ಸಾವಿರಾರು ನಟರು ಬರ್ತಾರೆ, ಸಾವಿರಾರು ನಟರು ಹೋಗ್ತಾರೆ. ಆದರೆ ಸದಾ ಮನಸ್ಸಿನಲ್ಲಿ ಉಳಿಯುವವರ ಸಂಖ್ಯೆ ಮಾತ್ರ ಬೆರಳೆಣಿಕೆ. ಇಂಥ ಅತ್ಯುತ್ತಮ ನಟರ ಸಾಲಿನಲ್ಲಿ ನಟ ಸಂಚಾರಿ ವಿಜಯ್‌ ನಿಲ್ಲುತ್ತಾರೆ. ಅದೆಷ್ಟೋ ವರ್ಷಗಳ ಗ್ಯಾಪ್‌ ಬಳಿಕ ಕನ್ನಡ ಚಿತ್ರರಂಗಕ್ಕೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಕೀರ್ತಿ ನಟ ಸಂಚಾರಿ ವಿಜಯ್‌ ಅವರಿಗೆ ಸಲ್ಲುತ್ತದೆ. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಕಳೆದ ವರ್ಷ ಅಂದ್ರೆ 2021ರ ಜೂನ್ 15ರಂದು ವಿಜಯ್‌ ಕೋಟಿ ಕೋಟಿ ಅಭಿಮಾನಿಗಳನ್ನ ಅಗಲಿದ್ದರು.


COMMERCIAL BREAK
SCROLL TO CONTINUE READING

ಹೀಗೆ ತಮ್ಮ ನಟನೆ ಹಾಗೂ ಸಾಮಾಜಿಕ ಕಾರ್ಯಗಳಿಂದ ಗಮನಸೆಳೆದು ಚಿಕ್ಕ ವಯಸ್ಸಿನಲ್ಲೇ ಅಸಾಂಖ್ಯಾತ ಅಭಿಮಾನಿಗಳನ್ನು ಅಗಲಿದ ನಟ ವಿಜಯ್ ಅವರ ಹುಟ್ಟುಹಬ್ಬ ನಾಳೆ. ಹೀಗಾಗಿ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬ ಆಚರಿಸಲು ಅಸಂಖ್ಯಾತ ಅಭಿಮಾನಿಗಳು ತಯಾರಿ ನಡೆಸಿದ್ದಾರೆ. 1983ರ ಜುಲೈ 17ರಂದು ಕಡೂರಿನಲ್ಲಿ ಜನಿಸಿದ ಸಂಚಾರಿ ವಿಜಯ್‌ ಅವರು, ಕಳೆದ ವರ್ಷ ಜೂನ್‌ 15ರಂದು ಅಪಘಾತದಲ್ಲಿ ಮೃತಪಟ್ಟಿದ್ದರು.


ಅಭಿಮಾನಿಗಳ ಅಭಿಮಾನ


ಸ್ಯಾಂಡಲ್‌ವುಡ್ ಪಾಲಿಗೆ ಸಂಚಾರಿ ವಿಜಯ್‌ ಎಂದೂ ಮರೆಯಲಾಗದ ಹೆಸರು. 'ನಾನು ಅವಳಲ್ಲ ಅವನು' ಸಿನಿಮಾ ಎಲ್ಲರ ಮನಸ್ಸು ಗೆದ್ದಿದ್ದರು ನಟ ಸಂಚಾರಿ ವಿಜಯ್.‌ ಸುಮಾರು 1 ದಶಕಗಳ ಕಾಲ ಕನ್ನಡ ಸಿನಿಮಾ ರಂಗಕ್ಕೆ ತಮ್ಮ ಸೇವೆ ಸಲ್ಲಿಸಿದ್ದ ರಂಗಕರ್ಮಿ ವಿಜಯ್‌ ನಮ್ಮನ್ನೆಲ್ಲಾ ಅಗಲಿ ಒಂದು ವರ್ಷ ಕಳೆದಿದೆ.ವಿಪರ್ಯಾಸವೆಂದರೆ ಸಂಚಾರಿ ವಿಜಯ್‌ ಅವರು ಇಲ್ಲದೇ ಅಭಿಮಾನಿಗಳು ಮೊದಲ ಬಾರಿಗೆ ಹುಟ್ಟುಹಬ್ಬ ಆಚರಿಸುತ್ತಿದ್ದು, ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.


