ನವದೆಹಲಿ: ವಿಶ್ವಾದ್ಯಂತ ಕೊರೊನಾ ವೈರಸ್ ಕಾರಣ ಕಳೆದ ದೀರ್ಘಕಾಲದಿಂದ ಲಾಕ್ ಡೌನ್ ಜಾರಿಯಲ್ಲಿದೆ. ಈ ಲಾಕ್ ಡೌನ್ ಅವಧಿಯಲ್ಲಿ ಹಲವು ದಿನಗಳ ಕಾಲ ಮದ್ಯದಂಗಡಿಗಳೂ ಕೂಡ ಬಂದ್ ಇದ್ದವು. ಆದರೆ, ಇದೀಗ ನಿಧಾನವಾಗಿ ಲಾಕ್ ಡೌನ್ ಅನ್ನು ಅನ್ ಲಾಕ್ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಈ ಅನ್ ಲಾಕ್ ಪ್ರಕ್ರಿಯೆ ಆರಂಭವಾಗುತ್ತಲೇ ಬಾಲಿವುಡ್ ಸೆಲೆಬ್ರಿಟಿಗಳೂ ಕೂಡ ಹೊರಗಡೆ ವಾಯುವಿಹಾರ ಹಾಗೂ ತಿರುಗುತ್ತಿರುವುದನ್ನು ಗಮನಿಸಲಾಗಿದೆ. ಈ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಭಾರಿ ಗಮನ ಸೆಳೆಯುತ್ತಿದ್ದು, ಈ ವಿಡಿಯೋದಲ್ಲಿ ಖ್ಯಾತ ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ತಮ್ಮ ತಲೆಯ ಮೇಲೆ ಭಾರಿ ಗಾತ್ರದ ಬಕೆಟ್ ಹೊತ್ತುಕೊಂಡು ಹೋಗುತ್ತಿರುವುದನ್ನು ನೋಡಬಹುದಾಗಿದೆ.


COMMERCIAL BREAK
SCROLL TO CONTINUE READING

ಈ ಫನ್ನಿ ವಿಡಿಯೋನಲ್ಲಿ ಬಾಲಿವುಡ್ ವಿಲನ್ ಶಕ್ತಿ ಕಪೂರ್ ತಮ್ಮ ತಲೆಯ ಮೇಲೆ ಒಂದು ದೊಡ್ಡ ಗಾತ್ರದ ಬಕೆಟ್ ಹೊತ್ತುಕೊಂಡು ಹೋಗುತ್ತಿರುವುದು ನೋಡಬಹುದಾಗಿದೆ. ಈ ಸಂದರ್ಭದಲ್ಲಿ ಹಿಂದಿನಿಂದ ಅವರಿಗೆ ಯಾರೋ ಕರೆದು ಎಲ್ಲಿಗೆ ಹೊರಟಿರುವಿರಿ? ಎಂದು ಪ್ರಶ್ನಿಸುತ್ತಾರೆ. ಅವರ ಪ್ರಶ್ನೆಗೆ ಉತ್ತರ ನೀಡಿರುವ ಶಕ್ತಿ ಕಪೂರ್ 'ಮದ್ಯ ತರಲು ಹೊರಟಿದ್ದೇನೆ' ಎಂದು ಹೇಳಿ ಮುಂದಕ್ಕೆ ಸಾಗುತ್ತಾರೆ. ಆದರೆ, ಅವರ ಈ ಚರ್ಚೆ ಅಲ್ಲಿಗೆ ನಿಲ್ಲುವುದಿಲ್ಲ... ಶಕ್ತಿ ಅವರ ಉತ್ತರ ಕೇಳಿ ಆ ವ್ಯಕ್ತಿ ಇಡೀ ಸೊಸೈಟಿಗಾಗಿ ಮದ್ಯ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಾನೆ. ವಿಡಿಯೋ ವಿಕ್ಷೀಸಿ...


ಶಕ್ತಿಕಪೂರ್ ಅವರ ಈ ತಮಾಷೆಯ ವಿಡಿಯೋ ನೆಟ್ಟಿಗರ ಭಾರಿ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಅಷ್ಟೇ ಅಲ್ಲ ಈ ವಿಡಿಯೋ ಇದೀಗ ಭಾರಿ ವೈರಲ್ ಕೂಡ ಆಗುತ್ತಿದೆ. ಪೋಸ್ಟ್ ಆಗಿರುವ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರು ಈ ವಿಡಿಯೋ ಅನ್ನು ವಿಕ್ಷೀಸಿದ್ದಾರೆ. ಕೆಳೆದ ಕೆಲ ದಿನಗಳ ಹಿಂದೆಯಷ್ಟೇ ಶಕ್ತಿ ಕಪೂರ್ ವಿಡಿಯೋವೊಂದನ್ನು ಹಂಚಿಕೊಂಡು ಕೊರೊನಾ ವೈರಸ್ ಕಥೆ ಹೇಳುತ್ತಿರುವ ರೀತಿ ಕಂದುಬಂದಿದ್ದರು.