Aishwarya Raiʼs Gold Saree For Her Marriage: ಬಾಲಿವುಡ್‌ನ ಖ್ಯಾತ ನಟಿಯೊಬ್ಬರು ತನ್ನ ಮದುವೆಯಲ್ಲಿ ಚಿನ್ನದ ದಾರದಲ್ಲಿ ಮಾಡಿದ ದುಬಾರಿ ಸೀರೆಯನ್ನು ಉಟ್ಟಿಕೊಂಡಿದ್ದರು. ಅದೇ ಬಿ-ಟೌನ್‌ ಬೆಡಗಿ ಐಶ್ವರ್ಯ ರೈ. ಈ ನಟಿ ಮೂಲತಃ ಕರ್ನಾಟಕದ ಮಂಗಳೂರಿನ ದಕ್ಷಿಣ ಭಾರತದ ಸಾಂಪ್ರದಾಯಿಕ ಕುಟುಂಬದವರಾಗಿದ್ದು, ಆದರೆ ಈಕೆ 2007 ರಲ್ಲಿ ಬಾಲಿವುಡ್‌ ಖ್ಯಾತ ನಟನ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಅವರನ್ನು ಮಾದುವೆಯಾಗಿದ್ದಾರೆ. 


COMMERCIAL BREAK
SCROLL TO CONTINUE READING

ಐಶ್ವರ್ಯ ರೈ ಪ್ರತಿ ಸಿನಿಮಾಗೂ 12 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದು, ಇಂದು ಈಕೆ 75 ಕೋಟಿ ರೂಪಾಯಿ ಆಸ್ತಿಯ ಒಡತಿಯಾಗಿದ್ದಾರೆ. ಈ ನಟಿ ಬಚ್ಚನ್‌ ಮನೆಯ ಸೊಸೆಯಾದ ಬಳಿಕ ದುಬೈನಲ್ಲಿಯೂ ಕೂಡ ಕೋಟಿಗಟ್ಟಲೆ ಐಷಾರಾಮಿ ಕಟ್ಟಡವನ್ನು ಕಟ್ಟಿಸಿದ್ದಾರೆ. ಕರಾವಳಿ ಸುಂದರಿ ಐಶ್ವರ್ಯ ಕೇವಲ ನಟಿಯಾಗಿ ಮಾತ್ರವಲ್ಲದೇ ಶ್ರೀಮಂತ ವ್ಯಕ್ತಿಯಾಗಿಯೂ ಸಹ ಗುರುತಿಸಿಕೊಂಡಿದ್ದಾರೆ.


ಇದನ್ನೂ ಓದಿ: ವಿರಾಟ್ ಕೊಹ್ಲಿ, ಪ್ರಭಾಸ್, ರಣಬೀರ್ ಅವರಂತಹ ಸೆಲೆಬ್ರಿಟಿಗಳು ಹೇರ್ ಕಟಿಂಗ್‌ಗೆ ಎಷ್ಟು ಹಣ ಖರ್ಚು ಮಾಡುತ್ತಾರೆ ಗೊತ್ತಾ?


ನಟಿ ಐಶ್ವರ್ಯ ರೈ ತನ್ನ ಮದುವೆಯಲ್ಲಿ ಚಿನ್ನದಿಂದ ಮಾಡಿದ ಸೀರೆಯನ್ನು ತೊಟ್ಟಿಕೊಂಡಿದ್ದರು. ಈ ಸೀರೆಯು ಚಿನ್ನದ ಥ್ರೆಡಿಂಗ್ ಮತ್ತು ಸ್ವರೋವ್ಸ್ಕಿ ಸ್ಫಟಿಕದಿಂದ ತಯಾರಿಸಲಾಗಿದ್ದು,  ಇದರ ಬೆಲೆ ಸುಮಾರು 75 ಲಕ್ಷ ರೂ ಆಗಿದೆ. ಈ ಸೀರೆಯನ್ನು ನೀತಾ ಲುಲ್ಲಾ ವಿಶೇಷವಾಗಿ ವಿನ್ಯಾಸಗೊಳಿಸಿದ್ದರು. ಈ ನಟಿ 2011 ರಲ್ಲಿ ಮೊದಲ ಮಗು ಆರಾಧ್ಯಗೆ ಜನ್ಮ ನೀಡಿದ್ದರು. ಈ ನಟಿಗೆ 50 ವರ್ಷವಾದರೂ ಇನ್ನೂ ಅತ್ಯಂತ ಪ್ರಭಾವಿ ನಟಿಯರಲ್ಲಿ ಒಬ್ಬರಾಗಿದ್ದಾರೆ.


ಬಾಲಿವುಡ್‌ ಚೆಲುವೆ ಐಶ್ವರ್ಯ ರೈ ಸದ್ಯ  ಮುಂಬೈನಲ್ಲಿರುವ ಬಚ್ಚನ್ ಕುಟುಂಬಕ್ಕೆ ಸೇರಿದ 15 ಕೋಟಿಯ ಜಲ್ಸಾ ಎಂಬ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅದರಲ್ಲಿ ಜಿಮ್, ಈಜುಕೊಳ ಮತ್ತು ಇತರ ಐಷಾರಾಮಿ ಸೌಕರ್ಯಗಳಿವೆ. ಹಾಗೆಯೇ ಈಕೆಯ ಹತ್ತಿರ ರೋಲ್ಸ್ ರಾಯ್ಸ್ ಘೋಸ್ಟ್, ಆಡಿ ಎ8ಎಲ್, ಮರ್ಸಿಡಿಸ್ ಬೆಂಝ್ ಎಸ್ 500, ಮರ್ಸಿಡಿಸ್ ಬೆಂಝ್ ಎಸ್ 350 ಡಿ ಕೂಪೆ, ಲೆಕ್ಸಸ್ LK 570 ಅಂತಹ ಲಗ್ಜುರಿ ಕಾರುಗಳಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.