Varun Dhawan wife Natasha Dalal pregnant: ಬಾಲಿವುಡ್ ನಟ ವರುಣ್ ಧವನ್ ಪೋಸ್ಟ್ ಒಂದನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದ್ದಾರೆ. ಯಾಮಿ ಗೌತಮ್ ತಾಯಿಯಾಗುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ತುಂಬಾ ಖುಷಿ ಪಡುತ್ತಿದ್ದರೆ, ವರುಣ್ ಧವನ್ ಕೂಡ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ವರುಣ್ ಧವನ್ ಶೀಘ್ರದಲ್ಲೇ ತಂದೆಯಾಗಲಿದ್ದಾರೆ. ತಮ್ಮ ಬ್ಲ್ಯಾಕ್‌ ಆಂಡ್‌ ವೈಟ್ ಫೋಟೋವನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ವರುಣ್ ಧವನ್ ಮತ್ತು ನತಾಶಾ ದಲಾಲ್ ಶೀಘ್ರದಲ್ಲೇ ಪೋಷಕರಾಗಲಿದ್ದು... ಸದ್ಯದಲ್ಲೇ ದಂಪತಿ ಮನೆಯಲ್ಲಿ ಸಂತಸ ಮೂಡಲಿದೆ. ಈ ವಿಷಯವನ್ನು ಅಭಿಮಾನಿಗಳಿಗೆ ತಿಳಿಸಲು ಸ್ವತಃ ವರುಣ್ ಅವರೇ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಪತ್ನಿ ಗರ್ಭಿಣಿಯಾಗಿರುವ ಬಗ್ಗೆ ಸ್ವತಃ ನಟನೇ ಮಾಹಿತಿ ನೀಡಿದ್ದಾರೆ. ಈ ಕುರಿತು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು.. ಅದರಲ್ಲಿ ನತಾಶಾ ತನ್ನ ಮಗುವಿನ ಬಂಪ್ ಅನ್ನು ತೋರಿಸುತ್ತಿದ್ದು.. ವರುಣ್ ತನ್ನ ಪತ್ನಿಯ ಬೇಬಿ ಬಂಪ್‌ಗೆ ಮುತ್ತಿಕ್ಕುವುದನ್ನು ಕಾಣಬಹುದು. ಈ ಅಚ್ಚರಿಯ ಪೋಸ್ಟ್‌ಗೆ ನಟನ ಅಭಿಮಾನಿಗಳು ತುಂಬು ಹೃದಯದಿಂದ ಅಭಿನಂದಿಸುತ್ತಿದ್ದಾರೆ.


ದೊಡ್ಡ ಹೀರೋಗಳ ಜೊತೆ ಸಿನಿಮಾ ಮಾಡಲ್ಲ ಕ್ಲಾರಿಟಿ ಕೊಟ್ಟ ಪ್ರಿಯಾಮಣಿ.. ಕಾರಣ ಏನು?


ಸದ್ಯ ವರುಣ್ ಅವರ ಪೋಸ್ಟ್ ವೈರಲ್ ಆಗಿದ್ದು.. ಅಭಿಮಾನಿಗಳ ಜೊತೆಗೆ ಅನೇಕ ಸೆಲೆಬ್ರಿಟಿಗಳು ಸಹ ನಟನ ಪೋಸ್ಟ್‌ಗೆ ಸಾಕಷ್ಟು ಪ್ರೀತಿಯನ್ನು ಹರಿಸುತ್ತಿದ್ದಾರೆ. ಜಾನ್ವಿ ಕಪೂರ್ ಅವರು ನಟನ ಪೋಸ್ಟ್‌ನಲ್ಲಿ ಹಾರ್ಟ್‌ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ನೇಹಾ ಧೂಪಿಯಾ ಪ್ರತಿಕ್ರಿಯಿಸಿ, ನಿಮ್ಮಿಬ್ಬರಿಗೂ ಅಭಿನಂದನೆಗಳು ಎಂದಿದ್ದಾರೆ... ಮಲೈಕಾ ಅರೋರಾ, ಕರಣ್ ಜೋಹರ್ ಮತ್ತು ಅರ್ಜುನ್ ಕಪೂರ್ ಅವರಂತಹ ಅನೇಕ ತಾರೆಯರು ಕೂಡ ದಂಪತಿಗೆ ವಿಭಿನ್ನ ರೀತಿಯಲ್ಲಿ ಶುಭಹಾರೈಸಿದ್ದಾರೆ.


ವರುಣ್ ಧವನ್ ಶೀಘ್ರದಲ್ಲೇ ಅವರ ಮುಂಬರುವ ಚಿತ್ರ 'ವಿಡಿ 18' ನಲ್ಲಿ ಕಾಣಿಸಿಕೊಳ್ಳಲಿದ್ದು.. ಚಿತ್ರವು 31 ಮೇ 2024 ರಂದು ಚಿತ್ರಮಂದಿರಗಳಿಗೆ ಬರಲಿದೆ. ಇದಲ್ಲದೆ, ಅವರು ಅಮೆಜಾನ್ ಪ್ರೈಮ್ ವೀಡಿಯೊದ ವೆಬ್ ಸರಣಿ 'ಸಿಟಾಡೆಲ್' ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಇದನ್ನೂ ಓದಿ-ಗುಲಾಬಿ ಸೀರೆಯಲ್ಲಿ ಅಮೃತವರ್ಷಿಣಿ ಖ್ಯಾತಿಯ ರಜನಿ : ಫೋಟೋಸ್ ವೈರಲ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.