OTT : ಓಟಿಟಿಯಲ್ಲಿ ಅಬ್ಬರಿಸಲಿವೆ ಬ್ಲಾಕ್ಬಸ್ಟರ್ ಸಿನಿಮಾಗಳು..!
ಮೊದಲೆಲ್ಲಾ ಥಿಯೇಟರ್‌ನಲ್ಲಿ ಬಿಡುಗಡೆಯಾದ ಸಿನಿಮಾ ಟಿವಿಗೆ ಬರೋಕೆ ತಿಂಗಳುಗಟ್ಟಲೆ ಕಾಯಬೇಕಿತ್ತು. ಆದರೆ ಈಗ ದೊಡ್ಡ ದೊಡ್ಡ ಸಿನಿಮಾಗಳೇ ತಿಂಗಳು ಕಳೆಯುವಷ್ಟರಲ್ಲಿ ನಿಮ್ಮ ಮೊಬೈಲ್ ಸ್ಟ್ರೀನ್ನಲ್ಲಿ ಕಾಣಿಸಿಕೊಳ್ಳುತ್ತವೆ. ಓಟಿಟಿ ಫ್ಲಾಟ್ಫಾರ್ಮ್ ಚಂದಾದಾರರು ಹಿಟ್ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡುವ ಅವಕಾಶ ಸಿಗುತ್ತಿದೆ. ಕೆಲ ಸಿನಿಮಾಗಳು ನೇರವಾಗಿ ಓಟಿಟಿಗೆ ಬರುತ್ತಿವೆ.
OTT : ಈ ವಾರ ಥಿಯೇಟರ್‌ಗಳಲ್ಲಿ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಆದರೆ ಓಟಿಟಿಯಲ್ಲಿ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತಿದೆ. ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್‌ನ ಹಿಟ್ ಸಿನಿಮಾಗಳು ಒಂದೇ ವಾರದಲ್ಲಿ ಓಟಿಟಿಯಲ್ಲಿ ಸದ್ದು ಮಾಡಲಿದೆ.
'ವಾರಿಸು' ಆರ್ಭಟ ಶುರು ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗಪ್ಪಳಿಸಿದ್ದ ದಳಪತಿ ವಿಜಯ್ ನಟನೆಯ 'ವಾರಿಸು' ಸಿನಿಮಾ ಓಟಿಟಿಗೆ ಬಂದಿದೆ. ಈಗಾಗಲೇ ಸಿನಿಮಾ ಅಮೇಜಾನ್ ಪ್ರೈಮ್ ಚಂದಾದಾರರನ್ನು ರಂಜಿಸುತ್ತಿದೆ. ತೆಲುಗಿನ ವಂಶಿ ಪೈಡಿಪಲ್ಲಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ ಆಗಿರುವ 'ವಾರಿಸು' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ರು, ಬಾಕ್ಸಾಫೀಸ್‌ನಲ್ಲಿ 250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ-Ananth Nag : ಬಿಜೆಪಿ ಸೆರ್ಪಡೆ ಕಾರ್ಯಕ್ರಮಕ್ಕೆ ಅನಂತ್ ನಾಗ್ ಗೈರು
'ವೀರಸಿಂಹ ರೆಡ್ಡಿ' ದರ್ಬಾರ್ ತೆಲುಗಿನ 'ವೀರಸಿಂಹ ರೆಡ್ಡಿ' ಸಿನಿಮಾ ಇಂದು ಮಧ್ಯರಾತ್ರಿಯಿಂದಲೇ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಗೋಪಿಚಂದ್ ಮಲಿನೇನಿ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಬಾಲಕೃಷ್ಣ ಎದುರು ಕನ್ನಡ ನಟ ದುನಿಯಾ ವಿಜಯ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಮಿಂಚಿದ್ದಾರೆ. ರಾಯಲ ಸೀಮ ಫ್ಯಾಕ್ಷನಿಸಂ ಹಿನ್ನಲೆಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.
