Hrithik Roshan kissing Saba Azad Video Viral : ಬಾಲಿವುಡ್‌ನ ಲವ್‌ ಬರ್ಡ್ಸ್‌ ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ತಮ್ಮ ಇತ್ತೀಚಿನ ಕಿಸ್ಸಿಂಗ್ ವಿಡಿಯೋ ಮೂಲಕ ಇಂಟರ್ನೆಟ್‌ನಲ್ಲಿ ಸುದ್ದಿಯಲ್ಲಿದ್ದಾರೆ. ಏರ್‌ಪೋರ್ಟ್‌ನಲ್ಲಿ ಎಲ್ಲರೆದುರೆ ಲಿಪ್ ಲಾಕ್ ಮಾಡಿದ್ದಾರೆ. ಇದರಿಂದ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ. ಬಾಲಿವುಡ್ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ತನ್ನ ಮಾಜಿ ಪತ್ನಿ ಸುಸ್ಸಾನೆ ಖಾನ್‌ನಿಂದ ಬೇರ್ಪಟ್ಟ ನಂತರ ಸಬಾ ಆಜಾದ್ ಅವರೊಂದಿಗಿನ ಸಂಬಂಧದಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. 


COMMERCIAL BREAK
SCROLL TO CONTINUE READING

ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿದೆ, ಇದರಲ್ಲಿ ಇಬ್ಬರೂ ಚುಂಬಿಸುತ್ತಿರುವುದು ಕಂಡುಬಂದಿದೆ. ಹೃತಿಕ್ ರೋಷನ್ ಎಲ್ಲೇ ಇದ್ದರೂ ಅಲ್ಲಿ ಸಬಾ ಆಜಾದ್ ಇದ್ದೇ ಇರುತ್ತಾರೆ. ಹೃತಿಕ್ ರೋಷನ್ ಎಲ್ಲೋ ಹೋಗುತ್ತಿದ್ದಾರೆ, ಈ ವೇಳೆ ಸಬಾ ಅವರನ್ನು ನೋಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಷ್ಟರಲ್ಲಿ ಇಬ್ಬರೂ ಕಾರಿನೊಳಗೆ ಲಿಪ್‌ ಲಾಕ್‌ ಮಾಡಿದರು. ಈ ದೃಶ್ಯವನ್ನು ಕ್ಯಾಮೆರಾಗಳಲ್ಲಿ ಸೆರೆಹಿಡಿಯಲಾಗಿದೆ ಮತ್ತು ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 


ಇದನ್ನೂ ಓದಿ : ಐದು ದಿನಗಳ ‘ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ’ ತೆರೆ


ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಮತ್ತು ನಟಿ ಸಬಾ ಆಜಾದ್ ಕಳೆದ ಕೆಲವು ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಈ ಲವ್‌ ಬರ್ಡ್ಸ್‌ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲಾ ಎಲ್ಲರ ಗಮನವನ್ನು ಸೆಳೆಯುತ್ತಾರೆ. ಪ್ರೇಮ ಪಕ್ಷಿಗಳು ಸೋಮವಾರ ಮತ್ತೆ ಒಟ್ಟಿಗೆ ಕಾಣಿಸಿಕೊಂಡರು. ಹೃತಿಕ್ ಮತ್ತು ಸಬಾ ಕ್ಯಾಶುಯಲ್ ಡ್ರೆಸ್ ಧರಿಸಿದ್ದರು. ಈ ಬಿ-ಟೌನ್ ಜೋಡಿ ಎಂದಿನಂತೆ ಸುಂದರವಾಗಿ ಕಾಣುತ್ತಿದ್ದರು. ಹೃತಿಕ್ ಆಲಿವ್ ಟಿ-ಶರ್ಟ್, ಜಾಕೆಟ್ ಮತ್ತು ಕಪ್ಪು ಕಾರ್ಗೋ ಪ್ಯಾಂಟ್ ಧರಿಸಿದ್ದರು. ವಿಡಿಯೋ ವೈರಲ್ ಆದ ಬಳಿಕ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೃತಿಕ್ ಹಾಗೂ ಸಬಾ ಕಿಸ್ ಚರ್ಚೆ ಜೋರಾಗಿದೆ. 


 



 


2022 ರ ಆರಂಭದಲ್ಲಿ ಮುಂಬೈನಲ್ಲಿ ಹೃತಿಕ್ ಮತ್ತು ಸಬಾ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡರು. ಅಂದಿನಿಂದ, ಸಬಾ, ಹೃತಿಕ್ ಜೊತೆ ವಿವಿಧ ಕಾರ್ಯಕ್ರಮಗಳು ಮತ್ತು ಕುಟುಂಬ ಕೂಟಗಳಲ್ಲಿ ಸೇರಿಕೊಂಡರು. ಜೊತೆಗೆ ದೀಪಾವಳಿ ಮತ್ತು ಕ್ರಿಸ್‌ಮಸ್ ಹಬ್ಬಗಳನ್ನು ಒಟ್ಟಿಗೆ ಆಚರಿಸಿದರು. ಅವರು ಆಗಾಗ್ಗೆ ನಗರದಲ್ಲಿ ಕಾಣಿಸಿಕೊಳ್ಳುತ್ತಾರೆ. ಸಬಾ ಅವರು ವಿವಿಧ ಸಂದರ್ಭಗಳಲ್ಲಿ ಹೃತಿಕ್ ಅವರ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತಿದ್ದಾರೆ.


ಇದನ್ನೂ ಓದಿ : ಅದಕ್ಕಾಗಿಯೇ ಬದುಕುತ್ತೇವೆ.. ಅದನ್ನೇ ಮಾಡಲು ಇಷ್ಟಪಡ್ತೇವೆ.. ಗೆಳೆಯನ ಮೇಲೆ ಶ್ರುತಿ ಹಾಸನ್‌ ಲವ್‌


ಹೃತಿಕ್ ಮುಂದಿನ 'ಫೈಟರ್' ನಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ಅನಿಲ್ ಕಪೂರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಳೆದ ತಿಂಗಳು ತಮ್ಮ ಹುಟ್ಟುಹಬ್ಬದಂದು ಹೃತಿಕ್ ತಮ್ಮ ಅಭಿಮಾನಿಗಳೊಂದಿಗೆ ಆನ್‌ಲೈನ್‌ನಲ್ಲಿ ಸಂವಾದ ನಡೆಸಿದರು. ಸಂಭಾಷಣೆಯ ಸಮಯದಲ್ಲಿ, ಅವರು ಚಿತ್ರದ ಬಗ್ಗೆ ವಿವರಗಳನ್ನು ಹಂಚಿಕೊಂಡರು ಮತ್ತು "ನಾವು ನೈಜ ಯುದ್ಧವಿಮಾನಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ನಾವು ಸುಖೋಯ್ನಲ್ಲಿ ಶೂಟ್ ಮಾಡಿದ್ದೇವೆ. ಭಾರತೀಯ ವಾಯುಪಡೆಯ ಸುತ್ತಲೂ ಇರುವುದು ತುಂಬಾ ಸ್ಫೂರ್ತಿದಾಯಕವಾಗಿದೆ. ಅವರಿಂದ ಕಲಿಯಲು ತುಂಬಾ ಇದೆ. ಬಾಡಿ ಲಾಂಗ್ವೇಜ್‌, ಶಿಸ್ತು, ಅವರ ಧೈರ್ಯ ಮತ್ತು ಬುದ್ಧಿವಂತಿಕೆ ಎಲ್ಲವೂ ಸ್ಫೂರ್ತಿದಾಯಕ" ಎಂದಿದ್ದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.