ನವದೆಹಲಿ: ಬಾಲಿವುಡ್ ತಾರೆ ವರುಣ್ ಧವನ್ ಇಂದು ತಮ್ಮ ದೀರ್ಘಕಾಲದ ಗೆಳತಿ ನತಾಶಾ ದಲಾಲ್ ಅವರನ್ನು ಮದುವೆಯಾಗಿದ್ದಾರೆ.ಮುಂಬೈನಲ್ಲಿನ ಅಲಿಬಾಗ್‌ನ ಬೀಚ್ ರೆಸಾರ್ಟ್‌ನ ದಿ ಮ್ಯಾನ್ಷನ್ ಹೌಸ್‌ನಲ್ಲಿ ವಿವಾಹ ವಿಧಿ ವಿಧಾನಗಳು ನಡೆದವು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಂಡರ್ ವೇರ್ ತಮ್ಮ ಪಕ್ಷದ ಚಿಹ್ನೆಯಾಗಲಿ ಎಂದ ವರುಣ್ ಧವನ್ ! ವೀಡಿಯೋ ವೈರಲ್


ವರುಣ್ ಧವನ್ ಅವರ ಮಾರ್ಗದರ್ಶಕ, ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ವಿವಾಹ ಸ್ಥಳಕ್ಕೆ ಆಗಮಿಸಿದ್ದಾರೆ.ಧವನ್ ಅವರ ತಂದೆ, ಚಲನಚಿತ್ರ ನಿರ್ಮಾಪಕ ಡೇವಿಡ್ ಧವನ್, ತಾಯಿ ಲಾಲಿ, ಸಹೋದರ ರೋಹಿತ್ ಮತ್ತು ಅವರ ಪತ್ನಿ ಮತ್ತು ಮಗಳು, ಮತ್ತು ಅವರ ಚಿಕ್ಕಪ್ಪ, ಹಿರಿಯ ನಟ ಅನಿಲ್ ಧವನ್ ಮತ್ತು ಅವರ ಕುಟುಂಬವು ಶುಕ್ರವಾರ ದಲಾಲ್ ಅವರ ಕುಟುಂಬದೊಂದಿಗೆ ವಿವಾಹದ ಸ್ಥಳವನ್ನು ತಲುಪಿತು.


ಇದನ್ನೂ ಓದಿ: ಗರ್ಲ್ ಫ್ರೆಂಡ್ ಜೊತೆಗಿನ ನಿಶ್ಚಿತಾರ್ಥ ಕೈ ಬಿಟ್ಟ ಬಾಲಿವುಡ್ ನಟ ವರುಣ್ ಧವನ್...!


ಬಾಲ್ಯದ ಪ್ರಿಯತಮೆಯಾದ ನತಾಶಾ ದಲಾಲ್ ಅವರನ್ನು ಕಳೆದ ವರ್ಷ ಮದುವೆಯಾಗಲು ವರುಣ್ ಧವನ್ (Varun Dhawan) ನಿರ್ಧರಿಸಿದ್ದರು,ಆದರೆ COVID-19 ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಕಾರಣದಿಂದಾಗಿ ಅವರ ಮದುವೆಯನ್ನು ಮುಂದೂಡಬೇಕಾಯಿತು.ಮಾಧ್ಯಮ ವರದಿಗಳ ಪ್ರಕಾರ, ಸಾಂಕ್ರಾಮಿಕ ರೋಗದಿಂದಾಗಿ ಕೇವಲ 40-50 ಅತಿಥಿಗಳನ್ನು ಮಾತ್ರ ಮದುವೆಗೆ ಆಹ್ವಾನಿಸಲಾಗಿದೆ.


ಇದನ್ನೂ ಓದಿ: ಕಂಗನಾ ರಣಾವತ್ ಜೊತೆ 'ಪಂಗಾ'ಗಿಳಿದ ವರುಣ್ ಧವನ್, ಮುಂದೇನಾಯ್ತು?


ಇತ್ತೀಚೆಗೆ, ಕರೀನಾ ಕಪೂರ್ ಖಾನ್ ಅವರ ವಾಟ್ ವುಮೆನ್ ವಾಂಟ್ ಕಾರ್ಯಕ್ರಮದಲ್ಲಿ ವರುಣ್ ಧವನ್ ತಮ್ಮ ಪ್ರೀತಿ ಚಿಗುರಿದ ಬಗೆ ಹೇಗೆ ಎನ್ನುವ ಕುರಿತಾಗಿ ಮಾತನಾಡಿದ್ದರು."ನಾನು ನತಾಶಾ ಅವರನ್ನು ಮೊದಲ ಬಾರಿಗೆ ಭೇಟಿಯಾದದ್ದು ಆರನೇ ತರಗತಿಯಲ್ಲಿ. ಅಂದಿನಿಂದ ನಾವು ಡೇಟಿಂಗ್ ಮಾಡುತ್ತಿರಲಿಲ್ಲ.ನಾವು ಹನ್ನೊಂದನೇ ಅಥವಾ ಹನ್ನೆರಡನೇ ತರಗತಿಯವರೆಗೆ ಸ್ನೇಹಿತರಾಗಿದ್ದೇವೆ. ಆದರೆ ನಾನು ಅವಳನ್ನು ನೋಡಿದ ಕ್ಷಣ ಇನ್ನೂ ನೆನಪಿದೆ, ನಾವು ಮಾನೆಕ್ಜಿ ಕೂಪರ್‌ಗೆ ಹೋದೆವು, ಅವಳು ಹಳದಿ ಮನೆಯಲ್ಲಿದ್ದಳು ಮತ್ತು ನಾನು ಕೆಂಪು ಮನೆಯಲ್ಲಿದ್ದೆ. ಅವಳು ಊಟದ ವಿರಾಮದಲ್ಲಿ, ಕ್ಯಾಂಟೀನ್‌ನಲ್ಲಿ ನನಗೆ ಊಟ ಮತ್ತು ಎನರ್ಜಿ ಡ್ರಿಂಕ್ ನೀಡಿದಳು.ನಾನು ಅವಳನ್ನು ನೋಡಿದಾಗ, ಆ ದಿನ ನಾನು ಅವಳನ್ನು ಪ್ರೀತಿಸುತ್ತಿದ್ದೇನೆ ಎಂದು ಭಾವಿಸಿದೆ" ಎಂದು ಅವರು ಹೇಳಿಕೊಂಡಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.