Honey Rose Boby chemmanur : ಮಲಯಾಳಂನ ಖ್ಯಾತ ನಟಿ ಹನಿ ರೋಸ್ ದೂರಿನ ಮೇರೆಗೆ ಪೊಲೀಸರು ಖ್ಯಾತ ಉದ್ಯಮಿ ಬಾಬಿ ಚೆಮ್ಮನ್ನೂರ್ ಅವರನ್ನು ವಯನಾಡಿನಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಹನಿ ರೋಸ್ ತನ್ನ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ್ದಕ್ಕಾಗಿ ಬಾಬಿ ಚೆಮ್ಮನ್ನೂರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಇದರ ಭಾಗವಾಗಿ ಪೊಲೀಸರು ಬಾಬಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. 


COMMERCIAL BREAK
SCROLL TO CONTINUE READING

ವಿಶೇಷ ತನಿಖಾ ತಂಡ ಕೊಚ್ಚಿಯಿಂದ ವಯನಾಡಿಗೆ ಬಂದು ಬಾಬಿಯನ್ನು ವಶಕ್ಕೆ ತೆಗೆದುಕೊಂಡಿದೆ. ಹೆಚ್ಚಿನ ತನಿಖೆಗಾಗಿ ಅವರನ್ನು ಕೊಚ್ಚಿಗೆ ಕರೆದೊಯ್ಯಲಾಗುತ್ತದೆ. ಕೆಲ ದಿನಗಳಿಂದ ತನ್ನ ಮೇಲೆ ಕೆಲವರು ಅಶ್ಲೀಲ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಹನಿ ರೋಸ್ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದರು. ಅಲ್ಲದೆ, ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. 


ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್‌ ಬರ್ತ್‌ ಡೇ ಗೆ toxic ಬಿಗ್‌ ಗಿಫ್ಟ್.. ಟಾಕ್ಸಿಕ್ ಫಸ್ಟ್ ಲುಕ್ ರಿವೀಲ್


ನಟಿಯರ ಲೈಂಗಿಕ ಕಿರುಕುಳ ಪ್ರಕರಣ ಈಗಾಗಲೇ ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದೆ. ಇದೀಗ ಹನಿ ರೋಸ್ ಆರೋಪದ ಮೂಲಕ ಲೈಂಗಿಕ ಕಿರುಕುಳ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಮಧ್ಯ ಸ್ವತಃ ಬಾಬಿ ಮಾಧ್ಯಮಗಳಿಗೆ ನಟಿಯ ಬಗ್ಗೆ ತಾನು ಏನೂ ಹೇಳಿಲ್ಲ.. ಹನಿರೋಸ್ ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ..


ಬಾಬಿ ಚೆಮ್ಮನ್ನೂರ್ ಭಾರತದ ಪ್ರಮುಖ ಚಿನ್ನದ ವ್ಯಾಪಾರಿಗಳಲ್ಲಿ ಒಬ್ಬರು. ಈ ಹಿಂದೆ ಅವರು ವಿಶ್ವ ಪ್ರಸಿದ್ಧ ಫುಟ್ಬಾಲ್ ಆಟಗಾರ ಡಿಯಾಗೋ ಮರಡೋನಾ ಅವರನ್ನು ಕೊಚ್ಚಿಗೆ ಕರೆತಂದಿದ್ದರು. ಅಲ್ಲದೆ ಮರಡೋನಾ ಅವರನ್ನು ಆಭರಣ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಿದ್ದರು. ಇದೀಗ ಈ ಖ್ಯಾತ ಉದ್ಯಮಿ ಹನಿ ರೋಸ್ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿ ಸುದ್ದಿಯಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.