Sadhvi Prachi-Swara Bhaskar: “ನಿನಗೂ ಫ್ರಿಡ್ಜ್ ಗತಿ ಬರಬಹುದು”: ಮದುವೆ ಬೆನಲ್ಲೇ ಸಾಧ್ವಿ ಶಾಪಕ್ಕೆ ಗುರಿಯಾದರೇ ಸ್ವರಾ ಭಾಸ್ಕರ್!
Sadhvi Prachi Statement on Swara Bhaskar Marriage: “ಶೀಘ್ರದಲ್ಲೇ ಸ್ವರಾ ಭಾಸ್ಕರ್ ಮನೆಗೆ ಮರಳಲಿದ್ದಾರೆ. ಇದು ಆಗದಿದ್ದರೆ ಅವರ ಸ್ಥಿತಿಯೂ ಶ್ರದ್ಧಾ ವಾಕರ್‌ನಂತಾಗುತ್ತದೆ. ಸೂಟ್ಕೇಸ್ ಅಥವಾ ಫ್ರಿಜ್ ಸ್ಥಿತಿ ಅವರಿಗೆ ಬರುತ್ತದೆ” ಎಂದು ಆಕ್ರೋಶದ ಮಾತುಗಳನ್ನಾಡಿದ್ದಾರೆ. ತನ್ನ ಧರ್ಮವನ್ನು ಬಿಟ್ಟು ಬೇರೆ ಧರ್ಮದರನ್ನು ಮದುವೆಯಾದ ಪ್ರತಿಯೊಬ್ಬ ಮಹಿಳೆಯನ್ನು ಸಹ ಸಾಧ್ವಿ ಪ್ರಾಚಿ ಗುರಿಯಾಗಿಸಿ ಈ ಮಾತುಗಳನ್ನಾಡಿದ್ದಾರೆ. ಸ್ವರಾ ಮದುವೆಯ ಬಳಿಕ ಶ್ರದ್ಧಾ ಅವರ ಫ್ರಿಡ್ಜ್ ಪರಿಸ್ಥಿತಿಯನ್ನು ನೆನಪಿಸಿಕೊಳ್ಳಬೇಕು ಎಂದರು
Sadhvi Prachi Statement on Swara Bhaskar Marriage: ಇತ್ತೀಚಿನ ದಿನಗಳಲ್ಲಿ ಸ್ವರಾ ಭಾಸ್ಕರ್ ಅವರ ಮದುವೆ, ಪ್ರೇಮ ಜೀವನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಸ್ವರಾ ಭಾಸ್ಕರ್ ನ್ಯಾಯಾಲಯದಲ್ಲಿ ಫಹಾದ್ ಅಹಮದ್’ರನ್ನು ಇತ್ತೀಚೆಯಷ್ಟೇ ಮದುವೆಯಾಗಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಸ್ಪಷ್ಟನೆಯನ್ನೂ ಸಹ ನೀಡಿದ್ದಾರೆ. ಈ ವಿಚಾರವಾಗಿ ಅವರನ್ನು ಸಖತ್ ಟ್ರೋಲ್ ಮಾಡಲಾಗುತ್ತಿದೆ. ಈ ಬೆನ್ನಲ್ಲೇ ಬಿಜೆಪಿ ನಾಯಕಿ ಸಾಧ್ವಿ ಪ್ರಾಚಿ ಅವರು ಅಂತರ್ ಧರ್ಮೀಯ ವಿವಾಹದ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ: Smriti Mandhana: ಸ್ಮೃತಿ ಮಂಧಾನ ಕೋಪದಲ್ಲೂ ಇಷ್ಟೊಂದು ಮುದ್ದಾಗಿ ಕಾಣಿಸೋದಾ…? ಈ ಫೋಟೋ ನೋಡಿ
“ಶೀಘ್ರದಲ್ಲೇ ಸ್ವರಾ ಭಾಸ್ಕರ್ ಮನೆಗೆ ಮರಳಲಿದ್ದಾರೆ. ಇದು ಆಗದಿದ್ದರೆ ಅವರ ಸ್ಥಿತಿಯೂ ಶ್ರದ್ಧಾ ವಾಕರ್‌ನಂತಾಗುತ್ತದೆ. ಸೂಟ್ಕೇಸ್ ಅಥವಾ ಫ್ರಿಜ್ ಸ್ಥಿತಿ ಅವರಿಗೆ ಬರುತ್ತದೆ” ಎಂದು ಆಕ್ರೋಶದ ಮಾತುಗಳನ್ನಾಡಿದ್ದಾರೆ.
