ನವದೆಹಲಿ: ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರನ್ನು ನಿಯಮಿತವಾಗಿ ತಪಾಸಣೆಗಾಗಿ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. 


COMMERCIAL BREAK
SCROLL TO CONTINUE READING

77 ವರ್ಷದ ಅಮಿತಾಬ್ ಬಚ್ಚನ್ ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಅವರು ಇನ್ನೂ ವೀಕ್ಷಣೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಚ್ಚನ್ ವಾಡಿಕೆಯ ತಪಾಸಣೆಗಾಗಿ ಬಂದಿದ್ದರು ಎಂದು ಆಸ್ಪತ್ರೆಯ ಮೂಲವು ಪಿಟಿಐಗೆ ತಿಳಿಸಿದ್ದು, ಆದಾಗ್ಯೂ, ಆರಂಭಿಕ ವರದಿಗಳು ಯಕೃತ್ತಿನ ಸಮಸ್ಯೆಗಳಿಂದಾಗಿ ನಟನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಸೂಚಿಸಿದೆ.



ಅಮಿತಾಬ್ ಬಚ್ಚನ್ ಅವರ ಯಕೃತ್ತಿನ ಭಾಗ ಕೇವಲ 25 ಪ್ರತಿಶತದಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿದ್ದರೆ, ಉಳಿದದ್ದು ಈ ಹಿಂದೆ ರಕ್ತ ವರ್ಗಾವಣೆ ನಂತರ ಹಾನಿಗೊಳಲಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಇದು 1983 ರ ಚಲನಚಿತ್ರ ಕೂಲಿಯ ಚಿತ್ರೀಕರಣದ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡ ನಂತರ ಅಗತ್ಯವಾಗಿತ್ತು ಎನ್ನಲಾಗಿದೆ.


ಇತ್ತೀಚಿಗೆ ಅಮಿತಾಬ್ ಬಚ್ಚನ್ ಅವರು ಎನ್‌ಡಿಟಿವಿಯ ಸ್ವಸ್ಥಾಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿ 'ಆರಂಭಿಕ ರೋಗನಿರ್ಣಯ ಮತ್ತು ನಿಯಮಿತ ತಪಾಸಣೆ ಅವರ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿದೆ ಎಂದು ಹೇಳಿದರು. "ನಾನು ಇನ್ನೂ 25 ಪ್ರತಿಶತದಷ್ಟು ಉಳಿದುಕೊಂಡಿದ್ದೇನೆ ಮತ್ತು ಇದು ನಿಮ್ಮನ್ನು ಪರೀಕ್ಷಿಸಲು, ನೀವೇ ರೋಗ ನಿರ್ಣಯ ಮಾಡಲು ಮತ್ತು ನಂತರ ಚಿಕಿತ್ಸೆ ಇದೆ ಎಂದು ಪ್ರಚಾರ ಮಾಡಲು ನನಗೆ ಸಾಧ್ಯವಾಗಿದೆ" ಎಂದು ಅವರು ಹೇಳಿದರು. 



ಏತನ್ಮಧ್ಯೆ, ಆಸ್ಪತ್ರೆಗೆ ದಾಖಲಾದ ವರದಿಗಳ ಮಧ್ಯೆ, ಅಮಿತಾಬ್ ಬಚ್ಚನ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು. ಕರ್ವಾ ಚೌತ್ ಸಂದರ್ಭದಲ್ಲಿ ಗುರುವಾರ ಅವರು ತಮ್ಮ ಪತ್ನಿ ಜಯ ಬಚ್ಚನ್ ಅವರ ಎರಡು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.