ನವದೆಹಲಿ: ಬಾಲಿವುಡ್ ಖಿಲಾಡಿ ಅಕ್ಷಯ ಕುಮಾರ್ ಇತ್ತೀಚಿಗೆ ತಮ್ಮ ಮುಂಬರುವ ಚಿತ್ರ 'ಸೂರ್ಯವಂಶಿ' ಕಾರಣದಿಂದ ಹೆಡ್ಲೈನ್ ನಲ್ಲಿದ್ದಾರೆ. ಆದರೆ, ಈ ಚಿತ್ರ ಬಿಡುಗಡೆಗೂ ಮುನ್ನ ಧರ್ಮದ ಹೆಸರಿನಲ್ಲಿ ಹಿಂಸಾಚಾರ ನಡೆಸುವವರಿಗೆ ತಕ್ಕ ಉತ್ತರ ನೀಡಿದ್ದಾರೆ. ಹೌದು, ಈ ಕುರಿತು ಹೇಳಿಕೆ ನೀಡಿರುವ ಅವರು ತಾವು ಯಾವುದೇ ಧರ್ಮವನ್ನು ಅನುಸರಿಸುವುದಿಲ್ಲ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ನೀಡುತ್ತಿದ್ದಂತೆ ಅಕ್ಷಯ್ ಅಭಿಮಾನಿಗಳು ಅವರನ್ನು ಪ್ರಶಂಸಿಸುವುದನ್ನು ನಿಲ್ಲಿಸುತ್ತಿಲ್ಲ.


COMMERCIAL BREAK
SCROLL TO CONTINUE READING

ಅಕ್ಷಯ ಕುಮಾರ್ ಅವರ ಮುಂಬರುವ ಚಿತ್ರ 'ಸೂರ್ಯವಂಶಿ' ಕೇವಲ ಭಾರತೀಯರಾಗುವ ಭಾವವನ್ನು ಎತ್ತಿ ಹಿಡಿಯುತ್ತದೆ. ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಓರ್ವ ATS ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಮುಂಬೈಯನ್ನು ಉಗ್ರದಾಳಿಯಿಂದ ರಕ್ಷಿಸುವ ಜವಾಬ್ದಾರಿ ನೀಡಲಾಗಿದೆ.


ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ದೇಶದಲ್ಲಿ ನಡೆಯುತ್ತಿರುವ ದಂಗೆಗಳ ಕುರಿತು  ಪ್ರಶ್ನಿಸಲಾಗಿ, ಅದಕ್ಕೆ ಉತ್ತರಿಸಿದ ಅಕ್ಷಯ "ಇದು ಕೇವಲ ಕಾಕತಾಳೀಯವಾಗಿದೆ. ನಾವು ಇದನ್ನು ಅರಿತೆ ಚಿತ್ರವನ್ನು ನಿರ್ಮಿಸಿದ್ದೇವೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ಚಿತ್ರ ತುಂಬಾ ಪ್ರಾಸಂಗಿಕವಾಗಿದೆ" ಎಂದು ಹೇಳಿದ್ದಾರೆ.


ಸಂದರ್ಶನದಲ್ಲಿ ಮುಂದುವರೆದು ಮಾತನಾಡಿರುವ ಅಕ್ಷಯ್ ಕುಮಾರ್, "ಚಿತ್ರದಲ್ಲಿ ಭಾರತೀಯ ಎಂಬ ವಿಚಾರಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಹೊರತು ಹಿಂದೂ, ಪಾರಸಿ ಅಥವಾ ಮುಸ್ಲಿಂಗಳಿಗೆ ಅಲ್ಲ. ಏಕೆಂದರೆ, ನಾವು ಚಿತ್ರವನ್ನು ಆ ಕೋನದಲ್ಲಿ ಚಿತ್ರೀಕರಿಸಿಲ್ಲ. ಚಿತ್ರವನ್ನು ಪ್ರಪಂಚ ಧರ್ಮದ ಕನ್ನಡಕ ಧರಿಸಿ ನೋಡಬಾರದು" ಎಂದಿದ್ದಾರೆ.


ತಮ್ಮ ಚಿತ್ರ ಒಂದು ಸಕಾರಾತ್ಮಕ ಚಿತ್ರವಾಗಿದೆ ಎಂದ ಅಕ್ಷಯ್, " ನಾವು ಸಕಾರಾತ್ಮಕ ಹಾಗೂ ನಕಾರಾತ್ಮಕ ಅಭಿನಯವಿರುವ ಚಿತ್ರಗಳನ್ನು ನಿರ್ಮಿಸುತ್ತೇವೆ. ಚಿತ್ರದಲ್ಲಿ ನಾನು ಕೇವಲ ತನ್ನ ಪಾತ್ರ ನಿರ್ವಹಿಸುತ್ತೇನೆ. ಎಲ್ಲ ಚಿತ್ರಗಳಲ್ಲಿ  ಎರಡು ರೀತಿಯ ಪಾತ್ರಗಳ ಇರುತ್ತವೆ ಆದರೆ, ಪ್ರೇಕ್ಷಕರು ತುಂಬಾ ಜಾಣರಾಗಿದ್ದಾರೆ" ಎಂದು ಹೇಳಿದ್ದಾರೆ.


ರೋಹಿತ್ ಶೆಟ್ಟಿ ನಿರ್ದೇಶನದ ಅಡಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಹಾಗೂ ಕತ್ರೀನಾ ಕೈಫ್ ಜೊತೆಗೆ  ಜಾಕಿ ಶ್ರಾಫ್, ಗುಲ್ಶನ್ ಗ್ರೋವರ್ ಹಾಗೋ ಸಿಕಂದರ್ ಖೇರ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಕರಣ್ ಜೋಹರ್ ಜೊತೆ ಸೇರಿ ರೋಹಿತ್ ಶೆಟ್ಟಿ ಪ್ರೊಡ್ಯೂಸ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ 'ಸಿಂಘಂ' ಅಜಯ್ ದೇವಗನ್ ಹಾಗೂ 'ಸಿಂಬಾ' ರಣವೀರ್ ಸಿಂಗ್ ಅವರ ಝಲಕ್ ಕೂಡ ನೋಡಲು ಸಿಗಲಿದೆ. ಈ ಚಿತ್ರ ಮಾರ್ಚ್ 27ಕ್ಕೆ ದೇಶಾದ್ಯಂತದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.