`ಕೆಜಿಎಫ್` ಚಿತ್ರದ ಹೆಸರು ಕೇಳಿದ್ರೆ ಸಾಕು ಭಯವಾಗುತ್ತೆ` ಎಂದ ಆಮೀರ್ ಖಾನ್
ಬಾಲಿವುಡ್ ಅಂಗಳದಲ್ಲಿ ದೊಡ್ಡ ದೊಡ್ಡ ಹಿಟ್ ಸಿನಿಮಾಗಳನ್ನು ನೀಡಿ, ಚೀನಾ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಕನ್ನಡ ಸಿನಿಮಾ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡಿದ್ದಾರೆ. ಖಾಸಗಿ ಸಂದರ್ಶನದಲ್ಲಿ ಮಾತನಾಡಿರುವ ಆಮೀರ್ ಖಾನ್, ಕನ್ನಡದ ಈ ಸಿನಿಮಾದ ಹೆಸರು ಕೇಳಿದ್ರೆ ಭಯವಾಗುತ್ತೆ ಅಂದಿದ್ದಾರೆ. ಹಾಗಾದ್ರೆ ಯಾವುದು ಆ ಸಿನಿಮಾ ಅಂತಾ ತಿಳಿಯಲು ಮುಂದೆ ಓದಿ.
ಮುಂಬೈ: ಬಾಲಿವುಡ್ ಅಂಗಳದಲ್ಲಿ ದೊಡ್ಡ ದೊಡ್ಡ ಹಿಟ್ ಸಿನಿಮಾಗಳನ್ನು ನೀಡಿ, ಚೀನಾ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಕನ್ನಡ ಸಿನಿಮಾ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡಿದ್ದಾರೆ. ಖಾಸಗಿ ಸಂದರ್ಶನದಲ್ಲಿ ಮಾತನಾಡಿರುವ ಆಮೀರ್ ಖಾನ್, ಕನ್ನಡದ ಈ ಸಿನಿಮಾದ ಹೆಸರು ಕೇಳಿದ್ರೆ ಭಯವಾಗುತ್ತೆ ಅಂದಿದ್ದಾರೆ. ಹಾಗಾದ್ರೆ ಯಾವುದು ಆ ಸಿನಿಮಾ ಅಂತಾ ತಿಳಿಯಲು ಮುಂದೆ ಓದಿ.
'ಕೆಜಿಎಫ್' ಅನ್ನೋ ಹೆಸರಲ್ಲೇ ಒಂದು ಗತ್ತಿದೆ. 'ಕೆಜಿಎಫ್' ಸಿನಿಮಾ ಬ್ರ್ಯಾಂಡ್ ಇದ್ದಂತೆ. ಇದು ಇವತ್ತಿಗೆ ಮಾತ್ರವಲ್ಲ, ಮುಂದೆ ನೂರಾರು ವರ್ಷಗಳೇ ಕಳೆದರೂ 'ಕೆಜಿಎಫ್' ಅನ್ನೋ ಸಿನಿಮಾ ತಾಕತ್ ಏನು ಅನ್ನೋದನ್ನ ಜನ ಖಂಡಿತಾ ಮಾತನಾಡಿಕೊಳ್ಳುತ್ತಾರೆ. ಇಂತಹ ಚಿನ್ನದಂತಹ ಸಿನಿಮಾ ಕುರಿತು ಖಾಸಗಿ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿರುವ ಬಾಲಿವುಡ್ ಸ್ಟಾರ್ ಆಮೀರ್ ಖಾನ್, 'ಕೆಜಿಎಫ್' ಹೆಸರು ಕೇಳಿದ್ರೆ ಭಯವಾಗುತ್ತೆ ಎಂದಿದ್ದಾರೆ.ಬಾಕ್ಸ್ ಆಫೀಸ್ ನಲ್ಲಿ ಮುಂದುವರೆದ ರಾಕಿ ಭಾಯ್ ಅಬ್ಬರ
ಬಾಲಿವುಡ್‌ಗೆ ಭಯ..!
'ಕೆಜಿಎಫ್' ಅಂದ್ರೆ ಬಾಲಿವುಡ್‌ಗೆ ಭಯ ಕಾಡುತ್ತಿದೆ ಎನ್ನಬಹುದು. ಯಾಕಂದ್ರೆ 'ಕೆಜಿಎಫ್' ಚಾಪ್ಟರ್ 1ರ ಎದುರು ಬಂದಿದ್ದ ಬಾಲಿವುಡ್ ಸಿನಿಮಾಗಳು ತೋಪೆದ್ದು ಹೋಗಿದ್ದವು. ಹಾಗೇ 'ಕೆಜಿಎಫ್' ಚಾಪ್ಟರ್ 2 ಎದುರು ಬರೋಕೆ ಸಿದ್ಧವಾಗಿದ್ದ ಬಾಲಿವುಡ್‌ನ ರೀಮೇಕ್ ಸಿನಿಮಾಗಳು ಎಸ್ಕೇಪ್ ಆಗಿವೆ. ಅದರಲ್ಲಿ ಆಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಕೂಡ ಒಂದು. 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಬಿಡುಗಡೆಯ ದಿನಾಂಕವನ್ನ 'ಕೆಜಿಎಫ್' ಚಾಪ್ಟರ್ 2 ಕಾರಣಕ್ಕೆ ಆಗಸ್ಟ್‌ವರೆಗೂ ಮುಂದಕ್ಕೆ ಹಾಕಿದ್ದಾರೆ ಆಮೀರ್ ಖಾನ್.
ಇದನ್ನೂ ಓದಿ: ಹಿಂದಿ ದಾಷ್ಟ್ಯ ಮೆರೆಯುವ ಬಾಲಿವುಡ್ ಗೆ ರಾಮ್ ಗೋಪಾಲ್ ವರ್ಮಾ ಹಾಕಿದ ಸವಾಲೇನು ಗೊತ್ತೇ?
ಒಟ್ಟಾರೆ ಹೇಳುವುದಾದ್ರೆ, ಕನ್ನಡ ಸಿನಿಮಾಗಳನ್ನ ಕಂಡು ಬಾಲಿವುಡ್ ಭಯ ಮತ್ತು ಆತಂಕದಲ್ಲಿ ದಿನದೂಡುವ ದಿನಗಳು ಇದೀಗ ಬಂದಿವೆ. ಹಿಂದೆ ನಮ್ಮ ನಾಡಿನ ಸಿನಿಮಾಗಳು ರಿಲೀಸ್ ಆಗುವುದಕ್ಕೂ ಪರದಾಡುತ್ತಿದ್ದವು. ಆದರೆ ಈಗ ಅವರದ್ದೇ ಜಾಗಕ್ಕೆ ನುಗ್ಗಿ, ಗೆದ್ದು ಬೀಗುತ್ತಿರುವ ಕನ್ನಡದ ಕೆಜಿಎಫ್ ಸಿನಿಮಾ ಬಾಲಿವುಡ್ ಸ್ಟಾರ್‌ಗಳ ಎದೆಯಲ್ಲಿ ನಡುಕ ಸೃಷ್ಟಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.