ಮುಂಬೈ: 10 ವರ್ಷಗಳ ಹಿಂದೆ ಚಿತ್ರೀಕರಣದ ಸೆಟ್ ನಲ್ಲಿ ನಾನಾ ಪಟೇಕರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಬಾಲಿವುಡ್ ನಟಿ ತನುಶ್ರೀ ದತ್ತಾ ಮಾಡಿದ್ದ ಆರೋಪಕ್ಕೆ ಪೂರಕವಾಗಿ ಈಗ ಅಧಿಕೃತವಾಗಿ ಪಟೇಕರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಬಾಲಿವುಡ್ ನಟಿ ತನುಶ್ರೀ ದತ್ತಾ, 2008 ರಲ್ಲಿ ಚಲನಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ತಮಗೆ  ನಟ ನಾನಾ ಪಾಟೇಕರ್  ಲೈಂಗಿಕವಾಗಿ ಕಿರುಕುಳ ನೀಡಿದ್ದರು ಎಂದು ಅವರು ಈಗ ಪೋಲೀಸರ ಬಳಿ ದೂರು ದಾಖಲಿಸಿದ್ದಾರೆ, ಇದೇ ವೇಳೆ ಅವರು ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯರನ್ನು ಹೆಸರಿಸಿದ್ದಾರೆ. ಆದರೆ ಈ ಎಲ್ಲ ಆರೋಪಗಳನ್ನು ನಟ ಪಟೇಕರ್ ಅವರು ನಿರಾಕರಿಸಿದ್ದರು, ಅಲ್ಲದೆ ತಮ್ಮ ವಕೀಲರ ಮೂಲಕ ಅವರು ನಟಿ ತನುಶ್ರೀ ದತ್ತಾಗೆ ಲೀಗಲ್ ನೋಟಿಸ್ ಕಳುಹಿಸಿದ್ದರು. 


ಶನಿವಾರದಂದು ಮುಂಬೈಯ ಅಂಧೇರಿ ವೆಸ್ಟ್ ಪ್ರದೇಶದಲ್ಲಿರುವ ಓಶಿವಾರ ಪೊಲೀಸ್ ಠಾಣೆಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ. 2008 ರ ಚಿತ್ರ 'ಹಾರ್ನ್ ಓಕೆ ಪ್ಲೀಸ್' ಹಾಡಿನ ಚಿತ್ರದ ಸಂದರ್ಭದಲ್ಲಿ ಸೆಟ್ನಲ್ಲಿ ಪಟೇಕರ್ ಅವರು ಅಸಭ್ಯವಾಗಿ ವರ್ತಿಸಿದರು ಎಂದು ಅವರು ದೂರು ನೀಡಿದ್ದಾರೆ.


"ತನುಶ್ರೀ ದತ್ತಾ ನಮಗೆ ನಾನಾ ಪಾಟೇಕರ್ ವಿರುದ್ಧ ದೂರು ನೀಡಿದ್ದಾರೆ, ಆದರೆ ಇದುವರೆಗೂ ಈ ಪ್ರಕರಣದಲ್ಲಿ ಯಾವುದೇ ಎಫ್ಐಆರ್ ದಾಖಲಾಗಿಲ್ಲ" ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ಶರ್ಮಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.ಇನ್ನೊಂದೆಡೆಗೆ  ಈ ಘಟನೆ ಎಂದು ನಡೆದಿಲ್ಲ ಎಂದು ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಸ್ಪಷ್ಟಪಡಿಸಿದ್ದಾರೆ.