Salman Khan Security: ಬಾಲಿವುಡ್‌ ನಟ ಸಲ್ಮಾನ್ ಖಾನ್ ಫಾರ್ಮ್‌ಹೌಸ್‌ಗೆ ನುಗ್ಗಲು ಯತ್ನಿಸಿದ ಇಬ್ಬರನ್ನು ಇತ್ತೀಚೆಗೆ ಬಂಧಿಸಲಾಗಿದೆ. ನಕಲಿ ಐಡಿ ಬಳಸಿ ಸಲ್ಮಾನ್ ಖಾನ್ ಫಾರ್ಮ್‌ಹೌಸ್‌ಗೆ ನುಗ್ಗಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಬಂಧಿತ ಇಬ್ಬರೂ ಬೇರೆ ರಾಜ್ಯದವರು. ಇಬ್ಬರೂ ಸಿನಿಮಾ ತಾರೆಯರನ್ನು ನೋಡಲು ಮುಂಬೈಗೆ ಬಂದಿದ್ದರು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಅಕ್ರಮವಾಗಿ ಫಾರ್ಮ್ ಹೌಸ್ ಪ್ರವೇಶಿಸಿದ ಆರೋಪದ ಮೇಲೆ ಸದ್ಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಟ ಸಲ್ಮಾನ್ ಖಾನ್ ಅವರ ಈ ಫಾರ್ಮ್ ಹೌಸ್‌ನ ಮುಖ್ಯ ಬಾಗಿಲಿನ ಎಡಭಾಗದಲ್ಲಿರುವ ಮರದ ಮೂಲಕ ಒಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ವರದಿಗಳ ಪ್ರಕಾರ, ಜನವರಿ 4 ರಂದು ಸಂಜೆ 4 ಗಂಟೆಗೆ ಇಬ್ಬರು ವ್ಯಕ್ತಿಗಳು ಅನುಮತಿ ಇಲ್ಲದೇ ಫಾರ್ಮ್‌ಹೌಸ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು.


ಇದನ್ನೂ ಓದಿ: ಚೇಫ್ ಆದ ದಿಯಾ ಪೃಥ್ವಿ ಅಂಬಾರ್.. ಬಂತು ‘ಜೂನಿ’ ಕ್ಯಾರೆಕ್ಟರ್ ಟೀಸರ್ 


ಈ ವೇಳೆ ಭದ್ರತಾ ಸಿಬ್ಬಂದಿ ಇಬ್ಬರನ್ನೂ ನೋಡಿದ್ದಾರೆ. ಇಬ್ಬರೂ ಸಿಕ್ಕಿ ಬಿದ್ದಾಗ ಫಾರ್ಮ್ ಹೌಸ್ ಪ್ರವೇಶಿಸಿದ್ದಕ್ಕೆ ಕಾರಣ ಕೇಳಿದರೂ ಉತ್ತರ ನೀಡಲಿಲ್ಲ. ಇವರಿಬ್ಬರೂ ಬೇರೆ ರಾಜ್ಯದಿಂದ ಬಂದವರು ಎಂದು ಹೇಳಲಾಗುತ್ತಿದೆ. 'ಇಬ್ಬರೂ ಬೇರೆ ರಾಜ್ಯಗಳಿಂದ ಬಂದವರು, ಮನೆಯಲ್ಲಿ ಜಗಳವಾಡಿ ಮುಂಬೈಗೆ ಓಡಿಬಂದರು ಎಂದು ಹೇಳಿದ್ದಾರೆ. 


ಅಲ್ಲಿ ಅವರು ಚಲನಚಿತ್ರ ತಾರೆಯರನ್ನು ನೋಡಲು ಪ್ರಯತ್ನಿಸಿದರು, ನಂತರ ಇಬ್ಬರೂ ಜನವರಿ 4 ರಂದು ಸಲ್ಮಾನ್ ಖಾನ್‌ ಫಾರ್ಮ್‌ಹೌಸ್‌ಗೆ ತಲುಪಿದರು' ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ವಿರುದ್ಧವೂ ಟ್ರೇಸ್ ಪಾಸ್ ಪ್ರಕರಣ ದಾಖಲಾಗಿದ್ದು, ಸದ್ಯ ಜೈಲಿನಲ್ಲಿದ್ದಾರೆ. 


ಇದನ್ನೂ ಓದಿ: ಫೈಟರ್ ಚಿತ್ರದ ಮತ್ತೊಂದು ಹಾಡು ರಿಲೀಸ್.. ಏರ್ ಫೋರ್ಸ್ ಪೈಲಟ್ ಲುಕ್ ನಲ್ಲಿ ಅಬ್ಬರಿಸಿದ ಹೃತಿಕ್! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.