ನವದೆಹಲಿ: ವಿಜಯ ದೇವರಕೊಂಡ ನಟಿಸಿರುವ ಲೈಗರ್ ನಲ್ಲಿ ಕಾಣಿಸಿಕೊಂಡಿರುವ ನಟಿ ಅನನ್ಯಾ ಪಾಂಡೆ ಈಗ ಇದೆ ಮೊದಲ ಬಾರಿಗೆ ಬ್ರೇಕ್ ಅಪ್ ಕುರಿತಾಗಿ ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

ನಟಿ ಅನನ್ಯಾ ಪಾಂಡೆ ಇಶಾನ್ ಖತ್ತರ್ ಜೊತೆಗೆ ಡೇಟಿಂಗ್ ನಲ್ಲಿದ್ದ ಅವರು, ಈ ವರ್ಷ ಫೆಬ್ರವರಿಯಲ್ಲಿ ಇಶಾನ್ ಅವರ ಸಹೋದರ ಶಾಹಿದ್ ಕಪೂರ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದರು.ಆದರೆ ಇದಾದ ಬಳಿಕ ಎಪ್ರಿಲ್ ತಿಂಗಳಲ್ಲಿ ಅವರು ಬೇರೆಯಾಗಿದ್ದರು.


ಇದನ್ನೂ ಓದಿ: ಬಿಎಂಟಿಸಿ ಬಳಿಕ ಈಗ ಕೆಎಸ್ಆರ್ ಟಿಸಿಗೂ ಬರಲಿವೆ ಎಲೆಕ್ಟ್ರಿಕ್ ಬಸ್..!


ಇತ್ತೀಚಿಗೆ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಾವು ಹೇಗೆ ಈ ಬ್ರೇಕ್ ಅಪ್ ನಿಂದ ಸಂಕಷ್ಟವನ್ನು ಎದುರಿಸಿದ್ದು ಎನ್ನುವುದರ ಕುರಿತಾಗಿ ಮಾತನಾಡಿದ್ದಾರೆ "ನಾನು ಎಲ್ಲಾ ಭಾವನೆಗಳನ್ನು ಹೊರಹಾಕುವ ವ್ಯಕ್ತಿ, ಭಾವನೆಗಳ ಮೂಲಕ ಕೆಲವೊಮ್ಮೆ ಶಕ್ತಿಯಾಗಲು ಸಾಧ್ಯವಾಗುತ್ತದೆ,ಎಷ್ಟೋ ಸಾರಿ ಅಳುವುದಿಲ್ಲ ಎಂದುಕೊಂಡಿರುತ್ತೇವೆ,ಆದರೂ ಭಾವನೆಗಳನ್ನು ನಿಗ್ರಹಿಸುವುದು ಕಷ್ಟಕರ" ಎಂದು ಅವರು ಹೇಳಿದರು.


ಇದನ್ನೂ: Kick Boxing Death: ಕಿಕ್ ಬಾಕ್ಸಿಂಗ್ ಸ್ಪರ್ಧೆ ವೇಳೆ ಮೈಸೂರಿನ ಕಿಕ್ ಬಾಕ್ಸರ್ ಸಾವು..!


ಬ್ರೇಕ್ ಅಪ್ ವೇಳೆ ಅರ್ಜಿತ್ ಸಿಂಗ್ ಹಾಡುವುದನ್ನು ಕೇಳುವುದು, ಇಷ್ಟವಾದ ಐಸ್ ಕ್ರೀಮ್ ತಿನ್ನುವುದು ಹಾಗೂ ನಿಮ್ಮ ನೆಚ್ಚಿನ ಸ್ನೇಹಿತರ ಜೊತೆ ಸಮಯವನ್ನು ಕಳೆಯುವುದಕ್ಕಿಂತಲೂ ಉತ್ತಮ ಔಷಧವಿಲ್ಲ ಎಂದು ಹೇಳಿದರು.


ಲೈಗರ್ ಚಿತ್ರವನ್ನು ಪೂರಿ ಜಗನ್ನಾಥ್ ನಿರ್ದೇಶಿಸಿದ್ದು, ಮತ್ತು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ, ಈ ಚಿತ್ರವು ಆಗಸ್ಟ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