ಇದನ್ನೂ ಓದಿ: ದೇಶದಲ್ಲಿ ವೇಗವಾಗಿ ಹರಡುತ್ತಿದೆ ಕೋವಿಡ್‌: ಒಂದೇ ದಿನದಲ್ಲಿ 20ಸಾವಿರಕ್ಕೂ ಹೆಚ್ಚು ಕೇಸ್‌ ದಾಖಲು!


ಲಾಕ್‌ಡೌನ್‌ ಸಂದರ್ಭದಲ್ಲಿ ಹಸಿವಿನಿಂದ ನರಳುತ್ತಿದ್ದ ಜನರಿಗೆ ಸಂಚಾರಿ ವಿಜಯ್‌ ಸಹಾಯ ಮಾಡಿದ್ದರು. ಆದರೆ ವಿಧಿ ನಿರ್ಧಾರವೇ ಬೇರೆಯಾಗಿತ್ತು. 2021ರ ಜೂನ್ 12ರಂದು ನಟ ವಿಜಯ್‌ ಅವರಿಗೆ ಅಪಘಾತವಾಗಿತ್ತು. ತಲೆಗೆ ಪೆಟ್ಟು ಬಿದ್ದಿದ್ದ ಹಿನ್ನೆಲೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ 2021, ಜೂನ್ 15ರ ಮುಂಜಾನೆ ಸಂಚಾರಿ ವಿಜಯ್ ಇನ್ನಿಲ್ಲವೆಂಬ ಸುದ್ದಿ ಕೇಳಿದ ಪ್ರತಿಯೊಬ್ಬರೂ ಆಘಾತ ನೀಡಿತ್ತು. ನಟ ಕಿಚ್ಚ ಸುದೀಪ್‌, ಹ್ಯಾಟ್ರಿಕ್‌ ಹೀರೋ ಶಿವಣ್ಣ ಸೇರಿದಂತೆ ಕನ್ನಡ ಸಿನಿಮಾ ರಂಗದ ಹಿರಿಯ ನಟರು ನಟ ವಿಜಯ್‌ ಸಾವಿಗೆ ಕಂಬನಿ ಮಿಡಿದಿದ್ದರು.


ಸಂಚಾರಿ ವಿಜಯ್‌ ಅವರು ದೈಹಿಕವಾಗಿ ನಮ್ಮ ಜೊತೆ ಇಲ್ಲ ನಿಜ, ಆದರೆ ಅವರು ಮಾಡಿದ್ದ ಸಾಮಾಜಿಕ ಕಾರ್ಯಗಳು. ಹಾಗೂ ಸಮಾಜಕ್ಕೆ ಮತ್ತು ಅವರ ಅಭಿಮಾನಿಗಳಿಗೆ ಹೇಳಿಕೊಟ್ಟ ನೀತಿಪಾಠ ಎಂದೆಂದಿಗೂ ಅಮರ. ಈ ಕಾರಣಕ್ಕೆ ಸಂಚಾರಿ ವಿಜಯ್‌ ಹುಟ್ಟುಹಬ್ಬವನ್ನ ವಿಶಿಷ್ಟವಾಗಿ ಸೆಲೆಬ್ರೇಟ್‌ ಮಾಡಲು ಸಕಲ ಸಿದ್ಧತೆ ಸಾಗಿದೆ.ನಾಟಕೋತ್ಸವ‌, ರಕ್ತದಾನ ಶಿಬಿರ ಸೇರಿ ವಿವಿಧ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದಾರೆ ಸಂಚಾರಿ ವಿಜಯ್‌ ಅವರ ಅಭಿಮಾನಿಗಳು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.