ಮುಂಬೈ:  ಟಾಯ್ಲೆಟ್: ಏಕ್ ಪ್ರೇಮ್ ಕಥಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಭೂಮಿ ಪೆಡ್ನೆಕರ್ ಈಗ ತಮ್ಮ ಚಿತ್ರದ ಎರಡನೇ ವಾರ್ಷಿಕೋತ್ಸವದ ನಿಮಿತ್ತ ಚಂಬಲ್ ಕಣಿವೆಯ ಬಾಲಕಿಯರಿಗೆ ಹಾಸ್ಟೆಲ್ ಹಾಗೂ ಶೌಚಾಲಯವನ್ನು ನಿರ್ಮಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.



COMMERCIAL BREAK
SCROLL TO CONTINUE READING

ನಟಿ ಭೂಮಿಯವರು ಮಧ್ಯಪ್ರದೇಶದ ವಸತಿ ಶಾಲೆ ಅಭುದಯ ಆಶ್ರಮಕ್ಕೆ ಸಹಾಯ ಮಾಡುತ್ತಿದ್ದಾರೆ.ಅದು ಚಂಬಲ್ ಕಣಿವೆಯಲ್ಲಿ ವೇಶ್ಯಾವಾಟಿಕೆ ನಿಗ್ರಹಿಸಲು ಮಕ್ಕಳಿಗೆ ಶಿಕ್ಷಣವನ್ನು ಒದಗಿಸುತ್ತದೆ, ಉದ್ಯೋಗದ ಕೌಶಲ್ಯಗಳನ್ನು ಕಲಿಸುತ್ತದೆ.ಭೂಮಿ ಆಶ್ರಮದ ಬಾಲಕಿಯರಿಗಾಗಿ ಹಾಸ್ಟೆಲ್ ಮತ್ತು ಹೊಸ ಶೌಚಾಲಯವನ್ನು ನಿರ್ಮಿಸಿದ್ದಾರೆ.  ಟಾಯ್ಲೆಟ್: ಏಕ್ ಪ್ರೇಮ್ ಕಥಾ 2 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಸೌಲಭ್ಯವನ್ನು ಉದ್ಘಾಟಿಸಲಾಗುವುದು! ಎಂದು ಮೂಲಗಳು ತಿಳಿಸಿವೆ.


ಇದಕ್ಕಾಗಿ ಭೂಮಿ ಅವರನ್ನು ಸಂಪರ್ಕಿಸಿದಾಗ, 'ಅಭುದಯ ಆಶ್ರಮವು  ಒಳ್ಳೆಯ ಕಾರಣಕ್ಕಾಗಿ ಕೆಲಸ ಮಾಡುತ್ತಿದೆ.ನಾನು ಯಾವಾಗಲೂ ಅವರಿಗೆ ಮತ್ತು ಚಂಬಲ್ ಕಣಿವೆಯ ಬಾಲಕಿಯರಿಗಾಗಿ ನನ್ನ ಸಣ್ಣ ಕೆಲಸವನ್ನು ಮಾಡುತ್ತೇನೆ. ನನ್ನ ಹೃದಯದಲ್ಲಿ ಚಂಬಲ್ ಎರಡನೇ ಮನೆಯಾಗಿದೆ. ಬಾಲಕಿಯರು ಹೇಗಿದ್ದಾರೆಂದು ನೋಡಲು ನಾನು ಮತ್ತೆ ಅಭುದಯಕ್ಕೆ ಹೋಗುತ್ತಿದ್ದೇನೆ. ಅವರು ನನ್ನ ಕುಟುಂಬದಂತಾಗಿದ್ದಾರೆ.ಕಣಿವೆಯ ಮಹಿಳೆಯರಲ್ಲಿ ನೈರ್ಮಲ್ಯ, ಶಿಕ್ಷಣ, ಸಬಲೀಕರಣ ಮತ್ತು ಹುಡುಗಿಯರ ಸಮಾನ ಹಕ್ಕುಗಳ ಬಗ್ಗೆ ಅಗತ್ಯವಿರುವ ಮತ್ತು ಪ್ರಮುಖವಾದ ಎಲ್ಲಾ ಸಂದೇಶಗಳನ್ನು ಉತ್ತೇಜಿಸಲು ನಾನು ಸಿದ್ದಳಾಗಿದ್ದೇನೆ 'ಎಂದು ನಟಿ ಭೂಮಿ ಹೇಳಿದರು.