Jannat Zubair Rahmani Life Story: ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಯಶಸ್ವಿ ವೃತ್ತಿ ಜೀವನ ನಡೆಸುವವರು ಬಹಳ ಅಪರೂಪ. ಶ್ರೀದೇವಿ, ರೇಖಾ, ಊರ್ಮಿಳಾ ಅವರಿಂದ ಹಿಡಿದು ಇಂದಿನ ಆಲಿಯಾ ಭಟ್ ವರೆಗೆ ಎಲ್ಲ ನಟಿಯರು ಬಾಲ ಕಲಾವಿದರಾಗಿ ನಟಿಸಿ ದೊಡ್ಡವರಾದ ಮೇಲೆ ನಾಯಕಿಯರಾಗಿ ಗುರುತಿಸಿಕೊಂಡರು.


COMMERCIAL BREAK
SCROLL TO CONTINUE READING

ಈಗ ನಾವು ತಿಳಿದುಕೊಳ್ಳಲಿರುವ ನಟಿಯೊಬ್ಬರು ಏಳನೇ ವಯಸ್ಸಿನಿಂದ ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ. ಹತ್ತು ವರ್ಷಗಳಲ್ಲಿ ಆಕೆಗೆ ಸಿನಿಮಾ ಅವಕಾಶಗಳು ಬಂದವು. ಈಗ 22ರ ಹರೆಯದ ಸೆಲೆಬ್ರಿಟಿಗೆ ಟಾಪ್ ಹೀರೋ, ಹೀರೋಯಿನ್ ಗಳಿಗಿಂತ ಹೆಚ್ಚು ಕ್ರೇಜ್ ಇದೆ. ಆಕೆ ಬೇರಾರೂ ಅಲ್ಲ ಜನ್ನತ್ ಜುಬೇರ್ ರಹಮಾನಿ.


ಇದನ್ನೂ ಓದಿ-Is Allu Arjun Arrested? Pushpa 2 ಚಿತ್ರೀಕರಣದ ಮಧ್ಯೆಯೇ ಅಲ್ಲು ಅರ್ಜುನ್ ಅರೆಸ್ಟ್! ನಿಜಾನಾ?


ಜನ್ನತ್ ಜುಬೇರ್ ರಹಮಾನಿ 2001 ರಲ್ಲಿ ಮುಂಬೈನಲ್ಲಿ ಜನಿಸಿದರು. 2008 ರಲ್ಲಿ ಪ್ರಸಾರವಾದ 'ಚಾಂದ್ ಕೆ ಪಾರ್ ಚಲೋ' ಟಿವಿ ಶೋನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ನಂತರ ನಾಟಕ ದಿಲ್ ಮಿಲ್ ಗಯೆಯಲ್ಲಿ ನಟಿಸಿದ್ದಾರೆ. ಇದರೊಂದಿಗೆ ಸಿನಿಮಾ ಆಫರ್‌ಗಳು ಜನ್ನತ್‌ನ ಮನೆ ಬಾಗಿಲಿಗೆ ತಟ್ಟಿದವು.


ಜನ್ನತ್‌ 2010 ಮತ್ತು 2011 ರ ಕಾಶಿ - ಅಬ್ ನಾ ರಹೇ ತೇರಾ ಕಾಗಜ್ ಕೋರಾ, ಫುಲ್ವಾ ಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಜನ್ನತ್ ಝುಬೈರ್ ರಹಮಾನಿ ಚಿಕ್ಕ ವಯಸ್ಸಿನಲ್ಲೇ ತಮ್ಮ ನಟನಾ ಕೌಶಲ್ಯ ಮತ್ತು ಆಕರ್ಷಕ ನೋಟದಿಂದ ಪ್ರೇಕ್ಷಕರನ್ನು ಆಕರ್ಷಿಸಿದರು.


