ಮುಂಬೈ: ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಬಿ-ಟೌನ್ ನಲ್ಲಿ ತನ್ನ ಫ್ರಾಂಕ್ ನೆಸ್ ಗಾಗಿ ಹೆಸರುವಾಸಿಯಾಗಿದ್ದಾರೆ. ಉತ್ತಮ ಅಭಿನಯಕ್ಕಾಗಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ಕಂಗಾನಾ, ಇತ್ತೀಚೆಗೆ ಹೃತಿಕ್ ರೋಶನ್ ಅವರ ಮೇಲೆ ಆರೋಪ ಮಾಡಿ ಬಹಳ ಕಾಲದವರೆಗೆ ಚರ್ಚೆಯಲ್ಲಿದ್ದರು.  ಸದ್ಯ ಅವರು ಅಭಿನಯಿಸಿರುವ 'ಪಂಗಾ' ಚಿತ್ರ ಬಿಡುಗಡೆಯಾಗುತ್ತಿದ್ದು, ಕಂಗನಾ ತಮ್ಮ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತೀಚೆಗಷ್ಟೇ ಕಂಗನಾ ವಿವಾಹದ ಕುರಿತು ತಮ್ಮ ವಿಚಾರ ವ್ಯಕ್ತಪಡಿಸಿದ್ದಾರೆ


COMMERCIAL BREAK
SCROLL TO CONTINUE READING

ಬಾಲಿವುಡ್ ನ ವ್ಯಕ್ತಿಯೊಬ್ಬರು ತಮ್ಮನ್ನು ಜೀವನದಲ್ಲಿ  ಮದುವೆಯಾಗಿ ಸೆಟ್ಲ್ ಆಗಲು ತಮ್ಮನ್ನು ಒಲಿಸಿದ್ದಾರೆ ಎಂದು ಕಂಗನಾ ಹೇಳಿದ್ದಾರೆ. ಅಷ್ಟೇ ಅಲ್ಲ, ಆ ವ್ಯಕ್ತಿ ಈಗಾಗಲೇ ವಿವಾಹಿತರಾಗಿದ್ದಾರೆ ಎಂದೂ ಕೂಡ ಹೇಳಿದ್ದಾರೆ. ಕಂಗನಾ ತನ್ನ ಕನಸಿನ ರಾಜಕುಮಾರನನ್ನು ಹುಡುಕಿದ್ದಾಳೆ ಎಂಬ ನಿಷ್ಕರ್ಷಕ್ಕೆ ಬರುವ ಮುನ್ನ ಸ್ವಲ್ಪ ತಾಳಿ. ಏಕೆಂದರೆ, ಕಂಗನಾ ಇಲ್ಲಿ ಹೇಳುತ್ತಿರುವುದು ಬೇರೆ ಯಾರ ವಿಷಯವೂ ಅಲ್ಲ. ಕಂಗನಾ ಮಾತನಾಡುತ್ತಿರುವುದು ಬೇರೆ ಯಾರ ವಿಷಯವೂ ಅಲ್ಲ. ಕಂಗನಾ ಅವರ ಮುಂಬರುವ ಚಿತ್ರ 'ಪಂಗಾ' ನಿರ್ದೇಶಕಿ ಅಶ್ವಿನಿ ಅಯ್ಯರ್ ಅವರ ಪತಿ ಹಾಗೂ ನಿರ್ಮಾಪಕ ನಿತೇಶ್ ತಿವಾರಿ ಬಗ್ಗೆ.


ಈ ಕುರಿತು ಮಾತನಾಡಿರುವ ಕಂಗನಾ "ಈ ಮೊದಲು ನಾನು ನನ್ನ ಲೆವಲ್ ನ ಓರ್ವ ವ್ಯಕ್ತಿಯ ಹುಡುಕಾಟದಲ್ಲಿದ್ದೆ. ಆದರೆ, ಅದು ತುಂಬಾ ಕಷ್ಟಕರವಾಗಿದೆ.  ನಿತೇಶ್ ತಿವಾರಿ ಅವರನ್ನು ಭೇಟಿಯಾದ ಬಳಿಕ ಮತ್ತು ಅವರ ವೈವಾಹಿಕ ಜೀವನದಲ್ಲಿನ ಸೌಹಾರ್ದತೆ ಮತ್ತು ಪ್ರೀತಿ ನೋಡಿದ ಬಳಿಕ, ಮದುವೆಯ ಬಗ್ಗೆ ನಾನು ತಳೆದ ನಿಲುವಿನಲ್ಲಿ ಬದಲಾವಣೆ ಬಂದಿದೆ. ನಿತೇಶ್ ಮುಕ್ತವಾಗಿ ತಮ್ಮ ಪತ್ನಿಯನ್ನು ಸಮರ್ಥಿಸುತ್ತಾರೆ. ಸದ್ಯ ನಾನು ಮದುವೆಯ ಕುರಿತು ಸಕಾರಾತ್ಮಕ ಭಾವ ಹೊಂದಿದ್ದೇನೆ ಅಂತ ನನಗನಿಸುತ್ತದೆ" ಎಂದು ಕಂಗನಾ ಹೇಳಿದ್ದಾರೆ.


