Shah Rukh Khan : ಬಿಟೌನ್‌ ಸೂಪರ್‌ ಸ್ಟಾರ್‌ ನಟ ಶಾರುಖ್ ಖಾನ್‌ಗೆ ಮತ್ತೊಮ್ಮೆ ಆರೋಗ್ಯ ಸಮಸ್ಯೆ ಎದುರಾಗಿದೆ. ಖಾನ್‌ಗೆ ಕಣ್ಣಿನ ಸಮಸ್ಯೆ ಇರುವುದು ಗೊತ್ತೇ ಇದೆ.. ಅದರ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗುತ್ತಿದ್ದಾರೆ. ಇದೀಗ ಕಣ್ಣಿನ ಸಮಸ್ಯೆಯ ವಿಚಾರ ಹೊರಬೀಳುತ್ತಿದ್ದಂತೆ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ...


COMMERCIAL BREAK
SCROLL TO CONTINUE READING

ಬಾಲಿವುಡ್ ವಲಯಗಳ ಮಾಹಿತಿ ಪ್ರಕಾರ, ಸೋಮವಾರ ಜುಲೈ 29 ರಂದು ಶಾರುಖ್ ಖಾನ್ ಮುಂಬೈನ ಆಸ್ಪತ್ರೆ ಹೋಗಿದ್ದರು. ಅಲ್ಲಿಯೇ ಕಣ್ಣಿನ ಚಿಕಿತ್ಸೆಗೆ ಒಳಗಾಗಲು ಬಯಸಿದ್ದರು. ಆದರೆ ಅಂದುಕೊಂಡಂತೆ ಆಗಲಿಲ್ಲ. ಆಗಿರುವ ಹಾನಿ ಸರಿಪಡಿಸಲು ತುರ್ತಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ:"ನಿಜವಾಗಿಯೂ ಬ್ರೇಕ್ ಅಪ್ ಆಗಿದೆ..." ಜೀವನದ ಟಾಪ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ರು ಸಪ್ತಮಿ ಗೌಡ


ಇವತ್ತು ಅಥವಾ ನಾಳೆ ಶಾರುಖ್ ಖಾನ್ ಅಮೆರಿಕಕ್ಕೆ ಹೋಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ. ಆದರೆ ನಟನ ಕಣ್ಣಿಗೆ ಏನಾಯ್ತು? ಮುಂಬೈನಲ್ಲಿ ಎಷ್ಟೋ ದೊಡ್ಡ ಡಾಕ್ಟರುಗಳಿದ್ದಾರೆ.. ಆದರೂ ಯಾಕೆ ವಾಸಿಯಾಗುತ್ತಿಲ್ಲ..? ಅನ್ನೋದು ಗೊತ್ತಾಗುತ್ತಿಲ್ಲ. ಆ ಹೊತ್ತಿಗೆ ಬಾಲಿವುಡ್ ಮಾಧ್ಯಮ ಸಂಸ್ಥೆಗಳು ಶಾರುಖ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದವು, ಆದರೆ ಅವರು ಫೋನ್ ಕರೆಗಳು ಮತ್ತು ಸಂದೇಶಗಳಿಗೆ ಪ್ರತಿಕ್ರಿಯಿಸಲಿಲ್ಲ ಎನ್ನಲಾಗಿದೆ... 


2014 ರಲ್ಲಿ ಶಾರುಖ್ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದೇ ಸಮಸ್ಯೆ ಮತ್ತೆ ಪುನರಾವರ್ತನೆಯಾಗಿದೆ ಎಂದು ತೋರುತ್ತದೆ. ಇತ್ತೀಚೆಗಷ್ಟೇ ಯುಕೆಯಿಂದ ಬಂದಿರುವ ನಟ ಶಾರುಖ್ ಖಾನ್ ತಮ್ಮ ಕಣ್ಣಿನ ಚಿಕಿತ್ಸೆಗಾಗಿ ಮತ್ತೇ ಯುಎಸ್‌ಎಗೆ ಹೋಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.