ಒಡಿಸ್ಸಾದ ಫೋನಿ ಸಂತ್ರಸ್ಥರಿಗೆ 1 ಕೋಟಿ ರೂ. ನೆರವು ನೀಡಿದ ನಟ ಅಕ್ಷಯ್ ಕುಮಾರ್
ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಫೋನಿ ಚಂಡಮಾರುತದಿಂದ ಬಲಿಯಾದ ಸಂತ್ರಸ್ಥರಿಗೆ ನೆರವು ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ನಿಧಿಗೆ ಅಕ್ಷಯ್ ಕುಮಾರ್ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ನವದೆಹಲಿ: ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಫೋನಿ ಚಂಡಮಾರುತದಿಂದ ಬಲಿಯಾದ ಸಂತ್ರಸ್ಥರಿಗೆ ನೆರವು ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ನಿಧಿಗೆ ಅಕ್ಷಯ್ ಕುಮಾರ್ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಬಾಲಿವುಡ್ ನ ಮೂಲಗಳು ಹೇಳುವಂತೆ " ಅಕ್ಷಯ್ ಕುಮಾರ್ ದೇಣಿಗೆ ನೀಡುತ್ತಿರುವುದು ಹೊಸದೆನೆಲ್ಲ ಈ ಹಿಂದೆ ಅವರು ತಮ್ಮ ಭಾರತ್ ಕೆ ವೀರ್ ಕಾರ್ಯಕ್ರಮದ ಭಾಗವಾಗಿ ಸೈನಿಕರಿಗೆ ಅಲ್ಲದೆ ಕೇರಳ ಮತ್ತು ಚೆನ್ನೈ ಪ್ರವಾಹ ಸಂತ್ರಸ್ತರಿಗೆ ಸಹಾಯಧನ ನೀಡಿದ್ದರು" ಎಂದು ಹೇಳಲಾಗಿದೆ.
ಇನ್ನು ಸಿನಿಮಾದ ವಿಷಯವಾಗಿ ಹೇಳುವುದಾದರೆ ಅಕ್ಷಯ್ ಕುಮಾರ್ ಮುಂದಿನ ಚಿತ್ರ ಗುಡ್ ನ್ಯೂಸ್ ನಲ್ಲಿ ಕರೀನಾ ಕಪೂರ್ ಜೊತೆ ನಟಿಸುತ್ತಿದ್ದಾರೆ.ಈ ಚಿತ್ರದಲ್ಲಿ ಕರೀನಾ ಮತ್ತು ಅಕ್ಷಯ ಅವರು ಮಕ್ಕಳನ್ನು ಹೇರಲು ಪ್ರಯತ್ನಿಸುವ ದಂಪತಿಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ವಿಶೇಷವೆಂದರೆ ಗುಡ್ ನ್ಯೂಸ್ ಸಿನಿಮಾದ ಮೂಲಕ ಕರಿನಾ ಮತ್ತು ಅಕ್ಷಯ್ 9 ವರ್ಷಗಳ ನಂತರ ಜೊತೆಯಾಗಿ ನಟಿಸುತ್ತಿದ್ದಾರೆ. ಈ ಹಿಂದೆ ಕಂಬಖ್ತ್ ಇಷ್ಕ್ನಲ್ಲಿ ಈ ಜೋಡಿ ಕೊನೆಯ ಬಾರಿಗೆ ಕಾಣಿಸಿಕೊಂಡಿತ್ತು.ಈ ಚಿತ್ರವು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ಮೊದಲ ಬಾರಿಗೆ ನಿರ್ದೇಶಕ ರಾಜ್ ಮೆಹ್ತಾ ಅವರ ನಿರ್ದೇಶನದಲ್ಲಿ ತೆರೆಗೆ ಬಂದಿತ್ತು.