Bollywood Actress: ಸ್ಟಾರ್ ಹೀರೋ ಜೊತೆ ಲವ್ ಅಫೇರ್.. ನಂತರ ಬ್ರೇಕಪ್.. ಸಾಕಷ್ಟು ನಿಂದನೆಗಳನ್ನು ಎದುರಿಸಿ ಸೆನ್ಸೇಷನ್ ಆದ ನಟಿ ಈಕೆ!
Bollywood Actress Kangana Ranaut Life Story: ಸಿನಿಮಾ ಮೋಹದಿಂದ 15ನೇ ವಯಸ್ಸಿಗೆ ಮನೆ ಬಿಟ್ಟು ಹೋದ ಯುವತಿ ಈಗ ಬಾಲಿವುಡ್ ನ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿದ್ದಾರೆ.. ಹಾಗಾದರೆ ಯಾರು ಆ ನಟಿ ಅಂತೀರಾ ಈ ಸ್ಟೋರಿ ಓದಿ..
Journey of Kangana Ranaut in Bollywood: ಬೆಳ್ಳಿತೆರೆಯ ಭರವಸೆ ಮತ್ತು ಬಣ್ಣದ ಲೋಕದಲ್ಲಿ ಬದುಕುವ ಆಸೆಯಿಂದ ಅನೇಕರು ಮನೆಯಿಂದ ಓಡಿಹೋಗಿದ್ದಾರೆ. ನಟನೆಯ ಆಸಕ್ತಿಯಿಂದ ಸಾಕಷ್ಟು ಮಂದಿ ಮುಂಬೈ ತಲುಪಿದ್ದು.. ಅವರಲ್ಲಿ ಕೆಲವರು ಈಗ ಸೂಪರ್ ಸ್ಟಾರ್ ಆಗಿದ್ದಾರೆ. ಅದೇ ರೀತಿ ಸಿನಿಮಾ ಮೋಹದಿಂದ 15ನೇ ವಯಸ್ಸಿಗೆ ಮನೆ ತೊರೆದ ಯುವತಿ ಈಗ ಬಾಲಿವುಡ್‌ನ ಟಾಪ್ ಹೀರೋಯಿನ್‌ಗಳಲ್ಲಿ ಒಬ್ಬಳಾಗಿದ್ದಾಳೆ. ಯಾರು ಆ ನಟಿ ಇದೀಗ ತಿಳಿಯೋಣ ಬನ್ನಿ..
ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟ ಅವರು ಉದ್ಯಮಕ್ಕೆ ಪ್ರವೇಶಿಸುವ ಮೊದಲು ಸಾಕಷ್ಟು ಕಿರುಕುಳವನ್ನು ಎದುರಿಸಿದರು ಆದರೆ ನಂತರ ಒಂದೇ ಸಮಯದಲ್ಲಿ 4 ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದರು. ಆಕೆ ಬೇರೆ ಯಾರೂ ಅಲ್ಲ ಬಾಲಿವುಡ್ ಕ್ವೀನ್ ಕಂಗನಾ ರಣಾವತ್. ಈ ಜನಪ್ರಿಯ ನಟಿಯ ವೈಯಕ್ತಿಕ, ವೃತ್ತಿ ಜೀವನ ಮತ್ತು ಅವರ ಯಶಸ್ಸಿನ ಕಥೆಯ ಸಂಪೂರ್ಣ ವಿವರಗಳು ಇಲ್ಲಿವೆ.
ಇದನ್ನೂ ಓದಿ-Esha Deol divorce: ಹೇಮಾ ಮಾಲಿನಿ ಪುತ್ರಿ ದಾಂಪತ್ಯ ಅಂತ್ಯ, ಇಶಾ ಡಿಯೋಲ್-ಭರತ್ ತಖ್ತಾನಿ ಡಿವೋರ್ಸ
ಕಂಗನಾ ರಣಾವತ್ ಗೆ ಬಾಲ್ಯದಿಂದಲೂ ನಾಯಕಿಯಾಗಬೇಕೆಂಬ ಕನಸಿತ್ತು. ಆದರೆ ತಂದೆ ನಿರಾಕರಿಸಿದರು. ಆದರೆ ಅವಳು ಎಂದಿಗೂ ಆ ಛಲ ಮತ್ತು ಭರವಸೆಯನ್ನು ಬಿಡದೇ.. ತನ್ನ ಗುರಿಯನ್ನು ಸಾಧಿಸಲು ನಿರ್ಧರಿಸಿ.. 15ನೇ ವಯಸ್ಸಿನಲ್ಲಿ ಮನೆ ತೊರೆದ ಕಂಗನಾ 16ನೇ ವಯಸ್ಸಿನಲ್ಲಿ ಮಾಡೆಲಿಂಗ್ ವೃತ್ತಿ ಆರಂಭಿಸಿದ್ದರು. ನಂತರ ಸಿನಿಮಾ ಅವಕಾಶಗಳಿಗಾಗಿ ಪ್ರಯತ್ನಿಸತೊಡಗಿದರು..
ಕಂಗನಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ.. 'ನನ್ನ ಪ್ರಯಾಣ ಸಾವಿರ ಮೈಲಿಗಳು.. ಮನೆ ಇಲ್ಲದ ಕಾರಣ ಫುಟ್‌ಪಾಥ್ ಮೇಲೆ ಮಲಗಿದ್ದೆ... ತುಂಬಾ ತೊಂದರೆ ಅನುಭವಿಸಿದ್ದೇನೆ... ಆದರೆ ಮತ್ತೊಂದೆಡೆ ಎರಡು ಬಾರಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದಿದ್ದೇನೆ’ ಎಂದಿದ್ದಾರೆ..
ಬರ್ಖಾ ದತ್ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕಂಗನಾ, 17 ನೇ ವಯಸ್ಸಿನಲ್ಲಿ ತಾನು ಎದುರಿಸಿದ ಆಘಾತಕಾರಿ ಅನುಭವವನ್ನು ಹಂದಿಕೊಂಡಿದ್ದರು.. "ಬಾಲಿವುಡ್‌ನಲ್ಲಿ ನನ್ನ ತಂದೆ ವಯಸ್ಸಿನೊಬ್ಬನಿಂದ ದೈಹಿಕ ಕಿರುಕುಳವನ್ನೂ ನಾನು ಎದುರಿಸಿದ್ದೇನೆ" ಎಂದು ಕರಾಳ ಸತ್ಯವನ್ನು ಬಾಯಿಬಿಟ್ಟಿದ್ದರು..
ಇನ್ನು ನಟಿ ಕಂಗನಾ ಎ ಲವ್ ಸ್ಟೋರಿಯೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.. ಮತ್ತು ಈ ಚಿತ್ರ ಉತ್ತಮ ಯಶಸ್ಸನ್ನು ಪಡೆದುಕೊಂಡಿತು. ಇಷ್ಟೇ ಅಲ್ಲದೇ ಕಂಗನಾ ಅಭಿನಯಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದರು... ಈ ಅವಧಿಯಲ್ಲಿ ನಟಿ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.. ಮುಂದೆ ಅನೇಕ ಹಿಟ್ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಅವರು ಗುರುತಿಸಿಕೊಂಡು.. ಅತ್ಯುತ್ತಮ ನಟಿಗಾಗಿ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದರು.
ಸದ್ಯ ಕಂಗನಾ ರಣಾವತ್ ಈಗ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರಲ್ಲಿ ಒಬ್ಬರು. ಪ್ರತಿ ಚಿತ್ರಕ್ಕೆ ರು.15 ಕೋಟಿಯಿಂದ 27 ಕೋಟಿ ತೆಗೆದುಕೊಳ್ಳುತ್ತಾರೆ ಮತ್ತು ಅವರು 21 ನೇ ವಯಸ್ಸಿನಲ್ಲಿ ಸ್ವಂತ ಮನೆ ಖರೀದಿಸಿದರು ಎಂದು ವರದಿಯಾಗಿದೆ. ಕಂಗನಾ ತಮ್ಮ ವೃತ್ತಿಜೀವನದ ಕಡಿಮೆ ಅವಧಿಯಲ್ಲಿ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅಲ್ಲದೇ ಕೆಲ ವರ್ಷಗಳಿಂದ ಸ್ಟಾರ್ ಹೀರೋ ಹೃತಿಕ್ ರೋಷನ್ ಜೊತೆ ಲವ್ ಅಫೇರ್ ಇದ್ದು.. ಬ್ರೇಕಪ್ ಆಗಿದೆ ಎಂದು ವರದಿಯಾಗಿದೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.