ರಿಯಾಲಿಟಿ ಶೋ 'ಖತ್ರೋನ್ ಕೆ ಖಿಲಾಡಿ' 12 ನೇ ಸೀಸನ್‌ನಲ್ಲಿ ಜನ್ನತ್ ಭಾಗವಹಿಸಿದರು. 2022 ರಲ್ಲಿ ಪ್ರಸಾರವಾದ ಈ ಶೋನಲ್ಲಿ ಜನ್ನತ್ ನಾಲ್ಕನೇ ಸ್ಥಾನ ಪಡೆದರು. ಅದೇ ವರ್ಷದಲ್ಲಿ ಅವರು ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರದ ಮೂಲಕ ಪಂಜಾಬಿ ಚಿತ್ರರಂಗಕ್ಕೆ ಪ್ರವೇಶಿಸಿದರು. 2022 ರಲ್ಲಿ, ಜನ್ನತ್ ಅವರು ಮಾಧ್ಯಮ, ಮಾರ್ಕೆಟಿಂಗ್ ಮತ್ತು ಜಾಹೀರಾತು ವಿಭಾಗದಲ್ಲಿ ಫೋರ್ಬ್ಸ್ ಅಂಡರ್ 30 ಪಟ್ಟಿಯಲ್ಲಿ ಸ್ಥಾನ ಪಡೆದರು.


ಇದನ್ನೂ ಓದಿ-ನಟಿ ತಾಪ್ಸೀ ಪನ್ನು ಗುಟ್ಟಾಗಿ ಮದುವೆಯಾಗೇ ಬಿಟ್ರಾ? ವಿವಾಹಕ್ಕೆ ಸಾಕ್ಷಿಯಾದ ಸೆಲೆಬ್ರಿಟಿಗಳು ಇವರು..!


ಬಾಲಿವುಡ್ ನಟಿ ಜನ್ನತ್ ಸೋಷಿಯಲ್ ಮೀಡಿಯಾದಲ್ಲಿ ಉತ್ತಮ ಅಭಿಮಾನಿಗಳನ್ನು ಹೊಂದಿದ್ದು.. ಅವರು Instagram ನಲ್ಲಿ 49.5 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ. ಬಾಲಿವುಡ್ ನ ಟಾಪ್ ಹೀರೋ, ಹೀರೋಯಿನ್ ಗಳು ಕೂಡ ಈ ಮಟ್ಟದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿಲ್ಲ.


ಜನ್ನತ್ ಅವರು ಶಾರುಖ್ ಖಾನ್ (46.5 ಮಿಲಿಯನ್), ಕರೀನಾ ಕಪೂರ್ ಖಾನ್ (12 ಮಿಲಿಯನ್) ಮತ್ತು ಸಾರಾ ಅಲಿ ಖಾನ್ (45 ಮಿಲಿಯನ್) ಗಿಂತ ಹೆಚ್ಚಿನ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ವಿವಿಧ ವರದಿಗಳ ಪ್ರಕಾರ, ಜನ್ನತ್ ಅವರ ನಿವ್ವಳ ಮೌಲ್ಯ 25 ಕೋಟಿ ರೂ. ಇವರು ತಿಂಗಳಿಗೆ ರೂ.25 ಲಕ್ಷಕ್ಕಿಂತ ಹೆಚ್ಚು ಗಳಿಸುತ್ತಾರೆ... ಬಾಲನಟಿಯಾಗಿ ಇಂಡಸ್ಟ್ರಿಗೆ ಪರಿಚಯವಾಗಿ... ಚಿಕ್ಕ ವಯಸ್ಸಿನಲ್ಲೇ ಇಷ್ಟೊಂದು ಕ್ರೇಜ್ ಮತ್ತು ಫ್ಯಾನ್ ಫಾಲೋಯಿಂಗ್ ಸಿಕ್ಕಿದ್ದು ದೊಡ್ಡ ವಿಷಯ. ಈ ಕ್ರೆಡಿಟ್ ನಟಿ ಜನ್ನತ್ ಗೆ ಮಾತ್ರ ಸಲ್ಲುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