Bollywood Actor Gippy Grewal: ಉನ್ನತ ಗುರಿಗಳನ್ನು ಹೊಂದಿರುವ ಜನರು ಅವುಗಳನ್ನು ನನಸಾಗಿಸಲು ಪ್ರಯತ್ನಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ತಮ್ಮ ಗುರಿಯನ್ನು ತಲುಪಲು ಎಂತಹ ಸಾಹಸವನ್ನಾದರೂ ಮಾಡಲು ಸಿದ್ದರಿರುತ್ತಾರೆ.. ಸಮಸ್ಯೆಗಳು.. ಅವಮಾನಗಳನ್ನು ಎದುರಿಸಿದ ಪ್ರತಿವ್ಯಕ್ತಿಯೂ ಜೀವನದಲ್ಲಿ ತಾನಂದುಕೊಂಡಿದ್ದನ್ನು ಸಾಧಿಸುತ್ತಾನೆ ಎನ್ನಲಾಗಿದೆ.. ಅದೇ ರೀತಿ ಒಬ್ಬ ನಟನ ಜೀವನದ ಕಥೆಯನ್ನು ಇಂದು ನಾವು ನಿಮಗೆ ಹೇಳಲಿದ್ದೇವೆ.. 


COMMERCIAL BREAK
SCROLL TO CONTINUE READING

ಈ ನಟ ಹೊರ ದೇಶಕ್ಕೆ ಹೋಗಿ ಚಿತ್ರರಂಗ ಪ್ರವೇಶಿಸುವ ಕನಸನ್ನು ನನಸು ಮಾಡಿಕೊಳ್ಳಲು ಹಲವು ಕೆಲಸಗಳನ್ನು ಮಾಡಿದ್ದಾರೆ. ಬೆಳಗ್ಗೆ ನ್ಯೂಸ್ ಪೇಪರ್ ಹಾಕುವುದು, ಸಂಜೆಯವರೆಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವುದು, ರಾತ್ರಿ ಹೋಟೆಲ್ ನಲ್ಲಿ ಪ್ಲೇಟ್ ತೊಳೆಯುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದ ಇವರು ಅದರಿಂದ ಬಂದ ಹಣದಿಂದ ಖಾಸಗಿ ಆಲ್ಬಂ ಮಾಡಿ ಪಂಜಾಬಿ ಚಿತ್ರರಂಗದಲ್ಲಿ ಗಾಯಕನಾಗಿ ಸಂಚಲನ ಮೂಡಿಸಿದರು. ನಂತರ, ಅವರು ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಮಿಂಚಿ ಪಂಜಾಬಿ ಚಿತ್ರರಂಗದಲ್ಲಿ ಸೂಪರ್ಸ್ಟಾರ್ ಆಗಿ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ.. ಅವರು ಬೇರೆ ಯಾರೂ ಅಲ್ಲ..  ಗಿಪ್ಪಿ ಗ್ರೆವಾಲ್..


ಇದನ್ನೂ ಓದಿ-ಸದ್ಯ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿರುವ ರಾಕುಲ್ ಪ್ರೀತ್ ಮೊದಲ ಸಂಬಳ ಎಷ್ಟು ಗೊತ್ತಾ?


ಪಂಜಾಬಿ ಸಿನಿರಂಗಕ್ಕೆ ಪ್ರವೇಶಿಸುವ ಮುನ್ನ ಗಿಪ್ಪಿ ಗ್ರೆವಾಲ್ ತನ್ನ ಹೆಂಡತಿಯೊಂದಿಗೆ ಕೆನಡಾದಲ್ಲಿ ವಾಸಿಸುತ್ತಿದ್ದರು.. ಹಣ ಸಂಪಾದನೆ ಮಾಡುವುದಕ್ಕಾಗಿ ಬೆಳಿಗ್ಗೆ ಮನೆಯಿಂದ ಮನೆಗೆ ಪತ್ರಿಕೆಗಳನ್ನು ಹಾಕುವುದು.. ಸಂಜೆಯವರೆಗೆ ಸಿಮೆಂಟ್ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುವುದು..  ಮತ್ತು ರಾತ್ರಿ ವ್ಯಾಂಕೋವರ್ ಕ್ರಿಸ್ಟಲ್ ಮಾಲ್‌ನ ಫುಡ್ ಕೋರ್ಟ್‌ನಲ್ಲಿ ಪ್ಲೇಟ್‌ಗಳನ್ನು ತೊಳೆಯುವುದು.. ಇಷ್ಟೇ ಅಲ್ಲ ಜಿಪ್ಪಿ ಕೆನಡಾದಲ್ಲಿ ರೂ.6,500 ಸಂಬಳದಲ್ಲಿ ಮಾಣಿಯಾಗಿ, ದೆಹಲಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಯಾವುದಕ್ಕೂ ನಾಚಿಕೆಪಡದೆ ಸಮರ್ಪಣಾ ಭಾವದಿಂದ ಪ್ರಾಮಾಣಿಕತೆಯಿಂದ ಎಲ್ಲವನ್ನೂ ಮಾಡುತ್ತಿದ್ದೆ ಎಂದು ಗಿಪ್ಪಿ ಒಂದು ಸಂದರ್ಭದಲ್ಲಿ ಹೇಳಿದರು.


ನಂತರ ಗಿಪ್ಪಿ ಗ್ರೆವಾಲ್ ತಮ್ಮ ಮೊದಲ ಆಲ್ಬಂ 'ಚಖ್ ಲೈ' ದಿಂದ ಪಂಜಾಬಿ ಸಿನಿರಂಗ ಪ್ರವೇಶಿಸಿದರು.. ಇದು ಸೂಪರ್‌ ಹಿಟ್‌ ಆದ ನಂತರ ಗಿಪ್ಪಿ ಹಿಂತಿರುಗಿ ನೋಡದೇ.. ಮುಂದೆ ನಟನೆಯಲ್ಲೂ ಮಿಂಚತೊಡಗಿದರು.. ಕ್ಯಾರಿ ಆನ್ ಜಟ್ಟಾ, ಸಿಂಗ್ ವರ್ಸಸ್ ಕೌರ್, ದಿ ಅನ್‌ಟೋಲ್ಡ್ ಸ್ಟೋರಿ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ಅವರು ತಮ್ಮ ಸೂಪರ್‌ಸ್ಟಾರ್ ಸ್ಥಾನಮಾನವನ್ನು ಭದ್ರಪಡಿಸಿಕೊಂಡರು.


ಇದನ್ನೂ ಓದಿ-ಆಗ ದರ್ಶನ್.. ಈಗ ಭರತ್.. ಎರಡು ದಶಕಗಳ ನಂತರ ಮತ್ತೆ ಮೆಜೆಸ್ಟಿಕ್ ನಲ್ಲಿ ಮರಿದಾಸನ ಹವಾ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.