ವೇಶ್ಯಾವಾಟಿಕೆಗೆ ಇಳಿದ ಸ್ಟಾರ್ ಹೀರೋಯಿನ್..!
Nisha Noor forced into prostitution: ಆಗ ದೊಡ್ಡ ನಿರ್ಮಾಪಕರೊಬ್ಬರ ಬಲವಂತದಿಂದ ಈ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಆರೋಪಿಸಲಾಯಿತು.
Nisha Noor Life Story: ಬಣ್ಣದ ಲೋಕವೇ ಹಾಗೇ, ಅದೊಂದು ಹೋರಾಟದ ಬದುಕು. ಅನೇಕ ಏಳುಬೀಳುಗಳ ನಡುವೆ ಹತ್ತು ಹಲವು ವದಂತಿಗಳ ಸುತ್ತ ಬದುಕಬೇಕು. ಅವೆಲ್ಲವನ್ನೂ ಮೀರಿದರೆ ಮಾತ್ರ ಸಿನಿಲೋಕದಲ್ಲಿ ಭವಿಷ್ಯವಿದೆ. ಈ ಸ್ಟಾರ್ ಹೀರೋಯಿನ್ ತನ್ನ ಜೀವನದಲ್ಲಿ ತಪ್ಪು ಹೆಜ್ಜೆ ಇಟ್ಟು ಅತ್ಯಂತ ದಯನೀಯ ಸ್ಥಿತಿಯಲ್ಲಿ ಜೀವನ ಅಂತ್ಯಗೊಳಿಸಿದರು.
ನಿಶಾ ನೂರ್.. 1980 ರ ದಶಕದಲ್ಲಿ ಅತ್ಯಂತ ಜನಪ್ರಿಯ ನಟಿಯಾಗಿದ್ದ ಇವರು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿಶಾ ನೂರ್ ರಜನಿಕಾಂತ್, ಕಮಲ್ ಹಾಸನ್ ಅವರಂತಹ ಸೂಪರ್‌ಸ್ಟಾರ್‌ಗಳೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ದಕ್ಷಿಣದ ಪ್ರತಿಯೊಬ್ಬ ನಿರ್ದೇಶಕರೂ ನಿಶಾ ಜೊತೆ ಸಿನಿಮಾ ಮಾಡಬೇಕೆಂದು ಹಂಬಲಿಸುವಷ್ಟು ಸ್ಟಾರ್ ಡಮ್ ಪಡೆದಿದ್ದರು. ಆಕೆಯ ಹಲವು ತಮಿಳು ಮತ್ತು ಮಲಯಾಳಂ ಸಿನಿಮಾಗಳು ಸೂಪರ್ ಹಿಟ್ ಆದ ಇತಿಹಾಸವಿದೆ.
ಇದನ್ನೂ ಓದಿ: Pushpa 2 Teaser: ಸಾರ್ವಕಾಲಿಕ ದಾಖಲೆ ಬರೆದ ಪುಷ್ಪರಾಜ್.. ಕೆಜಿಎಫ್ 2 ರೆಕಾರ್ಡ್ ಬ್ರೇಕ್ ಮಾಡುತ್ತಾ ಪುಷ್ಪಾ 2 ?
1995ರ ನಂತರ ನಿಶಾ ನೂರ್ ಅವರ ಸ್ಟಾರ್ ಡಮ್ ಕಡಿಮೆ ಆಗುತ್ತ ಸಾಗಿತು. ಸಂಪಾದನೆ ಕಡಿಮೆ ಆಯಿತು. ಆರ್ಥಿಕವಾಗ ಕುಗ್ಗಿದರು. ಕಷ್ಟದ ಸಮಯದಲ್ಲಿ ಕುಟುಂಬ ಅಥವಾ ಸ್ನೇಹಿತರ ಬೆಂಬಲ ಕೂಡ ಸಿಗದೇ ಹೋಯಿತು. ಜೀವನ ನಡೆಸಲು ಒದ್ದಾಡುತ್ತಿದ್ದ ನಿಶಾ ನೂರ್ ವೇಶ್ಯಾವಾಟಿಕೆಯ ಬಲೆಗೆ ಸಿಲುಕಿದರು. ಆಗ ದೊಡ್ಡ ನಿರ್ಮಾಪಕರೊಬ್ಬರ ಬಲವಂತದಿಂದ ನಿಶಾ ನೂರ್ ಈ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಆರೋಪಿಸಲಾಯಿತು.
ಹಲವು ವರ್ಷಗಳ ನಂತರ, ನಿಶಾ ನೂರ್ ಅಂತಿಮವಾಗಿ ದರ್ಗಾ ಒಂದರ ಹೊರಗೆ ಬೀದಿಯಲ್ಲಿ ಮಲಗಿದ್ದರು. ನಿಶಾ ನೂರ್ ಅವರನ್ನು ತಮಿಳು ಎನ್‌ಜಿಒ ಮುಸ್ಲಿಂ ಮುನ್ನೇತ್ರ ಕಳಗಂ ರಕ್ಷಿಸಿದರು. ಆಸ್ಪತ್ರೆಯಲ್ಲಿ ದಾಖಲಿಸಿದಾಗ ನಿಶಾ ನೂರ್ ಏಡ್ಸ್ ನಿಂದ ಬಳಲುತ್ತಿರುವುದು ತಿಳಿಯಿತು. ನಿಶಾ ನೂರ್ 2007 ರಲ್ಲಿ ಆಸ್ಪತ್ರೆಯಲ್ಲಿ ಏಡ್ಸ್ ವಿರುದ್ಧದ ಹೋರಾಟದಲ್ಲಿ ವಿಫಲರಾದರು. 44 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ಇದನ್ನೂ ಓದಿ:ಹೆಣ್ಣು ಮಗುವಿನ ತಾಯಿಯಾದ ಆದಿತಿ ಪ್ರಭುದೇವ.. ಯುಗಾದಿ ದಿನವೇ ಮುದ್ದು ಮಗಳ ಫೊಟೋ ಶೇರ್ ಮಾಡಿದ ನಟಿ!!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.