ನವದೆಹಲಿ: ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ಅವರು ತೀವ್ರ ಕ್ಯಾನ್ಸರ್'ನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗಪಡಿಸಿರುವ ಸೊನಾಲಿ ಬೇಂದ್ರೆ, ತಾವು ಕ್ಯಾನ್ಸರ್'ಗೆ ತುತ್ತಾಗಿದ್ದು, ಈ ಹಾದಿಯಲ್ಲಿ ಎದುರಾಗುವ ಎಲ್ಲಾ ಕಷ್ಟಗಳನ್ನೂ ಎದುರಿಸಲು ದೃಢ ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

"ಅನಿರೀಕ್ಷಿತ ಸಂದರ್ಭಗಳು ನಮ್ಮನ್ನು ಕೆಲವೊಮ್ಮೆ ಸಂಕಷ್ಟಕ್ಕೆ ನೂಕುತ್ತವೆ. ಇತ್ತೀಚೆಗೆ ನನಗೆ ಅಪಾಯಕಾರಿ ಕ್ಯಾನ್ಸರ್ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ನಂಗೆ ಕ್ಯಾನ್ಸರ್ ಇರುವುದು ಗೊತ್ತೇ ಇರಲಿಲ್ಲ. ಸಣ್ಣ ನೋವಿನ ಕಾರಣದಿಂದ ಕೆಲವು ಪರೀಕ್ಷೆಗೆ ಒಳಗಾಗಬೇಕಾಯಿತು. ಹೀಗಾಗಿ ಈ ಕಾಯಿಲೆ ಇರುವ ಬಗ್ಗೆ ಪತ್ತೆಯಾಗಿದೆ. ನನ್ನ ಕುಟುಂಬ ಮತ್ತು ಆಪ್ತ ಸ್ನೇಹಿತರು ನನ್ನ ಸುತ್ತಲೂ ಇದ್ದಾರೆ. ಏನೇ ಕೇಳಿದರೂ ಒದಗಿಸುವ ಬೆಂಬಲ ನೀಡುತ್ತಿದ್ದಾರೆ. ನಾನು ನಿಜಕ್ಕೂ ಅದೃಷ್ಟವಂತೆ. ಎಲ್ಲರಿಗೂ ನಾನು ನಾನು ಋಣಿಯಾಗಿರುತ್ತೇನೆ" ಎಂದು 43 ವರ್ಷದ ಸೊನಾಲಿ ಬೇಂದ್ರೆ ತಮ್ಮ ಮನಸಿನ ದುಗುಡವನ್ನು ಹಂಚಿಕೊಂಡಿದ್ದಾರೆ.


"ಸದ್ಯ ಈ ಕಾಯಿಲೆಗೆ ಪರಿಣಾಮಕಾರಿ ಮತ್ತು ತಕ್ಷಣದ ಕ್ರಮದ ಹೊರತಾಗಿ ಇದನ್ನು ಗುಣಪಡಿಸಲು ಬೇರೆ ಮಾರ್ಗವಿಲ್ಲ. ಹಾಗಾಗಿ ವೈದ್ಯರ ಸಲಹೆಯಂತೆ ನ್ಯೂಯಾರ್ಕ್'ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಈ ಹಾದಿಯ ಪ್ರತಿಯೊಂದು ಹೆಜ್ಜೆಯಲ್ಲಿಯೂ ಎದುರಾಗುವ ಕಷ್ಟಗಳನ್ನು ಎದುರಿಸಲಿ ಸಿದ್ಧವಿದ್ದೇನೆ. ಜತೆಗೆ ನನಗೆ ಕಳೆದ ಕೆಲ ದಿನಗಳಿಂದ ಅಪಾರ ಪ್ರೀತಿ ದೊರೆಯುತ್ತಿದೆ. ಅದಕ್ಕೆ ನಾನು ಕೃತಜ್ಞಳಾಗಿರುತ್ತೇನೆ" ಎಂದು ಸೊನಾಲಿ ಹೇಳಿದ್ದಾರೆ. 



ಇರ್ಫಾನ್ ಖಾನ್ ಅವರು ತಾವು ಕ್ಯಾನ್ಸರ್'ನಿಂದ ಬಳಲುತ್ತಿರುವ ಬಗ್ಗೆ ಬಹಿರಂಗಪಡಿಸಿದ ಬೆನ್ನಲ್ಲೇ ಸೊನಾಲಿ ಬೇಂದ್ರೆ ಅವರ ಆರೋಗ್ಯದ ವಿಚಾರ ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ. 2002ರಲ್ಲಿ ಗೋಲ್ಧಿ ಬೆಹ್ಲ್ ಅವರನ್ನು ವಿವಾಹವಾದ ನಂತರ ಸೊನಾಲಿ ಚಿತ್ರರಂಗದಿಂದ ಹೊರಗುಳಿದಿದ್ದರು. ಆಕೆ ಶೀಘ್ರ ಗುಣಮುಖವಾಗಲಿ ಎಂದು ನಾವೆಲ್ಲಾ ಹಾರೈಸೋಣ!