ಚಿಕ್ಕ ವಯಸ್ಸಿನಲ್ಲೇ ಸ್ಟಾರ್ಡಮ್.. ಅದ್ದೂರಿ ಜೀವನ.. ಕೇವಲ 24 ವರ್ಷಕ್ಕೆ ಶಾರುಖ್ ಖಾನ್ ಪುತ್ರಿ ಎಷ್ಟು ಕೋಟಿ ಆಸ್ತಿ ಗೆ ಒಡತಿ ಗೊತ್ತೇ?
Suhana Khan Net Worth: ಕೇವಲ 24 ನೇ ವಯಸ್ಸಿನಲ್ಲಿ ಸುಹಾನಾ ಖಾನ್ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದಾರೆ.
Suhana Khan Net Worth: ಬಾಲಿವುಡ್ ಕಿಂಗ್ ಶಾರುಖ್ ಖಾನ್ 100 ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಪುತ್ರಿ ಸುಹಾನಾ ಖಾನ್. ಶಾರುಖ್ ಪುತ್ರಿ ಸುಹಾನಾ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ನಂತರ ಸುಹಾನಾ ಅರ್ಡಿಂಗ್ಲಿ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ಅವರು ನ್ಯೂಯಾರ್ಕ್‌ನ ಸ್ಕೂಲ್ ಆಫ್ ಆರ್ಟ್ಸ್‌ನಿಂದ ನಟನೆಯಲ್ಲಿ ಪದವಿ ಪಡೆದರು.
ಸುಹಾನಾ ಖಾನ್ 2023 ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ “ದಿ ಆರ್ಚೀಸ್” ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಇದೀಗ ಬೆಳ್ಳಿ ತೆರೆಮೇಲೆ ಟ್ಯಾಲೆಂಟ್ ತೋರಿಸಲು ಸಿದ್ಧವಾಗಿದ್ದಾರೆ. ಸುಹಾನಾ ಖಾನ್ ತನ್ನ ತಂದೆ ಶಾರುಖ್ ಖಾನ್ ಜೊತೆಗೆ "ದಿ ಕಿಂಗ್" ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಭಾರೀ ಬಜೆಟ್‌ನಲ್ಲಿ ಆಕ್ಷನ್ ಎಂಟರ್‌ಟೈನರ್ ಆಗಿ ತಯಾರಾಗುತ್ತಿದೆ.
ಇದನ್ನೂ ಓದಿ: ಸೆಟ್ ನಲ್ಲಿ ಬಂತು ಅವಮಾನಕರ ಮಾತು ! ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ ಹೊರ ನಡೆದ ರಕ್ಷಿತಾ ಪ್ರೇಮ್
ಕೇವಲ 24 ನೇ ವಯಸ್ಸಿನಲ್ಲಿ ಸುಹಾನಾ ಖಾನ್ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದಾರೆ. ಸುಹಾನಾ ಖಾನ್ ಮೇಬೆಲಿನ್ ಮತ್ತು ಲಕ್ಸ್‌ನಂತಹ ಬ್ರಾಂಡ್‌ಗಳಿಗೆ ಜಾಹೀರಾತು ಪ್ರಚಾರಕಿಯಾಗಿದ್ದಾರೆ.
ಬ್ರ್ಯಾಂಡ್ ಪ್ರಚಾರಗಳ ಮೂಲಕ ಚಿಕ್ಕ ವಯಸ್ಸಿನಲ್ಲೇ ಅಪಾರ ಸಂಪತ್ತನ್ನು ಗಳಿಸುತ್ತಿದ್ದಾರೆ. 24 ನೇ ವಯಸ್ಸಿನ ಸುಹಾನಾ ಖಾನ್ ನಿವ್ವಳ ಮೌಲ್ಯ 13 ಕೋಟಿ ರೂಪಾಯಿ ಎಂದು ವರದಿಯಾಗಿದೆ.
ಸುಹಾನಾ ಖಾನ್ ತನ್ನ ತಂದೆಯ ಹಾದಿಯನ್ನು ಅನುಸರಿಸಿದ್ದು, ರಿಯಲ್ ಎಸ್ಟೇಟ್‌ನಲ್ಲಿ ಹೆಚ್ಚು ಹೂಡಿಕೆ ಮಾಡಿದ್ದಾರೆ. ಮುಂಬೈನ ಅಲಿಬಾಗ್‌ನ ತಾಲ್ ಗ್ರಾಮದಲ್ಲಿ12.91 ಕೋಟಿಗೆ ಫಾರ್ಮ್ ಹೌಸ್ ಖರೀದಿಸಿದ್ದಾರೆ. 1.5 ಎಕರೆಯ ಈ ಜಾಗವು 2,218 ಚದರ ಅಡಿಯ ಮೂರು ವಿಲ್ಲಾಗಳನ್ನು ಹೊಂದಿದೆ.
ಜತೆಗೆ ತಾಲ್ ಗ್ರಾಮದಲ್ಲಿಯೇ 9.5 ಕೋಟಿ ಮೌಲ್ಯದ ಮತ್ತೊಂದು ಕೃಷಿ ಭೂಮಿ ಖರೀದಿಸಿದ್ದಾರೆ. ಶಾರುಖ್ ಖಾನ್ ತನ್ನ ಮಗಳು ಸುಹಾನಾ ಖಾನ್ ಗೆ 70 ಲಕ್ಷ ಮೌಲ್ಯದ ಆಡಿ ಎ6 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇದನ್ನೂ ಓದಿ: ಈ ಸ್ಟಾರ್ ನಟ ಒಂದು ದಿನದ ಊಟಕ್ಕೆ 2 ಲಕ್ಷ ರೂಪಾಯಿ ಖರ್ಚು ಮಾಡ್ತಾರಂತೆ !
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.