ಮಧ್ಯರಾತ್ರಿಯಿಂದಲೇ 'ಕ್ರಾಂತಿ' ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ತಿಂಗಳಿಗೂ ಮೊದಲೇ ಓಟಿಟಿಗೆ ಎಂಟ್ರಿ ಕೊಡ್ತಿದೆ. ಜನವರಿ 26ಕ್ಕೆ ತೆರೆಕಂಡಿದ್ದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ಕಲೆಕ್ಷನ್ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಆದರೆ ಚಿತ್ರತಂಡ ಸಕ್ಸಸ್ ಮೀಟ್ ಮಾಡಿ ಎಲ್ಲಾ ಗೊಂದಲಕ್ಕೂ ತೆರೆ ಎಳೆದಿತ್ತು. ಇತ್ತೀಚೆಗೆ 25 ದಿನ ಪೂರೈಸಿದ್ದ ಸಿನಿಮಾ ಇಷ್ಟು ಬೇಗ ಡಿಜಿಟಲ್ ಫ್ಲಾಟ್‌ಫಾರ್ಮ್‌ಗೆ ಬರ್ತಿರೋದು ಅಚ್ಚರಿ ಮೂಡಿಸಿದೆ. ವಿ. ಹರಿಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ಚರ್ಚಿಸಲಾಗಿದೆ. ಶೈಲಜಾ ನಾಗ್ ಹಾಗೂ ಬಿ ಸುರೇಶ ದಂಪತಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಲ್ಲಾ ಕಮರ್ಷಿಯಲ್ ಅಂಶಗಳ ಜೊತೆಗೆ ಒಂದೊಳ್ಳೆ ಸಂದೇಶ ಕೂಡ ಸಿನಿಮಾ 'ಕ್ರಾಂತಿ' ಸಿನಿಮಾದಲ್ಲಿದೆ. ಮಿಶ್ರಪ್ರತಿಕ್ರಿಯೆ ಸಿಕ್ಕಿದ್ದರಿಂದ ಥಿಯೇಟರ್‌ನಲ್ಲಿ ಸಿನಿಮಾ ನೋಡದೇ ಇದ್ದವರು ಓಟಿಟಿಯಲ್ಲಿ ನೋಡಲು ಕಾಯ್ತಿದ್ದಾರೆ.
ಇದನ್ನೂ ಓದಿ- Actor Prabhu: ದಕ್ಷಿಣ ಭಾರತದ ಖ್ಯಾತ ನಟ ಆಸ್ಪತ್ರೆಗೆ ದಾಖಲು! ಹೇಗಿದೆ ಆರೋಗ್ಯ ಸ್ಥಿತಿ?
ಈ ವಾರವೇ 'ಮೈಕಲ್' ಸ್ಟ್ರೀಮಿಂಗ್ ಇನ್ನು ಸಂದೀಪ್ ಕೃಷ್ಣನ್ ನಟನೆಯ 'ಮೈಕಲ್' ಸಿನಿಮಾ ಫೆಬ್ರವರಿ 24ಕ್ಕೆ ಅಹಾ ಫ್ಲಾಟ್‌ಫಾರ್ಮ್‌ಗೆ ಬರ್ತಿದೆ. ಮಲಯಾಳಂನ 'ತಂಕ್ಕಂ' ಈಗಾಗಲೇ ಅಮೇಜಾನ್ ಪ್ರೈಮ್‌ನಲ್ಲಿ ಸಿಗ್ತಿದೆ. 'ಇರು ಧ್ರುವಂ- 2' ವೆಬ್ ಸೀರಿಸ್ ಫೆಬ್ರವರಿ 24ಕ್ಕೆ ಸೋನಿ ಲಿವ್‌ನಲ್ಲಿ ಶುರುವಾಗುತ್ತಿದೆ. 'ನನ್‌ಪಾಕ್ಕಲ್ ನೆರತ್ತು ಮಯಕ್ಕಂ' ಮಲಯಾಳಂ ಸಿನಿಮಾ ಫೆಬ್ರವರಿ 23ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಒಟ್ನಲ್ಲಿ ಈ ವಾರ ಸಿನಿಪ್ರೇಮಿಗಳಿಗೆ ಓಟಿಟಿಯಲ್ಲಿ ಮನರಂಜನೆಯ ರಸದೌತಣ ಕಾಯ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.