ತನ್ನ ಧರ್ಮವನ್ನು ಬಿಟ್ಟು ಬೇರೆ ಧರ್ಮದರನ್ನು ಮದುವೆಯಾದ ಪ್ರತಿಯೊಬ್ಬ ಮಹಿಳೆಯನ್ನು ಸಹ ಸಾಧ್ವಿ ಪ್ರಾಚಿ ಗುರಿಯಾಗಿಸಿ ಈ ಮಾತುಗಳನ್ನಾಡಿದ್ದಾರೆ. ಸ್ವರಾ ಮದುವೆಯ ಬಳಿಕ ಶ್ರದ್ಧಾ ಅವರ ಫ್ರಿಡ್ಜ್ ಪರಿಸ್ಥಿತಿಯನ್ನು ನೆನಪಿಸಿಕೊಳ್ಳಬೇಕು ಎಂದರು
ಶ್ರದ್ಧಾ ನಂತರ ನಿಕ್ಕಿ ವಿಚಾರ ಪ್ರಸ್ತಾಪಿಸಿದ ಅವರು, “ಎಷ್ಟು ಹುಡುಗಿಯರು ದಾರಿ ತಪ್ಪಿದ್ದಾರೋ ಗೊತ್ತಿಲ್ಲ. ಆದರೆ ಅವಳು ದಾರಿ ತಪ್ಪುತ್ತಾಳೆ ಎಂದರೆ ನನಗೆ ದುಃಖವಾಗುತ್ತದೆ. ಸೂಟ್‌ಕೇಸ್‌ನಲ್ಲಿ ಅಥವಾ ಗೋಣಿಚೀಲದಲ್ಲಿ ಹೆಣವಾಗಿ ಕಂಡುಬರುವ ಭಯವಿದೆ. ಸದ್ಯದಲ್ಲೇ ಸ್ವರಾ ಭಾಸ್ಕರ್ ಸುದ್ದಿಯೂ ಬರಲಿದೆ. ವಿಚ್ಛೇದನದ ಸುದ್ದಿ ಸಿಗಲಿದೆ” ಎಂದು ಹೇಳಿದರು. ಇನ್ನು ಸಾಧ್ವಿ ಹೇಳಿಕೆಯ ಬಗ್ಗೆ ಸ್ವರಾ ಭಾಸ್ಕರ್ ಏನು ಹೇಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಸ್ವರಾ ಚರ್ಚೆಯ ಮೂಲಕ ರಾಜಕೀಯಕ್ಕೆ ಬಂದವರು ಎಂಬುದು ಇಲ್ಲಿ ತಿಳಿದುಕೊಳ್ಳಬೇಕಾದ ಸಂಗತಿ.
ಸ್ವರಾ 2019 ರಿಂದ ಫಹಾದ್ ಜೊತೆ ಸ್ನೇಹದಿಂದಿದ್ದಾರೆ. ಪ್ರತಿಭಟನೆಯ ಸಂದರ್ಭದಲ್ಲಿ ಇಬ್ಬರೂ ಭೇಟಿಯಾಗಿದ್ದರು. ಮೊದಲಿಗೆ ಸ್ನೇಹಿತರಾಗಿದ್ದ ಅವರು, ಬಳಿಕ ಪ್ರೀತಿಸಿ ರಿಜಿಸ್ಟರ್ ಮೂಲಕ ಮದುವೆಯಾಗಿದ್ದಾರೆ. ಸ್ವರಾ ತಮ್ಮ ಮದುವೆಯ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಗಳೊಂದಿಗೆ ಹಂಚಿಕೊಂಡಿದ್ದಾರೆ. ಫಹಾದ್ ಅಹಮದ್ ಮಹಾರಾಷ್ಟ್ರ ಎಸ್ಪಿ ಯುವ ಸಮಿತಿಯ ರಾಜ್ಯಾಧ್ಯಕ್ಷ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.