ಇತ್ತೀಚೆಗಷ್ಟೇ ಕಂಗನಾ ಅಭಿನಯದ 'ಪಂಗಾ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಭಾರಿ ಚರ್ಚೆ ಹುಟ್ಟುಹಾಕಿದೆ. ಟ್ರೈಲರ್ ಬಿಡುಗಡೆಗೂ ಕೆಲ ದಿನ ಮೊದಲು ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಈ ಚಿತ್ರ ಜಯ್ (ಕಂಗನಾ ರಣಾವತ್) ಸಂಘರ್ಷದ ಕಥೆಯಾಗಿದ್ದು, ಜಯ್ ಓರ್ವ ಭಾರತೀಯ ಕಬಡ್ಡಿ ಆಟಗಾರ್ತಿಯಾಗಿದ್ದಾಳೆ. ಒಂದು ಕಾಲದಲ್ಲಿ ಭಾರತದ ಮಹಿಳಾ ಕಬಡ್ಡಿ ಟೀಂ ನಾಯಕಿಯಾಗಿದ್ದ ಜಯ್, ಇದೀಗ ಮದುವೆಯಾಗಿ ಜೀವನದಲ್ಲಿ ಸೆಟಲ್ ಆಗಿದ್ದಾಳೆ.



ಕಂಗನಾ ರಣಾವತ್ ಅವರಿಂದ ಆರಂಭವಾಗುವ ಈ ಟ್ರೈಲರ್ ನಲ್ಲಿ ಕಂಗನಾ ಕಬ್ಬಡ್ಡಿ ಆಟಗಾರ್ತಿ ಜಯ್  ಅವರ ಟಿಶರ್ಟ್ ಹಿಡಿದಿರುವುದನ್ನು ತೋರಿಸಲಾಗಿದೆ. ನಂತರ ದೃಶ್ಯ ಬದಲಾಗುತ್ತಿದ್ದು, ಹೊಸ ದೃಶ್ಯದಲ್ಲಿ ಜಯ್ ಓರ್ವ ಗೃಹಿಣಿ ಹಾಗೂ ಓರ್ವ ಮಗುವಿನ ತಾಯಿಯಾಗಿರುವುದನ್ನು ತೋರಿಸಲಾಗಿದೆ. ಆದರೆ, ಓರ್ವ ಆಟಗಾರ್ತಿಯಾಗಿ ಜಯ್ ಕಳೆದ ಕಾಲ ಅವಳ ಮನಸ್ಸಿನಲ್ಲಿ ಹಾಗೆಯೇ ಉಳಿದಿರುವುದನ್ನು ತೋರಿಸಲಾಗಿದೆ. ಈ ಚಿತ್ರದಲ್ಲಿ ರಿಚಾ ಚಡ್ಡಾ ಹಾಗೂ ನೀನಾ ಗುಪ್ತಾ ಕೂಡ ಮುಖ್ಯ ಭೂಮಿಕೆಯಲ್ಲಿ ಕಂಡುಬಂದಿದ್ದಾರೆ. ಟ್ರೈಲರ್ ನ ಹಲವು ದೃಶ್ಯಗಳು ಭಾವತಾತ್ಮಕವಾಗಿ ನಿಮ್ಮನ್ನು ಕಟ್ಟಿಹಾಕಲಿವೆ. ಫೆಬ್ರವರಿ 24ರಂದು ಬಿಡುಗಡೆಯಾಗಲಿರುವ ಈ ಚಿತ್ರ ವರುಣ್ ಧವನ್ ಹಾಗೂ ಶೃದ್ಧಾ ಕಪೂರ್ ಅಭಿನಯದ 'ದಿ ಸ್ಟ್ರೀಟ್ ಡ್ಯಾನ್ಸರ್ 3ಡಿ'ಗೆ ತೀವ್ರ ಪೈಪೋಟಿ ನೀಡಲಿದೆ ಎನ್ನಲಾಗಿದೆ.