ಜೋಡಿ ಕೂಡ ಪೋಷಕ ಕ್ಲಬ್‌ಗೆ ಸೇರಿಕೊಂಡಿದ್ದಾರೆ.


ಇದನ್ನೂ ಓದಿ: Ramya - Rashmika Mandanna: ರಶ್ಮಿಕಾ ಬೆಂಬಲಕ್ಕೆ ನಿಂತ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ


2015 ರಲ್ಲಿ ಬಿಡುಗಡೆಯಾದ 'ಅಲೋನ್' ಸೆಟ್‌ನಲ್ಲಿ ಬಿಪಾಶಾ ಮತ್ತು ಕರಣ್‌ ಭೇಟಿಯಾಗಿತ್ತು. ಒಟ್ಟಿಗೆ ಕೆಲಸ ಮಾಡಿದ ನಂತರ ಇಬ್ಬರು ಪ್ರೀತಿಯಲ್ಲಿ ಬೀಳುತ್ತಾರೆ. ಈ ಜೋಡಿ ಏಪ್ರಿಲ್ 30, 2016 ರಂದು ವಿವಾಹವಾದರು. 6 ವರ್ಷಗಳ ವೈವಾಹಿಕ ಜೀವನ ಪೂರ್ಣಗೊಳಿಸಿರುವ ದಂಪತಿಗಳ ಮಡಿಲಲ್ಲಿ ಸದ್ಯ ಹೆಣ್ಣು ಮಗು ಜನಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.